ಗಮನಿಸಿ..! ನಾಳೆ ಮೆಟ್ರೋ ಸಂಚಾರ ಬಂದ್.. ಎಲ್ಲೆಲ್ಲಿ ನೋಡಿ

ಬೆಂಗಳೂರಿಗರೇ ಇಲ್ಲಿ ಹೇಳಿ..ನಾಳೆ ಎಲ್ಲಿದರೂ ಹೋಗುವ ಪ್ಲಾನ್ ಇದ್ದರೆ ಇಂದೇ ಕ್ಯಾನ್ಸಲ್ ಮಾಡಿಕೊಳ್ಳಿ ಯಾಕೆಂದರೆ ನಾಳೆ ಮೆಟ್ರೋ ಸಂಚಾರ ಬಂದ್ ಅಗಲಿದೆ ಹಾಗಿದ್ರೆ ಯಾವ ಮಾರ್ಗದ ಮೆಟ್ರೋ ಸಂಚಾರ ಬಂದ್ ಆಗಲಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...

ಹೌದು, ನಾಳೆ (ಜ.19) ನೇರಳೆ ಮಾರ್ಗದಲ್ಲಿ (Purple Line Metro) ಮೂರು ಗಂಟೆಗಳ ಕಾಲ ಮೆಟ್ರೋ ಸೇವೆ ಬಂದ್ ಆಗಲಿದೆ ಎಂದು ನಮ್ಮ ಮೆಟ್ರೋ(Namma Metro) ಕಾರ್ಪೊರೇಷನ್ ಲಿಮಿಟಿಡ್ ಮಾಹಿತಿಯನ್ನು ತಿಳಿಸಿದೆ.

ನಾಳೆ ಮೆಟ್ರೋ ಸಂಚಾರ ಬಂದ್.. ಎಲ್ಲೆಲ್ಲಿ ನೋಡಿ

ಬೇರೆ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಆರಂಭ

ಅಧಿಕಾರಿಗಳ ಪ್ರಕಾರ, ಚಲ್ಲಘಟ್ಟ ಮತ್ತು ಮೆಜೆಸ್ಟಿಕ್ ನಡುವೆ, ಹಾಗೆಯೇ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಇಂದಿರಾನಗರ ನಡುವೆ ರೈಲುಗಳು ಕಾರ್ಯನಿರ್ವಹಿಸಲಿವೆ. ಪರ್ಪ ಮೆಟ್ರೋ ಕಾರ್ಪೊರೇಷನ್ ಲಿಮಿಟಿಡ್ ಮಾಹಿಲ್ ಮತ್ತು ಗ್ರೀನ್ ಲೈನ್‌ಗಳೆರಡೂ ನಿಯಮಿತ ಭಾನುವಾರದ ವೇಳಾಪಟ್ಟಿಯನ್ನು ಅನುಸರಿಸಿ ಬೆಳಿಗ್ಗೆ 7 ಗಂಟೆಗೆ ತಮ್ಮ ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಮೆಟ್ರೋ ಸಂಚಾರ ನಾಳೆ ಬಂದ್ ಆಗಲು ಕಾರಣವೇನು?

ಕಬ್ಬನ್ ಪಾರ್ಕ್, ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆ 3 ಗಂಟೆಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ ಎಂದು ನಮ್ಮ ಮೆಟ್ರೋ ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸಿದೆ.

ಚಲ್ಲಘಟ್ಟ-ಮೆಜೆಸ್ಟಿಕ್, ವೈಟ್‌ಫೀಲ್ಡ್(ಕಾಡುಗೋಡಿ) ಇಂದಿರಾನಗರ ನಡುವೆ ಎಂದಿನಂತೆ ಮೆಟ್ರೋ ಸೇವೆ ಇರಲಿದೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಮಾಹಿತಿ ತಿಳಿಸಿದೆ.

ಮೆಟ್ರೋ ಟಿಕೆಟ್‌ ದರ ಹೆಚ್ಚಳವಾಗುವ ಸಾಧ್ಯತೆ

ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ ಟಿಕೆಟ್‌ ಟಿಕೆಟ್ ದರ ಹೆಚ್ಚಳ ಮಾಡಲು ಈಗಲೇ ಚರ್ಚೆ ಹೆಚ್ಚಾಗಿ ನಡೆಯುತ್ತಲೇ ಇದೆ. ಇದೀಗ ಬಿಎಂಆರ್​ಸಿಎಲ್​ ಮುಖ್ಯ ಕಚೇರಿಯಲ್ಲಿ ದರ ಏರಿಕೆ ಸಂಬಂಧ ಸಭೆ ನಡೆಸಲಾಗಿದೆ.ಈ ಸಭೆ ವಾರದ ಹಿಂದೆಯೇ ನಿರ್ಧಾರವಾಗಿತ್ತು. ಈ ಬಗ್ಗೆ ಕಾರ್ಪೊರೇಷನ್ ಲಿಮಿಟಿಡ್ ಮನವಿಗೆ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಾರಿಗೆ ಬಸ್‌ಗಳ ಟಿಕೆಟ್‌ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಮೆಟ್ರೋ ಪ್ರಯಾಣಿಕರಿಗೂ ಶಾಕ್ ಎದುರಾಗಿದೆ.

ಮುಂದಿನ ದಿನಮಾನಗಳಲ್ಲಿ ಮೆಟ್ರೋದಲ್ಲಿ ಶೇ 40 ರಿಂದ 45ರವರೆಗೆ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ.2017ರಲ್ಲಿ ಮೆಟ್ರೋ ದರದಲ್ಲಿ ಹೆಚ್ಚಳವನ್ನು ಮಾಡಲಾಗಿತ್ತು. ಎಂಟು ವರ್ಷಗಳ ನಂತರ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.40 ರಿಂದ 45ರಷ್ಟು ಏರಿಕೆ ಮಾಡಲು ಸಿದ್ದವಾಗಿದೆ. ಈಗಲೇ ಮೂರು ಸದಸ್ಯರ ಸರ್ಕಾರದ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ದರ ಹೆಚ್ಚಳ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ಟಿಕೆಟ್ ಶೇಕಡಾ ಎಷ್ಟರಷ್ಟು ಹೆಚ್ಚಳವಾಗಲಿದೆ?

ಮೆಟ್ರೋ ಟಿಕೆಟ್ ಇನ್ನುಂದೆ ಶೇ.40 ರಿಂದ ಶೇ.45ರಷ್ಷು ದರ ಹೆಚ್ಚಿಸುವ ಸಿದ್ಧತೆ ಇದೆ.ಇದುವರೆಗೆ ಮೆಟ್ರೋದಲ್ಲಿ ಕನಿಷ್ಟ ಅಂದರೆ ಕೇವಲ 10 ರೂಪಾಯಿ, ಗರಿಷ್ಟ ಅಂದರೆ 60 ರೂಪಾಯಿವರೆಗೆ ಇತ್ತು.ಆದ್ರೆ ಮುಂದಿನ ದಿನಗಳಲ್ಲಿ ಕನಿಷ್ಟ ಟಿಕೆಟ್‌ ದರ ಹಾಗೇ ಇರಲಿದೆ. ಗರಿಷ್ಟ ಟಿಕೆಟ್‌ ದರದಲ್ಲಿ 30 ರೂಪಾಯಿ ಹೆಚ್ಚಳವಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+