ಮಂಗಳವಾರ ನಾಲ್ಕು ಗಂಟೆಗೂ ಹೆಚ್ಚು ಕಾಲ ಪರ್ಪಲ್ ಲೈನ್‌ನಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಮ್ಮ ಮೆಟ್ರೋ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ದಿನ ನಿತ್ಯ ಕಚೇರಿಗಳಿಗೆ ಹೋಗಲು ನಮ್ಮ ಮೆಟ್ರೋವನ್ನು ಬಳಸುವ ಸಾವಿರಾರು ಪ್ರಯಾಣಿಕರು ಇಂದು ಪರದಾಡುವಂತಾಗಿದೆ.
ಈ ವರ್ಷ ಮೆಟ್ರೋ ಕಾರಿಡಾರ್‌ನಲ್ಲಿ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಬೆಳಗ್ಗೆ 6.14 ಕ್ಕೆ ಸಮಸ್ಯೆ ಪತ್ತೆಯಾಗಿದ್ದು ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ 8.30 ರ ಸುಮಾರಿಗೆ 'ಎಕ್ಸ್' ಪೋಸ್ಟ್ ಮೂಲಕ ಪ್ರಯಾಣಿಕರನ್ನು ತಲುಪಿದೆ.

ರೈಲು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಅಡಚಣೆ ಕಂಡುಬಂದ ನಂತರ ಎಕ್ಸ್ ಮೂಲಕ ತಿಳಿಸಲಾಗಿದ್ದರೂ ಕೂಡಾ ಅನೇಕ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ತಲುಪಿದ ಬಳಿಕವೇ ಅಡಚಣೆಯ ಬಗ್ಗೆ ತಿಳಿದುಕೊಂಡಿದ್ದಾರೆ. ಅಡೆತಡೆಗಳ ನಂತರ ಹೆಚ್ಚುವರಿ ಬಸ್ ಸೇವೆಗಳನ್ನು ನಡೆಸಲು ಬಿಎಂಟಿಸಿಗೆ ಬಿಎಂಆರ್‌ಸಿಎಲ್ ತಿಳಿಸಿಲ್ಲ. ಆದ್ದರಿಂದಾಗಿ ಪ್ರಯಾಣಿಕರಿಗೆ ಪರ್ಯಾಯ ಆಯ್ಕೆಗಳು ಇಲ್ಲದಂತಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಅಡಚಣೆಗಳಿಂದ ಬೈಯಪ್ಪನಹಳ್ಳಿ-ಗರುಡಾಚಾರ್‌ಪಾಳ್ಯ ಮಾರ್ಗದಲ್ಲಿ ರೈಲುಗಳು ನಿಧಾನವಾಗಿ ಚಲಿಸಿದವು, ಕ್ಯಾಸ್ಕೇಡಿಂಗ್ ಪರಿಣಾಮವು ಮಾರ್ಗದ ಇತರ ಭಾಗಗಳಿಗೆ ಹರಡಿತು. ಮೆಜೆಸ್ಟಿಕ್ ಇಂಟರ್‌ಚೇಂಜ್‌ನಲ್ಲಿ, ರೈಲುಗಳು ನಿಗದಿತ ಸಮಯಕ್ಕಿಂತ ಹಿಂದೆ ಓಡುತ್ತಿದ್ದರಿಂದ ನೂರಾರು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹೊತ್ತು ನಿಂತಿದ್ದರಿಂದ ಉದ್ಯೋಗಕ್ಕೆ ಹೋಗುವವರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೀವ್ರ ಅನನುಕೂಲತೆ ಎದುರಿಸಿದರು.
ಹತ್ತುತ್ತಿರುವ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗಳಲ್ಲಿ ತುಂಬಿದ್ದು, ಇಳಿಯುವ ಪ್ರಯಾಣಿಕರು ನಿಲ್ದಾಣದಿಂದ ಹೊರಬರಲು ಹರಸಾಹಸ ಪಡಬೇಕಾಯಿತು. ಮೆಟ್ರೋ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ವಾಗ್ವಾದಕ್ಕಿಳಿದಿರುವುದು ಕಂಡು ಬಂದಿದೆ. ಮೆಟ್ರೊ ಅಧಿಕಾರಿಗಳು ವಿಳಂಬದ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡಿಲ್ಲ ಎಂದು ನಿಲ್ದಾಣಗಳಲ್ಲಿ ಸಿಲುಕಿರುವ ಜನರು ದೂರಿದರು.
ಈ ಬಗ್ಗೆ ಡೆಕ್ಕನ್ ಹೆರಾಲ್ಡ್‌ಗೆ ಪ್ರತಿಕ್ರಿಯೆ ನೀಡಿದ ಪ್ರಯಾಣಿಕ ಸುಧೀಂದ್ರ, "ವೈಟ್‌ಫೀಲ್ಡ್ ಕಡೆಗೆ ರೈಲು ಬಹಳ ನಿಧಾನವಾಗಿ ಚಲಿಸಿತು ಮತ್ತು ಪ್ರತಿ ನಿಲ್ದಾಣದಲ್ಲಿ ಹೆಚ್ಚು ಕಾಲ ನಿಂತಿದೆ. ಪ್ರಯಾಣಿಕರಿಗೆ ಸೇವೆಗಳ ವಿಳಂಬದ ಬಗ್ಗೆ ಸುಳಿವಿಲ್ಲ. ಮೆಟ್ರೋ ಕಾರ್ಯಾಚರಣೆಗಳು ತಾಂತ್ರಿಕ ಸಮಸ್ಯೆಗಳಿಂದ ಅಡಚಣೆಗಳನ್ನು ಕಾಣುತ್ತವೆ. ಆದರೆ ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ನೀಡಿದರೆ ಪ್ರಯಾಣಿಕರಿಗೆ ಸಹಾಯವಾಗುತ್ತದೆ. ಪರ್ಯಾಯ ವಿಧಾನವನ್ನು ಪ್ರಯಾಣಿಕರು ಆಗ ನೋಡಬಹುದಾಗಿದೆ," ಎಂದು ತಿಳಿಸಿದರು.
ಮತ್ತೋರ್ವ ಪ್ರಯಾಣಿಕರಾದ ಸೌಮ್ಯ ಕೆ, "ಹೆಚ್ಚಿನ ಅಡೆತಡೆಗಳು ಉಂಟಾದಾಗ, ನಿಲ್ದಾಣವನ್ನು ಪ್ರವೇಶಿಸುವ ಮೊದಲು ಪ್ರಯಾಣಿಕರಿಗೆ ತಿಳಿಸಲು ಯಾಂತ್ರಿಕ ವ್ಯವಸ್ಥೆ ಇರಬೇಕು. ಇದು ಅವರಿಗೆ ಇತರ ಆಯ್ಕೆಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್‌ಗೆ ತಲುಪುವವರೆಗೂ ಯಾವುದೇ ಮಾಹಿತಿಯಿಲ್ಲ. ಇದು ಅತೀಯಾದ ಕಿರಿಕಿರಿ, ತೊಂದರೆಯನ್ನು ಉಂಟು ಮಾಡಿದೆ," ಎಂದು ಹೇಳಿದ್ದಾರೆ.


Click it and Unblock the Notifications