ಬೆಂಗಳೂರಿಗರಿಗೆ ಶಾಕ್: ಫೆ.1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆ ಜಾರಿ?

ಬೆಂಗಳೂರು: ಬೆಂಗಳೂರಿಗರೇ ಇಲ್ಲಿ ಕೇಳಿ.. ಇನ್ನುಂದೆ ಮಟ್ರೋ ಪ್ರಯಾಣ ದುಬಾರಿಯಾಗಲಿದೆ. ಹೌದು,ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂಬರುವ ಪ್ರಯಾಣ ದರ ಏರಿಕೆಯನ್ನು ಮಾಡಲು ಈಗಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಬೆಲೆ ಏರಿಕೆಯನ್ನು ಎಷ್ಟೇ ಗೌಪ್ಯವಾಗಿಟ್ಟಿದ್ದರೂ ಕೂಡ ಫೆಬ್ರುವರಿ 1 ರಿಂದ ದರ ಏರಿಕೆಯಾಗಲಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಮಾಹಿತಿಯನ್ನು ತಿಳಿಸಿವೆ.

ಇನ್ಮಂದೆ ಪ್ರಯಾಣ ದರ ಶೇ. 41 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.ದರ ಪರಿಷ್ಕರಣೆ ಸಮಿತಿ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಯ್ಕೆ 2002ರ ಅಡಿಯಲ್ಲಿ ಶೇ. 41 ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಶಿಫಾರಸು ಮಾಡಿತು. ದರ ಪರಿಷ್ಕರಿಸಲು ರಚಿಸಲಾದ ಸಮಿತಿಯು ಶೇ. 41 ರಷ್ಟು ಹೆಚ್ಚಳವನ್ನು ಪ್ರಸ್ತಾಪ ಸಹ ಇದೆ. ಈಗ ಮೆಟ್ರೋ ಟೋಕನ್ ದರ ರೂ. 10 ರಿಂದ 60 ರ ನಡುವೆ ಇದ್ದು, ಮೆಟ್ರೋ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಸಹ ಇದೆ.

ಫೆ.1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆ ಜಾರಿ?

ಜನ ದಟ್ಟಣೆ ಇಲ್ಲದ ಸಮಯದಲ್ಲಿ ಪ್ರಯಾಣದ ಸಮಯದಲ್ಲಿ ಶೇಕಡಾ 5 ರಷ್ಟು ರಿಯಾಯಿತಿಯನ್ನು ಹೊರತುಪಡಿಸಿ, ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳಂತೆಯೇ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನ ಬಳಕೆಗೆ ಶೇಕಡಾ 5 ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002 ರ ಅಡಿಯಲ್ಲಿ ದರ ನಿಗದಿ ಸಮಿತಿ (FFC) ಹೊರಡಿಸಿದ ಆದೇಶಕ್ಕೆ BMRCL ತನ್ನ ಒಪ್ಪಿಗೆ ನೀಡಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿರುವ ಸಮಿತಿ ಅಧ್ಯಕ್ಷ ಶ್ರೀನಿವಾಸ ಕಟಿಕಿತಾಳ ಅವರು ಒಪ್ಪಿಗೆ ಸೂಚಿಸಿದರೆ ಅದು ಕೇಂದ್ರದಿಂದ ಒಪ್ಪಿಗೆ ಪಡೆದಂತೆ ಮಾಹಿತಿಯನ್ನು ತಿಳಿಸಿದ್ದಾರೆ. ಹೀಗಾಗಿ ದರ ಏರಿಕೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.

2017 ರಲ್ಲಿ ದೆಹಲಿಯಲ್ಲಿ ಕನಿಷ್ಠ ದರವನ್ನು ರೂ .2 ಮತ್ತು ಗರಿಷ್ಠ ದರವನ್ನು ರೂ. 30 ರಿಂದ 60 ಕ್ಕೆ ಎರಡುಪಟ್ಟು ಹೆಚ್ಚಿಸಲಾಗಿದೆ. ಎರಡು ಹಂತಗಳಲ್ಲಿ ದರ ಏರಿಕೆಯನ್ನು ಜಾರಿಗೆ ತಂದಿತು. ಹಂತ-1 ರಲ್ಲಿ ಮೇ 10 ರಿಂದ ಸೆಪ್ಟೆಂಬರ್ 30 ರವರೆಗೆ ಕನಿಷ್ಠ ದರವನ್ನು ಹೆಚ್ಚಿಸಿತು ಆದರೆ ಗರಿಷ್ಠ ದರವನ್ನು 50 ರೂ.ಗೆ ಹೆಚ್ಚಿಸಿತು. ಅಕ್ಟೋಬರ್ 1 ರ ನಂತರ ಅದನ್ನು 60 ರೂಗೆ ಹೆಚ್ಚಿಸಲಾಗಿತ್ತು. ಆದಾಗ್ಯೂ FFC ಶಿಫಾರಸು ಅನುಸರಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಮಾಹಿತಿಯನ್ನು ತಿಳಿಸಿದ್ದಾರೆ.

ಇವರೇ ಶುಲ್ಕ ನಿಗದಿ ಸಮಿತಿಯಲ್ಲಿದ್ದವರು!

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) - ಆರ್ ಥರಾಣಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಕರ್ನಾಟಕದ ನಿವೃತ್ತ IAS ಅಧಿಕಾರಿ ಇವಿ ರಮಣ ರೆಡ್ಡಿ ಮೆಟ್ರೋ ಬೆಲೆ ಏರಿಕೆಯ ಕುರಿತು ಸಮಿತಿಯು ಅಕ್ಟೋಬರ್ 2, 28, 2024 ರ ನಡುವೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಂಗ್ರಹ ಮಾಡಿತು. ಡಿಸೆಂಬರ್ 16 ರಂದು ಸಾರ್ವಜನಿಕ ಪ್ರತಿಕ್ರಿಯೆಗಳ ಕೋರಿಕೆಯೂ ಮುಕ್ತಾಯವಾಗಿತು.

ನಮ್ಮ ಮೆಟ್ರೋ ಸಮಿತಿಯ ಬೆಲೆ ಏರಿಕೆಯ ತನ್ನ ಅಂತಿಮ ವರದಿಯನ್ನು ಕಳೆದ ವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಂಡಳಿಗೆ ಸಲ್ಲಿಕೆ ಮಾಡಿತು. ವಿಶ್ಲೇಷಣೆಯ ಆಧಾರದ ಮೇಲೆ ಸಮಿತಿಯು ನಮ್ಮ ಮೆಟ್ರೋ ಪ್ರಯಾಣದ ಬೆಲೆಯನ್ನು ಶೇ.40 ರಿಂದ 45 ರಷ್ಟು ಏರಿಕೆಗೆ ಶಿಫಾರಸು ಮಾಡಿದೆ. ಮೆಟ್ರೋದ ಮೂಲ ದರ ಸುಮಾರು 15 ರೂ.ಗೆ ಏರಿಕೆಯಾಗಲಿದ್ದು, ಗರಿಷ್ಠ ದರ ಈಗಿರುವ 60 ರೂ.ನಿಂದ 85 ರೂ. ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ ಜನದಟ್ಟಣೆ ಇಲ್ಲದ ಸಮಯದಲ್ಲಿ ಹಾಗೂ ಭಾನುವಾರದಂದು ಹೆಚ್ಚುವರಿ ರಿಯಾಯಿತಿಗಳನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+