ಬೆಂಗಳೂರು: ನಗರದ ಬಹುತೇಕ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ನಮ್ಮ ಮೆಟ್ರೋವನ್ನೇ ಅಲಂಬಿಸಿದ್ದಾರೆ. ಈ ಮೂಲಕ ಮೆಟ್ರೋ ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಮತ್ತೊಂದೆಡೆ ಪ್ರಯಾಣಿಕರ ಬೇಡಿಕೆ ಮೇರೆಗೆ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆಯಾಗಲಿದ್ದು ಸರ್ಜಾಪುರ- ಹೆಬ್ಬಾಳವನ್ನು ಸಂಪರ್ಕಿಸುವ 37 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಮಾರ್ಗಕ್ಕೆ ಈಗಲೇ ಸಿದ್ಧತೆ ನಡೆದಿದೆ. ಆದ್ರೆ ಹೆಬ್ಬಾಳ ಸರ್ಜಾಪುರ ಮಾರ್ಗದ ಕಾರಿಡಾರ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಮೆಟ್ರೋ ನಿಲ್ದಾಣಗಳಿಗೆ ವಾಣಿಜ್ಯ ಪಾಲುದಾರಿಕೆಯನ್ನು ಕೇಳಲು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ ನಿರ್ಧಾರ ಮಾಡಿದೆ.
ಹೌದು, ಹೆಬ್ಬಾಳ ಸರ್ಜಾಪುರ ಮಾರ್ಗದ 36 ಕಿಮೀ ಕಾರಿಡಾರ್‌ನಲ್ಲಿ ಪ್ರಸ್ತಾಪಿಸಲಾದ ಅರ್ಧಕ್ಕಿಂತ ಹೆಚ್ಚು ಮೆಟ್ರೋ ನಿಲ್ದಾಣಗಳು ಪಾರ್ಕಿಂಗ್ ಮತ್ತು ಅಭಿವೃದ್ಧಿಗೆ ಹೆಚ್ಚುವರಿ ಸ್ಥಳವನ್ನು ಒಳಗೊಂಡಿರುತ್ತವೆ. ಈ ಎರಡೂ ವಿಷಯಗಳಲ್ಲಿ ನಮ್ಮ ಮೆಟ್ರೋದ ದೃಷ್ಟಿಕೋನದಲ್ಲಿ ಬದಲಾವಣೆಯಾಗಿದೆ.

ನಮ್ಮ ಮೆಟ್ರೊ ದರೇತರ ಆದಾಯದ ಅಂಶವನ್ನು ಹೆಚ್ಚಿಸಲು ಮತ್ತು ರಾಜ್ಯ ಸರ್ಕಾರದ ಅನುದಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಬದಲಾವಣೆಯನ್ನು ಮಾಡಲು ಸಿದ್ದವಾಗಿದೆ. ಯೋಜನಾ ವರದಿ (ಡಿಪಿಆರ್) ಪ್ರಕಾರ, 17 ಮೆಟ್ರೋ ನಿಲ್ದಾಣಗಳಲ್ಲಿ 15 ಲಕ್ಷ ಚದರ ಅಡಿ ವಾಣಿಜ್ಯ ಅಭಿವೃದ್ಧಿ ಮತ್ತು ಸುಮಾರು 2 ಲಕ್ಷ ಚದರ ಅಡಿ ಪಾರ್ಕಿಂಗ್ ಸ್ಥಳವನ್ನು ಯೋಜಿಸಲಾಗಿದೆ. ಇದು ಒಟ್ಟು 28 ನಿಲ್ದಾಣಗಳನ್ನು ಹೊಂದಿರುತ್ತದೆ ಅವುಗಳಲ್ಲಿ ಕೆಲವು ನೆಲದಡಿಯಲ್ಲಿವೆ.ಇನ್ನು ಕೆಲವು ನಿಲ್ದಾಣಗಳಲ್ಲಿ, ಶಾಪಿಂಗ್ ಮಾಲ್‌ಗಳು ಮತ್ತು ಕಚೇರಿ ಸ್ಥಳಗಳಂತಹ 'ಮೆಟ್ರೋ ಅಲ್ಲದ' ಉದ್ದೇಶಗಳಿಗಾಗಿ 1.6 ಲಕ್ಷ ಚದರ ಅಡಿಗಳಷ್ಟು ಹೆಚ್ಚುವರಿ ನಿರ್ಮಿಸಲಾದ ಪ್ರದೇಶವನ್ನು ನಿಗದಿಪಡಿಸಲಾಗಿದೆ.
ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೆಟ್ರೊ ನಿಲ್ದಾಣಗಳ ವಾಣಿಜ್ಯ ಶಾಪಿಂಗ್ ಮಾಲ್‌ಗಳುಗಳಿಗಾಗಿ ಖಾಸಗಿ ಡೆವಲಪರ್‌ಗಳೊಂದಿಗೆ ಪಾಲುದಾರಿಕೆ ಮಾಡಲು ನಿರ್ಧಾರಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ, ಜೊತೆಗೆ ಕೆಲವು ನಿಲ್ದಾಣಗಳಲ್ಲಿ ಹೆಚ್ಚುವರಿ ಮಹಡಿಗಳನ್ನು ತನ್ನದೇ ವೆಚ್ಚದಲ್ಲಿ ಧನಸಹಾಯ ಮಾಡುತ್ತಿದೆ. ಒಟ್ಟಾರೆಯಾಗಿ, ಡೆವಲಪರ್‌ಗಳು ಉದ್ದೇಶಿತ ಆಸ್ತಿ ಅಭಿವೃದ್ಧಿಯ ಶೇಕಡಾ 75 ಕ್ಕಿಂತ ಹೆಚ್ಚಿನದನ್ನು ಕೈಗೊಳ್ಳುತ್ತಾರೆ ಎಂದುಕೊಂಡಿದ್ದಾರೆ. ಏಕೆಂದರೆ ಅಧಿಕಾರಿಗಳು ರಾಜ್ಯ ಸರ್ಕಾರದ ಅನುದಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಸರ್ಜಾಪುರ, ಕಾರ್ಮಲಾರಂ, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ಬಸವೇಶ್ವರ ವೃತ್ತ, ಪ್ಯಾಲೇಸ್ ಗುಟ್ಟಹಳ್ಳಿ, ಮೇಖಿ ವೃತ್ತ, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಮುಂತಾದ ಮೆಟ್ರೋ ನಿಲ್ದಾಣಗಳಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲು ನಮ್ಮ ಮೆಟ್ರೋ ವಿನ್ಯಾಸ ಹಂತದಲ್ಲಿಯೇ ತಾಂತ್ರಿಕ ನಿಬಂಧನೆಗಳನ್ನು ಮಾಡಿದೆ ಎಂದು ವರದಿಯಾಗಿದೆ.
ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, ಶುಲೈತರ ಆದಾಯವನ್ನು ಹೆಚ್ಚಿಸಲು ಆಸ್ತಿ ಅಭಿವೃದ್ಧಿಯು ಅತ್ಯಂತ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. "ಹೈದರಾಬಾದ್ ಮೆಟ್ರೋ ಆಸ್ತಿ ಅಭಿವೃದ್ಧಿಗೆ ಆರು ಮಿಲಿಯನ್ ಚದರ ಮೀಟರ್‌ಗಿಂತಲೂ ಹೆಚ್ಚು ಜಾಗವನ್ನು ಮೀಸಲಿಟ್ಟಿದೆ. ಸರ್ಕಾರದ ಅನುದಾನದ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡಲು ನಾವು ಈ ವಿಧಾನವನ್ನು ಅನುಸರಿಸುತ್ತಿತ್ತು.ವಿಧಾನವನ್ನು ಇನ್ನೂ ಅಂತಿಮಗೊಳಿಸದಿದ್ದರೂ, ಸಾರಿಗೆ-ಆಧಾರಿತ ಅಭಿವೃದ್ಧಿಯನ್ನು ಕೈಗೊಳ್ಳಲು ನಾವು ಆದೇಶವನ್ನು ಹೊಂದಿದ್ದೇವೆ. ಅವರು ಹೇಳಿದರು.
36.58 ಕಿಮೀ ಉದ್ದದ ಈ ಮಾರ್ಗವು ಐಟಿ ಹಬ್ ಸರ್ಜಾಪುರವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ (ಕೆಐಎ) ಸಂಪರ್ಕಿಸುತ್ತದೆ. ಹಂತ III-A ಎಂದು ಕರೆಯಲ್ಪಡುವ ಈ ಯೋಜನೆಯು ರೂ 28,405 ಕೋಟಿ ವೆಚ್ಚವಾಗಿದ್ದು, ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಆರು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
BMRCL ತನ್ನ ನಿರ್ಮಾಣ ಹಂತದಲ್ಲಿರುವ ನಾಗವಾರ ಮೆಟ್ರೋ ನಿಲ್ದಾಣದಲ್ಲಿ ಸಣ್ಣ ಪ್ರಮಾಣದಲ್ಲಿ ಇದೇ ರೀತಿಯ ಯೋಜನೆಯನ್ನು ಕೈಗೆತ್ತಿಕೊಂಡಿದೆ, ಅಲ್ಲಿ ಅದು ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸುತ್ತಿದೆ. ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ನಿಲ್ದಾಣಗಳನ್ನು ಅಭಿವೃದ್ಧಿಗೆ ಮೀಸಲು ಇಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಡಿಎಚ್‌ಗೆ ತಿಳಿಸಿದರು.
ನಾಗವಾರದಲ್ಲಿ ಕೆಲವು ಸ್ಥಳಗಳಲ್ಲಿ ನಾವೇ ನಿರ್ಮಾಣವನ್ನು ನಿರ್ವಹಿಸುತ್ತೇವೆ ಇನ್ನು ಕೆಲವೆಡೆ ಖಾಸಗಿ ಡೆವಲಪರ್‌ಗಳಿಂದ ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ವೆಂಕಟೇಶಪುರ ಮತ್ತು ಟ್ಯಾನರಿ ರಸ್ತೆಯಂತಹ ಭೂಗತ ನಿಲ್ದಾಣಗಳನ್ನು ಹೆಚ್ಚುವರಿ ಮಹಡಿಗಳನ್ನು ಅಳವಡಿಸಲು ಬಲವಾದ ಅಡಿಪಾಯದೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. ನಾವು ಇನ್ನೂ ಈ ನಿಲ್ದಾಣಗಳಲ್ಲಿ ಹೂಡಿಕೆಯನ್ನು ಕೋರಿಲ್ಲ ಎಂದು ಅವರು ಹೇಳಿದರು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications