ಬೆಂಗಳೂರಿನ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಟಿಕೆಟ್ ದರ (Namma Metro Ticket Price) ಏರಿಕೆ ಆದ ಮೇಲೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಇದ್ದು ಮೆಟ್ರೋ ಸೀಟುಗಳು ಖಾಲಿ ಖಾಲಿಯಾಗಿವೆ. ಇದರಿಂದ ಬಿಎಂಆರ್ಸಿಎಲ್ ನಷ್ಟದ ಹಾದಿಯಲ್ಲಿ ಇದೆ.ಇದನ್ನೂ ಆದಾಯದತ್ತ ತರಲು ಜಾಹೀರಾತುವಿನ ಮೊರೆ ಹೋಗಿದೆ.
ಹೌದು,ನಮ್ಮ ಮೆಟ್ರೋ ಬೆಲೆ ಏರಿಯಾಗುತ್ತಿದಂತೆ ಜನರು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ ಹಾಗೂ ಸ್ವಂತ ವಾಹನಗಳೇ ಸಂಚಾರ ಮಾಡುತ್ತಾರೆ.ಇದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಷ್ಟವಾಗಿದೆ ಇದನ್ನು ಸರಿದೂಗಿಸಲು ನಮ್ಮ ಮೆಟ್ರೋ ರೈಲಿನ ಒಳ ಮತ್ತು ಹೊರಭಾಗದಲ್ಲಿ ಜಾಹೀರಾತು ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಜ್ಜಾಗಿದೆ ಇದರಿಂದ ವಾರ್ಷಿಕವಾಗಿ 27 ಕೋಟಿ ರೂಪಾಯಿ ಆದಾಯ ನಿರೀಕ್ಷಿ ಮಾಡಲಾಗಿದೆ.ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಅಗ್ರಹ ಮಾಡಿಕೊಂಡಿದ್ದಾರೆ.

ಪ್ರಯಾಣಿಕರು ನಮ್ಮ ಮೆಟ್ರೋ ಈ ನಿರ್ಧಾರಕ್ಕೆ ವಿರೋಧ ಮಾಡಿದ್ದಾರೆ.ಟಿಕೆಟ್ ದರ ಕಡಿಮೆ ಮಾಡಿದರೆ,ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ ಮೆಟ್ರೋಗೂ ಆದಾಯ ಬರುತ್ತದೆ ಎಂದು ಸಹ ಯೋಜನೆ ಮಾಡಿದ್ದಾರೆ. ಕರ್ನಾಟಕ ವಾಯುಮಾಲಿನ್ಯ ಮಂಡಳಿ ನೀಡಿದ ವರದಿಯ ಪ್ರಕಾರ ನಗರದಲ್ಲಿ ಮಾಲಿನ್ಯ ಮಟ್ಟ ಹೆಚ್ಚಳವಾಗಿದೆ.ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನ ಪ್ರಕಾರ,ಮೆಟ್ರೋ ಟಿಕೆಟ್ ಶುಲ್ಕ ಹೆಚ್ಚಳಕ್ಕೆ ಮುಂಚೆ ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಸರಾಸರಿ ಪಿಎಂ 2.5 ಕಣ ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು ಆಗಿದೆ.
ಫೆಬ್ರವರಿ 10 ರಂದು, ನಮ್ಮ ಮೆಟ್ರೋ ಮಾಲಿನ್ಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು,112 ರಿಂದ 114 ಮೈಕ್ರೋಗ್ರಾಂಗಳಷ್ಟು ತಲುಪಿದೆ.ಈ ಏರಿಕೆ ಮುಂದಿನ ವಾರಗಳಲ್ಲಿಯೂ ಮುಂದುವರೆಯಿತು.ಫೆಬ್ರವರಿ 17 ಮತ್ತು 24 ರಂದು ಸರಾಸರಿ 68 ರಿಂದ 105 ಮೈಕ್ರೋಗ್ರಾಂಗಳವರೆಗೆ ತಲುಪಿತು ನಂತರದ ವಾರಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ ಸ್ವಲ್ಪ ಹೆಚ್ಚಿನ ಮಟ್ಟದ ಮಾಲಿನ್ಯಗಳ ವರದಿಯಾಗಿದೆ.
ವಾಯು ಮಾಲಿನ್ಯದ ಇಂತಹ ಮಟ್ಟಗಳು ಆಸ್ತಮಾದಿಂದ ಕ್ಯಾನ್ಸರ್‌ವರೆಗೆ ಗಮನಾರ್ಹ ಆರೋಗ್ಯ ಅಪಾಯಗಳನ್ನುಂಟುಮಾಡುತ್ತವೆ. ಈ ಮಾಲಿನ್ಯಕಾರಕಗಳಲ್ಲಿನ ಏರಿಕೆಯ ಪ್ರವೃತ್ತಿಯು ಸಾರ್ವಜನಿಕ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಸೂಚಿಸುತ್ತದೆ.
ಈ ಮಾದರಿಯು ನಿರಂತರ ಸಮಸ್ಯೆಯನ್ನು ಮಾತ್ರವಲ್ಲದೆ ಜನಸಂಖ್ಯೆಗೆ ದೀರ್ಘಕಾಲೀನ ಆರೋಗ್ಯದ ಪರಿಣಾಮಗಳ ಸಾಧ್ಯತೆಯನ್ನೂ ಸೂಚಿಸುತ್ತದೆ. ಈ ಅಪಾಯಗಳನ್ನು ತಗ್ಗಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಳ್ಳುವ ತುರ್ತು ಅಗತ್ಯವನ್ನು ದತ್ತಾಂಶವು ಸೂಚಿಸಲಾಗುತ್ತದೆ.
ವಾಯು ಮಾಲಿನ್ಯದ ಮಟ್ಟ ಏರುತ್ತಿರುವುದರಿಂದ,ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಕಳಪೆ ಗಾಳಿಯ ಗುಣಮಟ್ಟ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳ ಆಕ್ರಮಣದ ನಡುವಿನ ನೇರ ಸಂಬಂಧವು ತಕ್ಷಣದ ಹಸ್ತಕ್ಷೇಪದ ನಿರ್ಣಾಯಕ ಅಗತ್ಯವನ್ನು ಹೇಳಿದ್ದಾರೆ.
ಫೆಬ್ರವರಿ 10 ರಂದು 112-114 ಮೈಕ್ರೊ ಗ್ರಾಂಗೆ ಏರಿಕೆಯಾಗಿದೆ. ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ, ಆಸ್ತಮಾದಿಂದ ಕ್ಯಾನ್ಸರ್ ತನಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.
ಆದಾಯ ಸಾಲುತ್ತಿಲ್ಲ, ಮಾಡಿರುವ ಸಾಲಕ್ಕೆ ಬಡ್ಡಿಕಟ್ಟಲು ಆಗುತ್ತಿಲ್ಲ. ಅದಕ್ಕೆ ಜಾಹೀರಾತು ಮೊರೆ ಹೋಗಿದ್ದೀವೆ ಎಂದು ಬಿಎಂಆರ್ಸಿಎಲ್ ಹೇಳುತ್ತಿದ್ದರೇ, ಇತ್ತ ಪ್ರಯಾಣಿಕರು ಮಾತ್ರ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ ಆದಾಯೂ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಣಿಕರ ಸಂಖ್ಯೆ ಮೆಟ್ರೋದಲ್ಲಿ ಕುಸಿತ
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಇದೇ ಮೊದಲ ಭಾರೀ ಕಂಡು ಬರುತ್ತಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಮೆಟ್ರೋ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.


Click it and Unblock the Notifications