ಬೆಂಗಳೂರಿನ ನಮ್ಮ ಮೆಟ್ರೊವಿನ ಯೆಲ್ಲೋ ಲೇನ್ ಶೀಘ್ರವೇ ಪೂರ್ಣವಾಗುವ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆಯಲ್ಲಿದ್ದ ಜನರಿಗೆ ಇಲ್ಲೊಂದು ಕಹಿಸುದ್ದಿಯಿದೆ. ಹೌದು, ಸೇವೆ ವಿಳಂಬವಾಗುವ ಸಾಧ್ಯತೆ ಇರುವುದರಿಂದಾಗಿ ಬೆಂಗಳೂರಿಗರು ಇನ್ನೂ ಆರು ತಿಂಗಳುಗಳ ಕಾಲ ಯೆಲ್ಲೋ ಲೇನ್ ಆರಂಭಕ್ಕೆ ಕಾಯಬೇಕಾಗಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಪ್ರಕಾರ, ಚೀನಾದಿಂದ ಆಗಮಿಸುವ ಮೆಟ್ರೋ ಕೋಚ್‌ಗಳ ವಿತರಣೆ ವಿಳಂಬವಾದ ಕಾರಣದಿಂದಾಗಿ ಈ ಲೇನ್ ಆರಂಭವು ಕೂಡಾ ವಿಳಂಬವಾಗಲಿದೆ ಎಂದು ಕಾರಣವನ್ನು ನೀಡಿದೆ. ಹಾಗೆಯೇ ಸುಮಾರು ಆರು ತಿಂಗಳುಗಳು ಯಾಕೆ ವಿಳಂಬವಾಗುತ್ತದೆ ಎಂಬುವುದಕ್ಕೆ ಕಾರಣವನ್ನು ಕೂಡಾ ನೀಡಿದೆ.

ಹಲವಾರು ತಿಂಗಳುಗಳ ಅವಧಿಯ ವಿಳಂಬಕ್ಕೆ ಮುಖ್ಯ ಕಾರಣವೆಂದರೆ ಚೀನೀ ಕೋಚ್ ಪೂರೈಕೆ ಕಂಪನಿಯ ಇಂಜಿನಿಯರ್‌ಗಳು ಬರುವುದು ವಿಳಂಬವಾಗಿರುವುದು ಆಗಿದೆ. ಈ ಎಂಜಿನಿಯರ್‌ಗಳಿಗೆ ಇತ್ತೀಚೆಗೆ ಭಾರತಕ್ಕೆ ವೀಸಾ ನೀಡಲಾಗಿದೆ.
2019ರಲ್ಲಿ ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕೋಆಪರೇಷನ್ (ಸಿಆರ್‌ಆರ್‌ಸಿ) ಎಂಬ ಚೀನಾ ಫ್ಯಾಕ್ಟರಿ ಬಿಎಂಆರ್‌ಸಿಎಲ್‌ನಿಂದ ಸುಮಾರು 216 ಮೆಟ್ರೋ ಕೋಚ್‌ಗಳನ್ನು ತಯಾರಿಸಿ ನೀಡುವ 1,578 ಕೋಟಿ ರೂಪಾಯಿಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಆದರೆ ಭಾರತದಲ್ಲಿ ಪ್ಲಾಂಟ್ ಇಲ್ಲದ ಕಾರಣದಿಂದಾಗಿ ಈ ಕಂಪನಿಯು ಕೋಚ್‌ಗಳನ್ನು ಡೆಲಿವರಿ ಮಾಡಲು ಸಾಧ್ಯವಾಗಿಲ್ಲ.
ಇನ್ನು ಬಿಎಂಆರ್‌ಸಿಎಲ್‌ನ ಅಧಿಕಾರಿಗಳ ಪ್ರಕಾರ ಒಮ್ಮೆ ಚೀನಾದಿಂದ ರೈಲಿನ ಕೋಚ್‌ಗಳು ಲಭ್ಯವಾದಂತೆ ಮೂರು ತಿಂಗಳುಗಳ ಕಾಲ ಬಿಎಂಆರ್‌ಸಿಎಲ್ ಪ್ರಾಯೋಗಿಕವಾಗಿ ಮೆಟ್ರೋಲ್ ಸೇವೆಯನ್ನು ನಡೆಸಲಿದೆ. ಅದಾದ ಬಳಿಕ ಸಾರ್ವಜನಿಕರಿಗೆ ಮೆಟ್ರೋ ಸೇವೆಯನ್ನು ಆರಂಭಿಸಲಿದೆ. ಈ ಮೂರು ತಿಂಗಳ ಅವಧಿಯಲ್ಲಿ ವಾಣಿಜ್ಯ ಕಾರ್ಯಾಚರಣೆಗಾಗಿ ಅರ್ಜಿಯನ್ನು ಕೂಡಾ ಬಿಎಂಆರ್‌ಸಿಎಲ್ ಸಲ್ಲಿಸಲಿದೆ.
ಈ ನಡುವೆ ನಮಗಿರುವ ಗುಡ್ ನ್ಯೂಸ್ ಏನೆಂದರೆ ಚೀನಾದಿಂದ ಕೋಚ್‌ಗಳು ಈಗಾಗಲೇ ರಫ್ತಾಗಿದೆ ಹಾಗೂ ಚೀನಾದ ಇಂಜಿಯರ್‌ಗಳು ಸಿಲಿಕಾನ್ ಸಿಟಿಗೆ ಭೇಟಿ ನೀಡಿ ಕೋಚ್‌ಗಳನ್ನು ಟೆಸ್ಟ್ ಮಾಡಲಿದ್ದಾರೆ. ಇಂಜಿನಿಯರ್‌ಗಳ ವೀಸಾ ಲಭ್ಯವಾಗಿದ್ದು, ಈ ತಿಂಗಳ ಕೊನೆಯಲ್ಲಿ ಬೆಂಗಳೂರಿಗೆ ಬರಲಿದ್ದಾರೆ.
ವಿಳಂಬಕ್ಕೆ ಇನ್ನೊಂದು ಕಾರಣ
ಇನ್ನು ಎಪ್ರಿಲ್ ಮೇ ತಿಂಗಳಿನಲ್ಲಿ ಲೋಕ ಸಭೆ ಚುನಾವಣೆಯು ನಡೆಯಲಿದೆ. ಯೆಲ್ಲೋ ಲೇನ್ ಆರಂಭ ವಿಳಂಬ ಈ ಚುನಾವಣೆಯ ನೀತಿ ಸಂಹಿತೆಯು ಕೂಡಾ ಒಂದು ಕಾರಣವಾಗಿದೆ. ಎಲ್ಲ ಕಾರ್ಯಗಳು ಪೂರ್ಣವಾದರೆ ಜುಲೈ ತಿಂಗಳಲ್ಲಿ ಕಾರ್ಯಾಚರಣೆ ಸಾಧ್ಯತೆಯಿದೆ. ರೈಲು ಸಿಗ್ನಲಿಂಗ್ ಸಿಸ್ಟಮ್ ಮೊದಲಾದ ವ್ಯವಸ್ಥೆಗಳಲ್ಲಿ ಯಾವುದೇ ಅಡೆತಡೆ ಬಾರದಂತೆ ನೋಡಿಕೊಂಡ ಬಳಿಕ ಆರಂಭಿಸಲಾಗುತ್ತದೆ ಎಂದು ಮಾಧ್ಯಮಕ್ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಲೇನ್‌ನ ಮಹತ್ವವೇನು?
19.15-ಕಿಮೀ ಆಗಿರುವ ಳದಿ ಮಾರ್ಗವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮೆಟ್ರೋ ಲೇನ್ ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ. ಆದ್ದರಿಂದಾಗಿ ಇದು ಅತೀ ಮಹತ್ವವನ್ನು ಪಡೆದುಕೊಂಡಿದೆ.


Click it and Unblock the Notifications