Namma Metro Pink Line:ಮೆಟ್ರೋದ ಅತಿ ಉದ್ದದ ಸುರಂಗ ಮಾರ್ಗ ಹೊಂದಿರುವ ಪಿಂಕ್ ಲೈನ್(Pink line Metro) ಕಾಮಗಾರಿ ಆನೆಯಂತೆ ವೇಗವಾಗಿ ಸಾಗಿದ್ದರೂ ಉದ್ಘಾಟನೆ ಮಾತ್ರ ಆಮೆಯಂತೆ ನಿಧಾನವಾಗುತ್ತಲೇ ಇದೆ. ಇದರಿಂದಾಗಿ ಬೆಂಗಳೂರು ಸಾರ್ವನಿಕರು ಬೇಸರವಾಗಿ ಹೊರಹಾಕಿದ್ದಾರೆ. ಹಾಗಿದ್ದರೆ ಪಿಂಕ್ ಲೈನ್ ಉದ್ಘಾಟನೆ ವಿಳಂಬ ಕಾರಣವೇನು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ
ಹೌದು, ಬಹುದಿನಗಗಳಿಂದ ಪಿಂಕ್ ಲೈನ್ ಉದ್ಘಾಟನೆಗಾಗಿ ಕಾಯುತ್ತಿರುವ ಬೆಂಗಳೂರಿಗರಿಗೆ ಭಾರೀ ನಿರಾಸೆಯಾಗಿದೆ. ಈ ಮಾರ್ಗದಲ್ಲಿ ಗುಲಾಬಿ ಮಾರ್ಗದ ರೈಲುಗಳು 2020ರಲ್ಲೇ ಓಡಾಟ ನಡೆಸಬೇಕಿತ್ತು. ನಂತರ ಡಿಸೆಂಬರ್ 2025 ಕ್ಕೆ ಮುಂದೂಡಲ್ಪಟ್ಟಿತು, ಮತ್ತೊಮ್ಮೆ ತನ್ನ ಗಡುವನ್ನು ತಪ್ಪಿಸಿಕೊಂಡಿದೆ.ಬೆಂಗಳೂರು ಮೆಟ್ರೋರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಈಗ ಈ ಮಾರ್ಗವನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಇದು ಆದ ನಂತರವು ಸಹ 2020 ರಲ್ಲಿ ತೆರೆಯಲು ನಿರ್ಧರಿಸಲಾಗಿತ್ತು ಅದು ಸಹ ವಿಳಂಭವಾಗಿದೆ.

ಕಲೇನಾ ಅಗ್ರಹಾರ ಮತ್ತು ತಾವರೆಕೆರೆ ನಡುವಿನ ಎತ್ತರಿಸಿದ ಮಾರ್ಗ (7.5 ಕಿಮೀ) ಮಾರ್ಚ್ 2026 ರ ವೇಳೆಗೆ ನಿರೀಕ್ಷಿಸಲಾಗಿದೆ ಮತ್ತು ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ ಭೂಗತ ವಿಭಾಗ (13.8 ಕಿಮೀ) ಸೆಪ್ಟೆಂಬರ್ 2026 ರ ವೇಳೆಗೆ ತರೆಯಲು ಯೋಚನೆ ಪ್ಲಾನ್ ಮಾಡಲಾಗಿತ್ತು.
ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ವಿಸ್ತರಣೆಯ ಜಾಲ ಒಟ್ಟು 21.3 ಕಿ.ಮೀ. ಉದ್ದವಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಕಲೇನಾ ಅಗ್ರಹಾರದ ದಕ್ಷಿಣ ಬಿಂದುಗಳನ್ನು ನಗರದ ಉತ್ತರ ಭಾಗದಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿರುವ ನಾಗವಾರದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ವಿಳಂಬಕ್ಕೆ ಕಾರಣವೇನು?
ಗುಲಾಬಿ ಮಾರ್ಗ ಆರಂಭವಾಗುವ ನಿಲ್ದಾಣಗಳಲ್ಲಿ ಎತ್ತರದ ವಿಭಾಗದಲ್ಲಿ ಸಿವಿಲ್ ಕೆಲಸಗಳು ಮತ್ತು ಹಳಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೂ, ಬಿಎಂಆರ್‌ಸಿಎಲ್ ಅಧಿಕಾರಿಗಳು ಭೂಗತ ಭಾಗವನ್ನು ಪ್ರಮುಖ ಸವಾಲಾಗಿ ಪರಿಗಣಿಸಿದ್ದಾರೆ. ಬೆಂಗಳೂರಿನಲ್ಲಿ ಕಲ್ಲಿನ ಭೂಪ್ರದೇಶ, ವಿಶೇಷವಾಗಿ ದೊಡ್ಡ ಗ್ರಾನೈಟ್ ಮತ್ತು ಡೊಲೆರೈಟ್ ಬಂಡೆಗಳು ಸುರಂಗ ಮಾರ್ಗವನ್ನು ಅತ್ಯಂತ ಕಷ್ಟಕರವಾಗಿಸಿದೆ. ಶಿವಾಜಿನಗರ ಮತ್ತು ವೆಲ್ಲರ ನಡುವಿನ ವಿಶೇಷವಾಗಿ ಸಂಕೀರ್ಣವಾದ 2.2 ಕಿ.ಮೀ. ವಿಭಾಗವು ವಿಳಂಬಕ್ಕೆ ಗಮನಾರ್ಹ ಮೂಲವಾಗಿದೆ ಎಂದು ವರದಿಗಳು ಆಗಿವೆ. ಈ ಮಾರ್ಗದಲ್ಲಿ ಸುರಂಗ ಮಾರ್ಗಗಳು ಹೆಚ್ಚಾಗಿರುವುದರಿಂದ ಕೆಲಸ ಮಾಡುವುದು ಸಹ ಕಷ್ಟಕರವಾಗಿದೆ. ಆದ್ದದರಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಮಾಡಲು ವಿಳಂಬವಾಗುತ್ತಿದೆ. ಇದಕ್ಕೆ ಬೆಂಗಳೂರು ಮೆಟ್ರೋ ಪ್ರಯಾಣಿಕರು ನಿರಂತರ ವಿಳಂಬದ ಬಗ್ಗೆ ಹತಾಶೆಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಗುಲಾಬಿ ಮಾರ್ಗ ನಿಲ್ದಾಣಗಳ ಪಟ್ಟಿ
ಕಲೆನ ಅಗ್ರಹಾರ
ಹುಳಿಮಾವು
ಐ.ಐ.ಎಂ.ಬಿ.
ಜೆ.ಪಿ. ನಗರ 4ನೇ ಹಂತ
ಜಯದೇವ ಆಸ್ಪತ್ರೆ
ತಾವರೆಕೆರೆ
ಡೈರಿ ಸರ್ಕಲ್
ಲಕ್ಕಸಂದ್ರ
ಲ್ಯಾಂಗ್‌ಫೋರ್ಡ್ ಟೌನ್
ರಾಷ್ಟ್ರೀಯ ಮಿಲಿಟರಿ ಶಾಲೆ
ಮಹಾತ್ಮ ಗಾಂಧಿ ರಸ್ತೆ
ಶಿವಾಜಿ ನಗರ
ಕಂಟೋನ್ಮೆಂಟ್
ಪಾಟರಿ ಟೌನ್
ಟ್ಯಾನರಿ ರಸ್ತೆ
ವೆಂಕಟೇಶಪುರ
ಕಾಡುಗುಂಡನಹಳ್ಳಿ
ನಾಗವಾರ
ನಮ್ಮ ಮೆಟ್ರೋ ಮಾರ್ಗದಲ್ಲಿ ಗುಲಾಬಿ ಮಾರ್ಗ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗ ಇದಾಗಲಿದ್ದೆ. 21.26 ಕಿಲೋ ಮೀಟರ್ ಮಾರ್ಗದಲ್ಲಿ 18 ನಿಲ್ದಾಣಗಳು ನಿರ್ಮಾಣವಾಗಲಿದೆ. 12 ಭೂಗತ ನಿಲ್ದಾಣಗಳು ನಿರ್ಮಾಣವಾಗಲಿದ್ದು, 6 ನಿಲ್ದಾಣಗಳು ಎಲಿವೇಟೆಡ್ ಮಾರ್ಗದಲ್ಲಿ ನಿರ್ಮಾಣವಾಗಲಿವೆ.ಸುರಂಗ ಮಾರ್ಗವನ್ನು ಕೊರೆಯುವ ಕೆಲಸವನ್ನು ಬಿಎಂಆರ್ ಸಿಎಲ್ ಯಶಸ್ವಿಯಾಗಿ ಮುಗಿಸಿದೆ.
ಇನ್ನೂ ಗುಲಾಬಿ ಬಣ್ಣದ ಮಾರ್ಗಗಾಗಿ 16 ಚಾಲಕ ರಹಿತ ರೈಲುಗಳನ್ನು ಬೆಂಗಳೂರಿನಲ್ಲೇ ತಯಾರಿಸಲಾಗುತ್ತದೆ. ಬಿಇಎಂಎಲ್ ಜೂನ್ 2025ರ ವೇಳೆಗೆ ಮೊದಲ ರೈಲನ್ನು ಪೂರೈಸುವ ನಿರೀಕ್ಷೆ ಮಾಡಲಾಗಿದ್ದು, ಅಗತ್ಯವಿರುವ ಅನುಮೋದನೆಗಳು ದೊರೆತ ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳನ್ನು ಪೂರೈಕೆಯಾಗಲಿದೆ.
ಗುಲಾಬಿ ಬಣ್ಣದ ಮಾರ್ಗದಲ್ಲಿ ರೈಲುಗಳು ಯಾವಾಗ ಸಂಚಾರ ಆರಂಭ ಮಾಡಲಿದೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications