Namma Metro Phase 2: ನಮ್ಮ ಮೆಟ್ರೋ (Namma Metro) ಎರಡನೇ ಹಂತದ ವೆಚ್ಚವನ್ನು 9,729.90 ಕೋಟಿ ಹೆಚ್ಚಿಸುವ ಪ್ರಸ್ತಾವನೆಗೆ ನಿನ್ನೆ(ಮೇ.22) ರಂದು ರಾಜ್ಯ ಸಚಿವ ಸಂಪುಟ ಅನುಮೋದನೆಯನ್ನು(karnataka cabinet) ಕೊಟ್ಟಿದೆ.
ಹೌದು,ಬಹುನಿರೀಕ್ಷಿತ ನಮ್ಮ ಮೆಟ್ರೋ ಎರಡನೇ ಹಂತ(Namma Metro Phase 2)ನಾಲ್ಕು ವಿಸ್ತರಣೆಗಳು ಮತ್ತು ಎರಡು ಹೊಸ ಮಾರ್ಗಗಳನ್ನು ಒಳಗೊಂಡಿರುವ ಎರಡನೇ ಹಂತದ ಕಾಮಗಾರಿಗೆ ಈ ಹಿಂದೆ ಅಂದಾಜು ಸುಮಾರು 30,695.12 ಕೋಟಿ ರೂ. ಎಂದು ಹೇಳಿತ್ತು.ಈಗ 40,425 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಚಿನ ಸಂಪುಟದ ಸಭೆಯ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂಪುಟದ ನಿರ್ಧಾರಗಳನ್ನು ಹೇಳಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಪರಿಷ್ಕೃತ ವೆಚ್ಚವನ್ನು 40,614.27 ಕೋಟಿ ರೂ. ಎಂದು ಅಂದಾಜಿಸಿತ್ತು. ಡಿಸೆಂಬರ್ 4, 20124 ರಂದು ಸಚಿವ ಸಂಪುಟವು ಈ ಪ್ರಸ್ತಾವನೆಯನ್ನು ಚರ್ಚಿಸಿತು, ಆದರೆ ನಿರ್ಧಾರವನ್ನು ಮುಂದೂಡಿಕೆಯನ್ನು ಮಾಡಿತ್ತು ಆದರೆ ಅಂತಮ ನಿರ್ಧಾರವನ್ನು ಸಚಿವ ಸಂಪುಟಕ್ಕೆ ತಿಳಿಸಿದೆ.
ನಮ್ಮ ಮೆಟ್ರೋದ ಎರಡನೇ ಹಂತದ ಪ್ರಸ್ತಾವನೆಯ ವಿವರವಾದ ಪರಿಶೀಲನೆ ನಡೆಸಲು ಫೆಬ್ರವರಿ 6, 2025 ರಂದು ರಚಿಸಲಾದ ತಾಂತ್ರಿಕ ತಜ್ಞರ ಸಮಿತಿಯು ಏಪ್ರಿಲ್ 29 ರಂದು ತನ್ನ ವರದಿಯನ್ನು ಸಲ್ಲಿಸಿತು ಮತ್ತು ಪ್ಲಾಟ್‌ಫಾರ್ಮ್ ಸ್ಕಿನ್ ಬಾಗಿಲುಗಳ (PSDs) ವೆಚ್ಚವನ್ನು ಹೊರತುಪಡಿಸಿ ಪ್ರಸ್ತಾವನೆಯಿಂದ 189.25 ಕೋಟಿ ರೂ.ಗಳನ್ನು ಕಡಿತಗೊಳಿಸಿತು. ನೇರಳೆ ಮಾರ್ಗದಲ್ಲಿ ಬರುವಂತಹ ಭೂಗತ ನಿಲ್ದಾಣಗಳು ಮತ್ತು ಹಳದಿ ಲೈನ್‌ನಲ್ಲಿರುವ ಇನ್ಫೋಸಿಸ್ ನಿಲ್ದಾಣಗಳು ಮಾತ್ರ ಪಿಎಸ್‌ಡಿಗಳನ್ನು ಪಡೆಯುತ್ತವೆ.ಮುಂದಿನ ಹಂತಗಳಲ್ಲಿ ಪಿಎಸ್‌ಡಿಗಳ ವೆಚ್ಚವನ್ನು ಸೇರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳೀಸಿದ್ದಾರೆ.
2014 ರಲ್ಲಿ ಎರಡನೇ ಹಂತಕ್ಕೆ ಅನುಮೋದನೆ ನೀಡಿದಾಗ, ಅದರ ವೆಚ್ಚವನ್ನು 26,405.14 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂರು ವರ್ಷಗಳ ನಂತರ, ಕರ್ನಾಟಕವು 6,293.16 ಕೋಟಿ ರೂ.ಗಳ ಪರಿಷ್ಕೃತ ಭೂ ವೆಚ್ಚವನ್ನು ಪೂರೈಸಲು ಹೆಚ್ಚುವರಿ ಅಧೀನ ಸಾಲವನ್ನು ಅನುಮೋದಿಸಿತು.ನಂತರ ವೆಚ್ಚವನ್ನು 30,695.12 ಕೋಟಿ ರೂ.ಗಳಿಗೆ ಪರಿಷ್ಕರಿಸಲಾಯಿತು. ಹೆಚ್ಚಿನ ನಾಗರಿಕ ಕೆಲಸ ಮತ್ತು ಭೂಸ್ವಾಧೀನ ವೆಚ್ಚಗಳು ವೆಚ್ಚವನ್ನು ಮತ್ತಷ್ಟು ಹೆಚ್ಚಿಗೆ ಮಾಡಲಾಗಿದೆ.
ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ನೇರಳೆ ಮಾರ್ಗವನ್ನು ವಿಸ್ತರಿಸಿದ ಕಾರಣ ಮತ್ತು ಹೊಸ ನಿಲ್ದಾಣವನ್ನು ಸೇರಿಸಿದ ಕಾರಣ, ಎರಡನೇ ಹಂತದ ಒಟ್ಟು ಉದ್ದವು 72.095 ಕಿ.ಮೀ.ಗಳಿಂದ 75.09ಕಿ.ಮೀ.ಗೆ ರವರೆಗೆ ಏರಿಕೆ ಆಗಿತ್ತು. ಡಿಪೋವನ್ನು ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಸ್ಥಳಾಂತರಿಸಲಾಯಿತು. ಸಿವಿಲ್ ಕೆಲಸಕ್ಕಾಗಿಯೇ 4,408.73 ಕೋಟಿ ರೂ. ವೆಚ್ಚವಾಯಿತು.
ಪರಿಷ್ಕೃತ ಅಂದಾಜಿನ ಪ್ರಕಾರ, ಎರಡನೇ ಹಂತವು ಪ್ರತಿ ಕಿಲೋಮೀಟರ್‌ಗೆ 538.56 ಕೋಟಿ ರೂ. ವೆಚ್ಚವಾಗಲಿದೆ. ಈ ದೃಷ್ಟಿಕೋನದಿಂದ ಹೇಳುವುದಾದರೆ, ಮೊದಲ ಹಂತ (42.3 ಕಿಮೀ; 14,133.11 ಕೋಟಿ ರೂ.) ಪ್ರತಿ ಕಿಲೋಮೀಟರ್‌ಗೆ 334.11 ಕೋಟಿ ರೂ. ವೆಚ್ಚವಾಗಲಿದೆ.
ಎರಡನೇ ಹಂತದ ನಿರ್ಮಾಣವು ಫೆಬ್ರವರಿ 2016 ರಲ್ಲಿ ಪ್ರಾರಂಭವಾಯಿತು ಮತ್ತು 2020ರವರೆಗೆ ಪೂರ್ಣಗೊಳಲು ಸಮಯವನ್ನು ನೀಡಲಾಗಿತ್ತು. ಒಟ್ಟು 34.65 ಕಿ.ಮೀ. ಉದ್ದದ ನಾಲ್ಕು ವಿಸ್ತರಣೆಗಳು ಕಾರ್ಯರೂಪಕ್ಕೆ ಬಂದಿವೆ, ಆದರೆ ಎರಡು ಹೊಸ ಮಾರ್ಗಗಳು (ಹಳದಿ ಮತ್ತು ಗುಲಾಬಿ) ಇನ್ನೂ ನಿರ್ಮಾಣ ಹಂತದಲ್ಲಿವೆ. ಹಳದಿ ಮಾರ್ಗ (19.15ಕಿ.ಮೀ) ಈ ವರ್ಷದ ಕೊನೆಯಲ್ಲಿ ತೆರೆಯುವ ನಿರೀಕ್ಷೆಯಿದೆ, ಆದರೆ ಗುಲಾಬಿ ಮಾರ್ಗ (21.26ಕಿ.ಮೀ) 2026 ರಲ್ಲಿ ಮಾತ್ರ ಕಾರ್ಯರೂಪಕ್ಕೆ ಬರಲಿದೆ. ನಮ್ಮ ಮೆಟ್ರೋ ಎರಡನೇ ಹಂತವು ಬೆಂಗಳೂರು ನಗರವನ್ನು ಹೆಚ್ಚು ಸಂಪರ್ಕಿತ ಮತ್ತು ಸುಲಭ ಪ್ರಯಾಣಕ್ಕೆ ಹೆಚ್ಚು ಸಹಾಯವಾಗುತ್ತದೆ. ನಮ್ಮ ಮೆಟ್ರೋದ ಎರಡನೇ ಹಂತದ ಎಲ್ಲಾ ಮಾರ್ಗದಲ್ಲೂ ಮೆಟ್ರೋ ರೈಲುಗಳು ಸಂಚಾರವನ್ನು ಆರಂಭ ಮಾಡಿದ್ದರೆ ಬೆಂಗಳೂರಿನ ಜನದಟ್ಟಣೆ ಕೂಡ ಕಡಿಮೆಯಾಗುತ್ತದೆ.


Click it and Unblock the Notifications