ಬೆಂಗಳೂರಿನಲ್ಲಿ (Bengaluru) ವಾಸಿಸುವವರಿಗೆ ದೊಡ್ಡ ಸಮಸ್ಯೆಯೆಂದರೆ ಟ್ರಾಫಿಕ್. ಎಲ್ಲಾದರೂ ಹೋಗುವಾಗ ಕಿರಿಕಿರಿಯಾಗುವ ಒಂದೇ ವಿಷ್ಯ ಅಂದ್ರೆ ಅದೂ ಟ್ರಾಫಿಕ್. ಈ ಸಮಸ್ಯೆಗೆ ಪರಿಹಾರವಾಗಿ ಬಂದ ಸೇವೆಯೇ ನಮ್ಮ ಮೆಟ್ರೋ. ಆದ್ರೆ ಇತ್ತೀಚೆಗೆ ಮೆಟ್ರೋದಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಮಧ್ಯೆ ಬಿಎಂಆರ್‌ಸಿಎಲ್ ಕೂಡಾ ಬೆಂಗಳೂರಿನಾದ್ಯಂತ ಮೆಟ್ರೋ (Namma Metro) ಸೇವೆಯನ್ನು ವಿಸ್ತರಿಸಲು ಪ್ಲಾನ್ ಮಾಡುತ್ತಿದೆ. ಒಂದು ಕಾಲದಲ್ಲಿ ಸುಗಮ ಸಂಚಾರ ಮಾಡುತ್ತಿದ್ದ ರಸ್ತೆಗಳೆಲ್ಲಾ, ಇಂದು ವಾಹನಗಳಿಂದ ತುಂಬಿ ತುಳುಕುತ್ತಿದೆ. ಇದೀಗ ಎಲ್ಲಾ ಸಮಸ್ಯೆಗೆ ಮೆಟ್ರೋ ಗುಡ್ ನ್ಯೂಸ್ ನೀಡಲಿದೆ.

ಹೌದು, 2026ರಲ್ಲಿ ಈ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಸಿಗುವ ನಿರೀಕ್ಷೆಯಿದೆ. ಕಾರಣ, ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಬಂಪರ್ ಸುದ್ದಿಯೊಂದನ್ನು ಹೊತ್ತು ತಂದಿದೆ. ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಎಂಬ ಎರಡು ಪ್ರಮುಖ ಹೊಸ ಮಾರ್ಗಗಳು ಮುಂದಿನ ವರ್ಷ ಹಂತ ಹಂತವಾಗಿ ತೆರೆಯಲು ಸಜ್ಜಾಗಿ ನಿಂತಿದೆ. ಇದು ವೇಗದ ಪ್ರಯಾಣ ಮತ್ತು ಟ್ರಾಫಿಕ್ ಸಮಸ್ಯೆಯಿಂದ ಪ್ರಯಾಣಿಕರಿಗೆ ಪರಿಹಾರವಾಗುವುದಂತೂ ಸತ್ಯ..
2026ರಲ್ಲಿ ಹೊಸ ಮಾರ್ಗ!
ನಗರದಲ್ಲಿ ಈಗಾಗಲೇ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್‌ಗಳು ಕಾರ್ಯನಿರ್ವಹಿಸುತ್ತಿದೆ. ಇದೀಗ ಮಾರ್ಗಗಳಿಗೆ ಮತ್ತೆರಡು ಹೊಸ ಮಾರ್ಗಗಳು ಸೇರ್ಪಡೆಯಾಗಲಿದೆ. ಅಂದರೆ ಪಿಂಕ್ ಮತ್ತು ಬ್ಲೂ ಲೈನ್‌ಗಳ ಸೇರ್ಪಡೆಯು ಬೆಂಗಳೂರನ್ನು ಪೂರ್ಣ ಪ್ರಮಾಣದ ಮೆಟ್ರೋ ಜಾಲವನ್ನು ಹೊಂದುವ ಮೂಲಕ ಹೊಸ ಸಂಚಲನ ಸೃಷ್ಟಿಸಲಿದೆ. ಅಧಿಕಾರಿಗಳ ಪ್ರಕಾರ, 2026ರ ಅಂತ್ಯದ ವೇಳೆಗೆ ಎರಡೂ ಹೊಸ ಲೈನ್‌ಗಳಲ್ಲಿ ಮೆಟ್ರೋ ಓಡಾಟ ಮಾಡಲಿದೆ ಎಂದು ಹೇಳಲಾಗಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಸಮಯಕ್ಕೆ ಸರಿಯಾಗಿ ಕಾಮಗಾರಿಗಳು ಪ್ರಾರಂಭವಾಗಿ, ಅಂತ್ಯಗೊಂಡರೆ, ನಗರದ ಅತಿ ಹೆಚ್ಚು ಟ್ರಾಫಿಕ್ ಪೀಡಿತ ಪ್ರದೇಶಗಳ ಪ್ರಯಾಣಿಕರು ಆರಾಮವಾಗಿ ಮೆಟ್ರೋ ಮೂಲಕ, ಯಾವುದೇ ಟ್ರಾಫಿಕ್ ಸಮಸ್ಯೆಯಿಲ್ಲದೇ ಪ್ರಯಾಣ ಮಾಡಬಹುದು. ಇದು ನಿತ್ಯ ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸುವವರಿಗೆ ಪರಿಹಾವಾಗಲಿದೆ.
