ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ!ಈ ಮಾರ್ಗದಲ್ಲಿ ಮೊಟ್ರೋ ರೈಲು ಬರಲ್ಲ.ಇಂದು ಬೆಳ್ಳಂಬೆಳಗ್ಗೆ ಕೈ ಕೊಟ್ಟ ನಮ್ಮ ಮೆಟ್ರೋ. ಹೌದು, ಬೆಂಗಳೂರಿನಲ್ಲಿ ನೇರಳೆ ಮಾರ್ಗದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ನಮ್ಮ ಮೆಟ್ರೋ ಸೇವೆ ವ್ಯತ್ಯಯ ಆಗಿದೆ. ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು, ಹೀಗಾಗಿ ಇಂದು ಬೆಳಗ್ಗೆ 5 ಗಂಟೆಯಿಂದ ಈ ನಿಲ್ದಾಣದಿಂದ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ. ತೊಂದರೆ ಸರಿಪಡಿಸುವವರೆಗೆ ರೈಲು ಸಂಚಾರ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಉಜ್ವಲ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಮೆಟ್ರೋ ಸ್ಟೇಷನ್‌ವರೆಗೆ ನೇರಳೆ ಮಾರ್ಗದಲ್ಲಿ ರೈಲುಗಳು ಚಲಿಸುತ್ತಿವೆ.
ಹೌದು,ಚಲಘಟ್ಟದಿಂದ ವೈಟ್‌ಫಿಲ್ಡ್ (ಕಾಡುಗೋಡಿ) ಕಡೆಗೆ ಸಾಗುತ್ತಿದ್ದ ನೇರಳೆ ಮಾರ್ಗದ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಸಂಭವಿಸಿದೆ. ಈ ದೋಷದಿಂದಾಗಿ ಕೆಲ ಸಮಯ ಮೆಟ್ರೋ ಸಂಚಾರ ಸ್ಥಗಿತಗೊಂಡು, ಹಲವಾರು ಪ್ರಯಾಣಿಕರು ತಮ್ಮ ಗಮ್ಯ ಸ್ಥಳಗಳಿಗೆ ಸರಿಯಾದ ಸಮಯದಲ್ಲಿ ತಲುಪುಲು ಸಾಧ್ಯವಾಗಿಲ್ಲ.ಪ್ರಯಾಣಿಕರು ನಿಲ್ದಾಣಗಳಲ್ಲಿ ನಿಂತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BMRCL ತಕ್ಷಣ ಕ್ರಮ ಕೈಗೊಂಡು ದೋಷ ನಿವಾರಣೆಗೆ ಪ್ರಯತ್ನ ಮಾಡಿದೆ. ಆದರೂ, ಈ ಸಮಯದಲ್ಲಿ ಹಲವು ರೈಲುಗಳು ವಿಳಂಬವಾಗಿ ಚಲಿಸಿದವು ಮತ್ತು ಕೆಲವೆರಡು ಸೇವೆಗಳು ಸ್ಥಗಿತಗೊಂಡಿವೆ. ಆದ್ದರಿಂದ ಇಂದು ಬೆಳಿಗ್ಗೆ 5.00 ಗಂಟೆಯಿಂದ ಈ ನಿಲ್ದಾಣದಿಂದ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ. ತೊಂದರೆ ಸರಿಪಡಿಸುವವರೆಗೆ ರೈಲು ಸಂಚಾರ ಇರುವುದಿಲ್ಲ ಎಂದು ಮೆಟ್ರೋ ರೈಲು ನಿಗಮ ಮಾಹಿತಿಯನ್ನು ತಿಳಿಸಿದೆ.
ಬಿಎಂಆರ್‌ಸಿಎಲ್ ಈ ತಾಂತ್ರಿಕ ದೋಷದಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ವಿಷಾದ ವ್ಯಕ್ತಪಡಿಸಿ, ಸಮಸ್ಯೆ ಯಥಾಶೀಘ್ರ ಪರಿಹಾರಗೊಳ್ಳುವ ಭರವಸೆ ನೀಡಿದೆ.
ನೇರಳೆ ಮಾರ್ಗದಲ್ಲಿ ಸೇವಾ ಬದಲಾವಣೆ
ಬೆಂಗಳೂರು ಮೆಟ್ರೋ ನಿಲ್ದಾಣಗಳ ನಡುವೆ ಸೇವೆಯಲ್ಲಿ ತಾಂತ್ರಿಕ ತೊಂದರೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMRCL) ಪ್ರಕಟಿಸಿದಂತೆ, ಈಗಿನಿಂದ ಉಜ್ವಲ ಮೆಟ್ರೋ ನಿಲ್ದಾಣದಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ನೇರಳೆ ಮಾರ್ಗದಲ್ಲಿ ಮಾತ್ರ ರೈಲುಗಳು ಚಲಿಸಲಿವೆ. ಈ ಬದಲಾವಣೆ ನೇರಳೆ ಮಾರ್ಗದೊಳಗೆ ಮಾತ್ರ ಅನ್ವಯವಾಗುತ್ತದೆ.
ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಎಂದಿನಂತೆ ಎಲ್ಲ ರೈಲು ಸೇವೆಗಳು ಲಭ್ಯವಿರುತ್ತವೆ. ಬಿಎಂಆರ್‌ಸಿಎಲ್ ಈ ತಾತ್ಕಾಲಿಕ ಬದಲಾವಣೆಯಿಂದ ಉಂಟಾಗುವ ಯಾವುದೇ ಅನಾನುಕೂಲಕ್ಕಾಗಿ ಸಾರ್ವಜನಿಕರ ಕ್ಷಮೆಯನ್ನು ಕೋರಿದೆ.
ಎಲ್ಲೆಲ್ಲಿಗೆ ಹೋಗುವವರಿಗೆ ತೊಂದರೆ?
ನೇರಳೆ ಮಾರ್ಗದ ಇತರ ವಿಭಾಗಗಳೆಂದರೆ, ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು ಹಾಗೂ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳು ಇವೆ.
ಮೆಟ್ರೋ ಸಂಚಾರದ ವ್ಯತ್ಯಯದಿಂದ ಐಟಿ ಉದ್ಯೋಗಿಗಳಿಗೆ ವಿಶೇಷವಾಗಿ ವೈಟ್‌ಫಿಲ್ಡ್, ಮಹದೇವಪುರದಿಂದ ಬರುವವರಿಗೆ ತೊಂದರೆಯಾಗುತ್ತದೆ.ಈ ಮಾರ್ಗದಲ್ಲಿ ಶಾಲಾ-ಕಾಲೇಜು ಕ್ಯಾಂಪಸ್‌ಗಳು ಇವೆ ಆದ್ದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ. ಪ್ರತಿನಿತ್ಯ ಸಂಚಾರ ಮಾಡುವವಕಚೇರಿ ನೌಕರರು ಮತ್ತು ದಿನಸಿ ಪ್ರಯಾಣಿರಗೂ ತೊಂದರೆಯಾಗಿದೆ.ಮಹದೇವಪುರ, ಕೆಆರ್‌ಪುರಂ, ವೈಟ್‌ಫೀಲ್ಡ್ ನಿವಾಸಿಗಳಿಗೆ ಹೆಚ್ಚಿನ ಪ್ರಭಾವ ಬೀರುತ್ತದೆ.
ಪರ್ಯಾಯ ಮಾರ್ಗ
- BMTC ಬಸ್ ಸೇವೆಗಳನ್ನು ಬಳಸುವುದು
- ಕ್ಯಾಬ್/ಆಟೋಮೋಬೈಲ್ ಸೇವೆಗಳನ್ನು ಉಪಯೋಗ ಮಾಡಿಕೊಳ್ಳುವುದು.
- ಉಜ್ವಲಾ ಚಲ್ಲಘಟ್ಟ ಮೆಟ್ರೋ ಮಾರ್ಗವನ್ನು ಉಪಯೋಗಿಸುವುದು.
ಬಿಎಂಆರ್ ಸಿಎಲ್ ಪ್ರತಿಕ್ರಿಯೆ
ನೇರಳೆ ಮಾರ್ಗದ ತಾಂತ್ರಿಕ ತೊಂದರೆಯನ್ನು ಬೇಕನೆ ಪರಿಹರಿಸಲು ಕಾರ್ಯಾಚರಣೆ ನಡೆಸುತ್ತಿದೆ, ಪ್ರಯಾಣಿಕರಿಂದ ಸಹಕಾರಿಸಬೇಕು,ಸಂಚಾರ ವ್ಯತ್ಯಕ್ಕೆ ವಿಷಾದ ವ್ಯಕ್ತಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕೃತ ವೆಬ್‌ಸೈಟ್‌ನಲ್ಲಿ ನೇರಳೆ ಮಾರ್ಗದ ಸ್ಟೇಶನ್‌ಗಳ ಕಾರ್ಯನಿರ್ವಹಣಾ ಸ್ಥಿತಿ ಮತ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.BMRCL ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ (Twitter, Facebook) ಅಪ್ಡೇಟ್ಸ್ ಪ್ರಕಟಿಸುತ್ತವೆ ಅಲ್ಲೂ ಕೂಡ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ಹೇಳಿದೆ.


Click it and Unblock the Notifications