Namma Metro: ಮೆಟ್ರೋ ಹಂತ 2 ವಿಳಂಬ! ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಹಲವು ಸವಾಲು.. ಸಮಸ್ಯೆಗಳೇನು ಗೊತ್ತಾ?

ನಮ್ಮ ಮೊಟ್ರೋ ಬೆಂಗಳೂರಿನ ಸಂಚಾರ ಜೀವನಾಡಿ. ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಮ್ಮ ಮೊಟ್ರೋ ಜಾಲ ವಿಸ್ತರಣೆ ನಡೆಯುತ್ತಲೇ ಇದೆ. ಆದರೆ, ಕೆಲವೊಂದು ಮಾರ್ಗಗಳು ಹಲವು ಸವಾಲುಗಳಿಂದಾಗಿ ವಿಳಂಬವನ್ನು ಎದುರಿಸುತ್ತಿವೆ. ಅದರಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ ಕೂಡ ಒಂದು. ಹಾಗಿದ್ರೆ, ಯಾವೆಲ್ಲಾ ಸಮಸ್ಯೆಗಳಿಂದ ಎಡರನೇ ಹಂತದ ಮೆಟ್ರೋ ಅನುಭವಿಸುತ್ತಿದೆ? ಇದರಲ್ಲಿ ಯಾವ ಯಾವ ಮಾರ್ಗಗಳಿವೆ? ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ಹೌದು,ಬಿಎಂಆರ್‌ಸಿಎಲ್ (BMRCL) ಮೆಟ್ರೋ ಹಂತದ ಯೋಜನೆಯು 2030ರ ವೇಳೆಗೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಬೇಕೆಂಬ ಗುರಿಯನ್ನು ಹೊಂದಿದೆ.ಆದರೆ ಹಲವಾರು ಸವಾಲುಗಳು ಹಾಗೂ ಸಮಸ್ಯೆಗಳಿಂದ ಈ ಮಾರ್ಗದ ಆರಂಭ ವಿಳಂಬವನ್ನು ಎದುರಿಸುತ್ತಿವೆ. ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಹಲವು ಸವಾಗಳು ಎದುರಾಗಿವೆ ಅವು ಯಾವುವು ಎಂಬುವದನ್ನು ತಿಳಿಯಲು ಮಂದೆ ಓದಿ.

ಮೆಟ್ರೋ ಹಂತ 2 ವಿಳಂಬ! ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಕ್ಕೆ ಸವಾಲು

ಭೂಸ್ವಾಧೀನ ಸಮಸ್ಯೆಗಳು: ಕಟ್ಟಡಗಳು,ರಸ್ತೆ ಮತ್ತು ಮೂಲಸೌಕರ್ಯಗಳ ನಡುವೆ ಭೂಮಿಯನ್ನು ಪಡೆಯುವುದು ಸಹ ಕಷ್ಟವಾಗುತ್ತದೆ. ನಾಗರಿಕರಿಗೆ ತೊಂದರೆಯಾಗದಂತೆ ಕಾರ್ಯವನ್ನು ನಿರ್ವಹಿಸುವುದು ದೊಡ್ಡ ಸಾವಲಾಗಿದೆ.

ಮರಗಳನ್ನು ಕಡಿಯಲು ಅನುಮತಿ ಪಡೆಯುವಲ್ಲಿ ವಿಳಂಬ: ಮೆಟ್ರೋ ಹಂತ 2 ನೇ ಮಾರ್ಗದಲ್ಲಿ ಹೆಚ್ಚಿನ ಗಿಡಮರಗಳು ಇರುವುದರಿಂದ ಕಡಿಯಲು ಅನುಮತಿಯನ್ನು ತಡವಾಗಿ ಸಿಕ್ಕಿರುವುದರ ಪರಿಣಾಮವಾಗಿ ಕಾಮಗಾರಿಗಳು ಮಂದಗತಿಯಲ್ಲ ಸಾಗಿದೆ.

ರೈಲುಗಳೂ ಬೋಗಿಗಳ ಕೊರತೆ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತನ್ನ ಎರಡನೇ ಹಂತದ ಮೆಟ್ರೋ ಯೋಜನೆಗೆ ಅಗತ್ಯವಿರುವಷ್ಟು ರೈಲು ಬೋಗಿಗಳನ್ನು ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಮೆಟ್ರೋ ರೈಲುಗಳ ಕೊರತೆಯು ಕಾಮಗಾರಿಗೆ ಅಡಿನ್ನು ಉಂಟುಮಾಡಿದೆ.

ಮೆಟ್ರೋ ಹಂತ 2 ದಲ್ಲಿ ಮೆಟ್ರೋ ರೈಲುಗಳು ಸಂಚಾರವನ್ನು ಕಳೆದ ವರ್ಷವೇ ಆರಂಭಿಸಬೇಕಾಗಿತ್ತು. ಸಿವಿಲ್ ಕೆಲಸ ಪೂರ್ಣಗೊಂಡಿದ್ದರೂ, ರೈಲು ಸೆಟ್‌ಗಳ ಕೊರತೆ ಇದೆ. ಇಲ್ಲಿಯವರೆಗೆ ಕೇವಲ ಎರಡು ರೈಲುಗಳು ಮಾತ್ರ ಬಂದಿವೆ. ಮೂರನೇ ಸೆಟ್ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಬಿಎಂಆರ್‌ಸಿಎಲ್ ರೈಲು ಬೋಗಿಗಳು ಬಂದ ತಕ್ಷಣವೇ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು.

ಪಿಂಕ್‌ ಲೈನ್‌ ಮೆಟ್ರೋ

ಗುಲಾಬಿ (ಕಳೇನ ಅಗ್ರಹಾರದಿಂದ ನಾಗವಾರ) ಈ ಮಾರ್ಗವನ್ನು ಮಾರ್ಚ್ 2024 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಈಗಾಗಲೇ ಸುರಂಗ ಮಾರ್ಗದ ಕೆಲಸ ಸಂಪೂರ್ಣವಾಗಿ ಮುಗಿದಿದೆ. ಭೂಗತ ನಿಲ್ದಾಣದ ಶೇ. 90ರಷ್ಟು ಕೆಲಸಗಳು ಪೂರ್ಣಗೊಂಡಿದೆ. ಹಳಿಗಳ ನಿರ್ಮಾಣ ಕಾರ್ಯ ಈಗ ಪ್ರಗತಿಯಲ್ಲಿದೆ. ಪ್ರಗತಿಯ ಹೊರತಾಗಿಯೂ, ಸೇವೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಎಂವ ಯಾವುದೆ ವಿಶ್ವಾಸ ಇಲ್ಲ ಎಂದು ತಜ್ಜರು ಹೇಳಿದ್ದಾರೆ.

ನೀಲಿ ಮಾರ್ಗ

ನೀಲಿ ಮಾರ್ಗದ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ) ಕೆಲಸ ಇನ್ನೂ ಪೂರ್ಣವಾಗಿಲ್ಲ. ಕಂಬಗಳು ಮತ್ತು ವಯಾಡಕ್ಟ್‌ಗಳನ್ನು ನಿರ್ಮಿಸಲಾಗುತ್ತಿದ್ದರೂ, ನಿಲ್ದಾಣದ ನಿರ್ಮಾಣವು ನಿಧಾನವಾಗಿ ಸಾಗುತ್ತಿವೆ. ಯೋಜನೆಯ ಪೂರ್ಣವಾಗುವ ದಿನವನ್ನು 2027ಕ್ಕೆ ಮುಂದೂಡಲಾಗಿದೆ.

ಹಳದಿ ಮಾರ್ಗ

ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮಾರ್ಗದ ಮೆಟ್ರೋ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.ಇದೀಗ ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ರೋಲಿಂಗ್ ಸ್ಟಾಕ್‌ಗೆ ರೈಲ್ವೆ ಮಂಡಳಿಯಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ 19.15-ಕಿಮೀ ಕಾರಿಡಾರ್‌ಗೆ ಇದು ಮಹತ್ವದ ಹೆಜ್ಜೆಯಾಗಿದೆ. ಈ ಮಾರ್ಗವು ಬೆಂಗಳೂರಿನ ಐಟಿ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಜೂನ್‌ ತಿಂಗಳಲ್ಲಿ ಮೆಟ್ರೋ ರೈಲುಗಳು ಓಡಾಟ ನಡೆಸುತ್ತಿವೆ.

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದ ಎರಡನೇ ಹಂತದ ಅಡಿಯಲ್ಲಿ 75.09 ಕಿ.ಮೀ. ಅಭಿವೃದ್ಧಿಪಡಿಸುತ್ತಿದೆ. ಮುಂದಿನ ವರ್ಷದ ವೇಳೆಗೆ ಕೇವಲ 41 ಕಿ.ಮೀ. ಮಾತ್ರ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿರ್ಮಾಣ ಪೂರ್ಣಗೊಂಡರೂ ಕಾರ್ಯಾಚರಣೆಗಳು ತಕ್ಷಣ ಪ್ರಾರಂಭವಾಗದಿರಬಹುದು.

FAQs
ಎರಡನೇ ಹಂತದ ಮೆಟ್ರೋ ಯೋಜನೆಗೆ ಯಾವ ಸವಾಲುಗಳು ಎದುರಿಸುತ್ತವೆ?

ಎರಡನೇ ಹಂತದ ಮೆಟ್ರೋ ಯೋಜನೆಗೆ ಕೆಲವೊಂದು ಸವಾಲುಗಳು ಮತ್ತು ವಿಳಂಬಗಳು ಎದುರಾಗುತ್ತವೆ.

GoodReturns Finance

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+