ಸಾಮಾನ್ಯವಾಗಿ ಭಾರತೀಯ ರೈಲ್ವೆ ಆಗಲಿ ಅಥವಾ ನಮ್ಮ ಮೆಟ್ರೋ ಆಗಲಿ, ಯಾವುದೇ ನಿರ್ವಹಣಾ ಕಾರ್ಯವಿದ್ದಾಗ ಈ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ನಮ್ಮ ಮೆಟ್ರೋದಲ್ಲಿ ನಿರ್ವಹಣಾ ಕಾಮಗಾರಿಯಿಂದಾಗಿ ಕೆಲವು ಕಾಲ ಕೊಂಚ ಪ್ರಯಾಣದಲ್ಲಿ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾರ್ಯದ ನಿಟ್ಟಿನಲ್ಲಿ ಕೆಲವು ಕಡೆಗಳಲ್ಲಿ ಮೆಟ್ರೋ ಸ್ಥಗಿತವಾಗಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ. ಯಾವ ದಿನ, ಎಷ್ಟು ಸಮಯಕ್ಕೆ ನಮ್ಮ ಮೆಟ್ರೋ ಸ್ಥಗಿತವಾಗಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವ ಸ್ಥಳದಲ್ಲಿ, ಯಾವಾಗ ಮೆಟ್ರೋ ಸೇವೆ ವ್ಯತ್ಯಯ
ನವೆಂಬರ್ 5 ರಂದು ಬೆಳಗ್ಗೆ 9 ಗಂಟೆವರೆಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಇಂದಿರಾನಗರದವರೆಗೆ ನಿರ್ವಹಣಾ ಕಾಮಗಾರಿಯಿಂದಾಗಿ ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಇನ್ನು ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೆಟ್ರೋ ಸೇವೆ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಾಮಗಾರಿಯು ಪೂರ್ಣವಾದ ಬಳಿಕ ಮೆಟ್ರೋ ಸೇವೆ ಎಂದಿನಂತೆ ಮತ್ತೆ ಪ್ರಾರಂಭ ಮಾಡಲಾಗುತ್ತದೆ ಎಂದು ಕೂಡಾ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ನವೆಂಬರ್ 5 ರಂದು ನೇರಳೆ ಮಾರ್ಗದಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಎಂ.ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ನವೆಂಬರ್ 5 ರಂದು ಬೆಳಗ್ಗೆ 7.00 ಗಂಟೆಗೆ ಬದಲಾಗಿ 9.00 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆ 9.00 ಗಂಟೆಯ ನಂತರ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಇರುತ್ತದೆ.
ಇನ್ನು ಚಲ್ಲಘಟ್ಟ ಮತ್ತು ಎಂ.ಜಿ ರಸ್ತೆ, ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ), ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವಿನ ಮಾರ್ಗಗಳಲ್ಲಿ, ರೈಲುಗಳ ಸೇವೆಯು ಬೆಳಿಗ್ಗೆ 7.00 ಗಂಟೆಗೆ ಸರಿಯಾಗಿ ಎಂದಿನ ವೇಳಾಪಟ್ಟಿಯಂತೆ ಸಂಚಾರ ಮಾಡಲಿದೆ.
ಕೆಲವು ಮಾರ್ಗಗಳಲ್ಲಿ ಆಗುವ ಬದಲಾವಣೆ ಬಗ್ಗೆ ನಮ್ಮ ಮೆಟ್ರೋ ಪಯಾಣಿಕರು ಗಮನಿಸಬೇಕು ಎಂದು ನಮ್ಮ ಮೆಟ್ರೋ ವಿನಂತಿಸಿದ್ದು, ಸೇವೆ ವ್ಯತ್ಯಯಕ್ಕೆ ವಿಷಾದ ವ್ಯಕ್ತಪಡಿಸಿದೆ. ಇನ್ನು ನಿಮ್ಮ ಪ್ರಯಾಣದ ಸಮಯವನ್ನು ಅದಕ್ಕೆ ತಕ್ಕುದಾಗಿ ಬದಲಾವಣೆ ಮಾಡಬೇಕಾಗುತ್ತದೆ.


Click it and Unblock the Notifications