ಪಿಂಕ್ ಲೈನ್ ಮಾರ್ಗ:
ಪಿಂಕ್ ಲೈನ್ ನಮ್ಮ ಮೆಟ್ರೋಗೆ ಸೇರ್ಪಡೆಗೊಳ್ಳುತ್ತಿರುವ ಅತ್ಯಂತ ನಿರೀಕ್ಷಿತ ಮಾರ್ಗಗಳಲ್ಲಿ ಒಂದು. ಇನ್ನು ನಗರದ ಅತ್ಯಂತ ಜನನಿಬಿಡ ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮೂಲಕ ಹಾದುಹೋಗುವ ಈ ಮಾರ್ಗವು ದಕ್ಷಿಣ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರದ ನಾಗವಾರಕ್ಕೆ ಸಂಪರ್ಕಿಸುತ್ತದೆ. ಇದು ಸುಮಾರು 21.25 ಕಿ.ಮೀ.ಗಳಷ್ಟು ವಿಸ್ತರಣೆ ಹೊಂದಿದೆ.
ಈ ಮಾರ್ಗದ ಕಾರ್ಯಾಚರಣೆಯು ಎರಡು ಪ್ರಮುಖ ಹಂತಗಳನ್ನು ಹೊಂದಿದೆ. ಮೊದಲ ಹಂತವು 2026ರ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಹಂತ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ 7.5 ಕಿ.ಮೀ.ನಲ್ಲಿ ಆರಂಭವಾಗಲಿದೆ. ಇನ್ನು ಈ ಮಾರ್ಗಗಳಲ್ಲಿ 6 ನಿಲ್ದಾಣಗಳು ಸೇವೆಗೆ ಲಭ್ಯವಾಗಲಿವೆ. ದಕ್ಷಿಣ ಬೆಂಗಳೂರಿನ ಪ್ರಯಾಣಿಕರು, ಬೆಂಗಳೂರಿನ ಮಧ್ಯಭಾಗಕ್ಕೆ ಹೋಗೋರಿಗೆ ಇರು ಸಹಕಾರಿಯಾಗಲಿದೆ.
ಎರಡನೇ ಹಂತವು 2026ರ ನವೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಹಂತದಲ್ಲಿ ತಾವರೆಕೆರೆ ಮತ್ತು ನಾಗವಾರ ನಡುವಿನ ಅಂಡರ್‌ಗ್ರೌಂಡ್ ಮಾರ್ಗವನ್ನು ಕಾರ್ಯಾಚರಣೆಗೆ ಕೈಗೊಳ್ಳಲಾಗುತ್ತದೆ. ಇನ್ನು ಇದು 12 ಅಂಡರ್‌ಗ್ರೌಂಡ್ ನಿಲ್ದಾಣಗಳನ್ನು ಒಳಗೊಂಡಿದ್ದು, ಮೆಟ್ರೋ ಜಾಲಕ್ಕೆ ಒಂದು ಪ್ರಮುಖ ಎಂಜಿನಿಯರಿಂಗ್ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಚಾಲಕರಹಿತ ರೈಲು
ಹೊಸ ಮಾರ್ಗ ಮಾತ್ರವಲ್ಲದೇ, ಬಿಇಎಂಎಲ್‌ನಿಂದ ತಯಾರಿಸಲ್ಪಟ್ಟ ಒಂದು ಡ್ರೈವರ್‌ಲೆಸ್ ರೈಲು ಈಗಾಗಲೇ ಪಿಂಕ್ ಲೈನ್‌ಗೆ ಆಗಮಿಸಿದೆ.
ಬ್ಲೂ ಲೈನ್ ಮಾರ್ಗಗಳು:
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಬಹುಮುಖ್ಯ ಕಾರಿಡಾರ್ ಎಂದರೆ ಸಿಲ್ಕ್ ಬೋರ್ಡ್. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ ಬ್ಲೂ ಲೈನ್‌ನ ಮೊದಲ ಹಂತವು 2026ರ ಡಿಸೆಂಬರ್ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇನ್ನು ಈ ಮಾರ್ಗವು ಸುಮಾರು 17.75 ಕಿ.ಮೀ.ಗಳಷ್ಟು ವಿಸ್ತರಿಸಲಿದೆ. ಒಟ್ಟು 13 ನಿಲ್ದಾಣಗಳನ್ನು ಒಳಗೊಂಡಿದ್ದು, ಬೆಂಗಳೂರಿನ ಆಗ್ನೇಯ ಮತ್ತು ಪೂರ್ವ ಭಾಗಗಳಲ್ಲಿನ ಪ್ರಮುಖ ಐಟಿ ಮತ್ತು ವಸತಿ ಕೇಂದ್ರಗಳನ್ನು ಸಂಪರ್ಕಸಲಿದೆ. ಸಂಪೂರ್ಣ ಬ್ಲೂ ಲೈನ್ ಅಂತಿಮವಾಗಿ 58.19 ಕಿ.ಮೀ ದೂರವನ್ನು ಹೊಂದಿರಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications