Metro: ಇನ್ನು 3 ಗಂಟೆ ಕಾಯುವಿಕೆ ಇಲ್ಲ! ಐಟಿ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ..ಟ್ರಾಫಿಕ್ ಕಿರಿಕಿರಿಯೂ ಇರಲ್ಲ! ಯಾವ ಮಾರ್ಗ?

ಇನ್ಮುಂದೆ 3 ಗಂಟೆಗಳ ಕಾಯುವಿಕೆ ಇರಲ್ಲ! ಐಟಿ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಇದು. ಹೌದು,ಸಂಚಾರ ದಟ್ಟಣೆಯಿಂದ ಬೆಂಗಳೂರಿನ ಜನತೆ ಬೇಸತ್ತು ಸತ್ತ ಸುಣ್ಣದಂತೆ ಆಗಿದ್ದರೆ. ಇದಕೆಲ್ಲಾ ನೆಮ್ಮದಿ ಸಿಗುತ್ತದೆ.ಅದರಲ್ಲೂ ಐಟಿ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಎಂದೇ ಹೇಳಬಹುದು.ಇನ್ನೂ ಟ್ರಾಫಿಕ್ ಕಿರಿಕಿರಿ ಅಂತ ಕಾಯುವಿಕೆಯ ಅಗತ್ಯವಂತೂ ಇಲ್ಲವೇ ಇಲ್ಲ. ಬಹುಬೇಗನೆ ನೀವು ಕೆಲಸಕ್ಕೆ ಇನ್ಮುಂದೆ ಹೋಗಬಹುದು.

ಹೌದು,ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ, ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕವನ್ನು ನೀಡಲಿದ್ದುಮ ಇದರ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಮಾರ್ಗವು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕವನ್ನು ಒದಗಿಸುತ್ತದೆ, ಪ್ರಮುಖ ತಂತ್ರಜ್ಞಾನ ಕೇಂದ್ರಗಳಿಗೆ ಹೋಗುವ ಮಂದಿಗೆ ಸಂಚಾರ ದಟ್ಟಣೆ ಸಮಸ್ಯೆಯಂತೂ ಇದ್ದೇ ಇರುತ್ತಿತ್ತು..ಈ ಮಾರ್ಗದಲ್ಲಿ ಮೆಟ್ರೋ ಓಡಾಟ ಮಾಡಿದ್ದರೆ ಸಂಚಾರ ದಟ್ಟಣೆಯನ್ನು ಕಡಿಮೆಯಾಗುತ್ತದೆ.

Metro: ಇನ್ನು 3 ಗಂಟೆ ಕಾಯುವಿಕೆ ಇಲ್ಲ! ಯಾವ ಮಾರ್ಗ?

ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುವ ಚಾಲಕರಹಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಬೆಂಗಳೂರಿನ ಪ್ರಯಾಣಿಕರು ಬಹುದಿನಗಳಿಂದ ಕಾಯುತ್ತಿದ್ದಾರೆ.ಆದರಿಂದ ಬಹುಬೇಗನೆ ಈ ಭಾಗದಲ್ಲಿ ಹಳದಿ ಮಾರ್ಗದ ರೈಲುಗಳು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಈ ಮಾರ್ಗದಲ್ಲಿ ಸಂಚಾರ ಮಾಡಲು ಇನ್ನೂ ಮೂರು ರೈಲು ಬೋಗಿಗಳ ಅವಶ್ಯಕತೆ ಇದೆ. ಶೀಘ್ರದಲ್ಲೇ ಮೂರನೇ ಸೆಟ್ ಮೆಟ್ರೋ ಬೋಗಿಗಳು ಮೇ ಮಧ್ಯಭಾಗದಲ್ಲಿ ಬರಲಿವೆಈ ಮಾರ್ಗವು ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ ಬೆಂಗಳೂರಿನ ಅತಿದೊಡ್ಡ ಐಟಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿಗೆ ನಿರ್ಣಾಯಕ ಕೊಂಡಿಯಾಗಿ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತದೆ.

ಎಲೆಕ್ಟ್ರಾನಿಕ್ಸ್ ಸಿಟಿ ಬೊಮ್ಮಸಂದ್ರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿದೆ, ಇದು ಲಕ್ಷಾಂತರ ಐಟಿ ಉದ್ಯೋಗಿಗಳ ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಹಳದಿ ಮಾರ್ಗವು ಪ್ರಮುಖ ಕೊಂಡಿಯನ್ನಾಗಿ ಮಾಡುತ್ತದೆ. ಇನ್ಫೋಸಿಸ್, ವಿಪ್ರೋ ಮತ್ತು ಎಚ್‌ಸಿಎಲ್‌ನಂತಹ ಪ್ರಮುಖ ತಂತ್ರಜ್ಞಾನ ಕಂಪನಿಗಳು ಈ ಪ್ರದೇಶದಲ್ಲಿವೆ, ಅದಕ್ಕಾಗಿಯೇ ಇದು ಆಗಾಗ್ಗೆ ತೀವ್ರ ಟ್ರಾಫಿಕ್ ಜಾಮ್‌ಗಳಂತಹ ಸಮಸ್ಸೆಗಳು ಇದ್ದವು. ವಿಶೇಷವಾಗಿ ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ಅಂತೂ ಹೆಚ್ಚಾಗಿ ಇದ್ದೇ ಇರುತ್ತಿತ್ತು.

ಈ ಸಂದರ್ಭಗಳಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಈ ಕಾರಿಡಾರ್‌ಗೆ ದಕ್ಷ ಸಾರ್ವಜನಿಕ ಸಾರಿಗೆಯ ಅಗತ್ಯವು ಅತ್ಯಗತ್ಯವಾಗಿದೆ. ಬೆಂಗಳೂರಿನಲ್ಲಿ ಪ್ರಯಾಣಿಕರು 90 ನಿಮಿಷದಿಂದ ಮೂರು ಗಂಟೆಗಳವರೆಗೆ ಭಾರೀ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡ ಹಲವಾರು ನಿದರ್ಶನಗಳಿವೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರೀ ಮಳೆಯ ಸಮಯದಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ನಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾದ ನಂತರ ಸಾವಿರಾರು ಜನರು ತಮ್ಮ ಕಂಪನಿಯ ವಾಹನಗಳು ಮತ್ತು ಬಸ್‌ಗಳನ್ನು ಬಿಟ್ಟು ನಡೆದುಕೊಂಡು ಮನೆಗೆ ತೆರಳಲು ಆಯ್ಕೆ ಮಾಡಿಕೊಂಡರು. ಈ ಅಡಚಣೆ ಕನಿಷ್ಠ ಮೂರು ಗಂಟೆಗಳ ಕಾಲ ನಡೆಯಿತು ಎಂಬ ವರದಿಗಳು ಆಗಿವೆ.

ನಮ್ಮ ಮೆಟ್ರೋ ಹಳದಿ ಮಾರ್ಗ

ನಮ್ಮ ಮೆಟ್ರೋದ ಹಳದಿ ಮಾರ್ಗದ (ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ) ಬಹುನಿರೀಕ್ಷಿತ ಉದ್ಘಾಟನೆ ಅಂತಿಮ ಹಂತದ ಹತ್ತಿರದಲ್ಲಿ ಇದೆ. ಏಕೆಂದರೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೇ ತಿಂಗಳಲ್ಲಿ ತನ್ನ ಮೂರನೇ ಸೆಟ್ ಕೋಚ್‌ಗಳನ್ನು ಸ್ವೀಕರಿಸಲಿದೆ. ಕಳೆದ ಏಪ್ರಿಲ್ 29 ರಂದು, ತಿತಾಘರ್ ರೈಲ್ ಸಿಸ್ಟಮ್ಸ್ ತನ್ನ ಪಶ್ಚಿಮ ಬಂಗಾಳ ಕಾರ್ಖಾನೆಯಿಂದ ಮೂರು ರೈಲು ಬೋಗಿಗಳನ್ನು ಕಳುಹಿಸಿತು, ಮತ್ತು ಉಳಿದ ಮೂರು ಮೇ 2 ರೊಳಗೆ ರವಾನೆಯಾಗುವ ನಿರೀಕ್ಷೆಯಿದೆ, ಮೇ 15 ರೊಳಗೆ ಬೆಂಗಳೂರಿಗೆ ತಲುಪಲಿವೆ.

ಇವು 'ಭಾರತದಲ್ಲಿ ತಯಾರಿಸಲಾದ' ಚಾಲಕರಹಿತ ರೈಲುಗಳ ಭಾಗವಾಗಿದ್ದು, ಅವುಗಳಲ್ಲಿ ಮೊದಲನೆಯದನ್ನು ಜನವರಿ 2025 ರಲ್ಲಿ ರವಾನೆಯನ್ನು ಮಾಡಲಾಗಿತ್ತು.ಕಂಪನಿಯು ಉತ್ಪಾದನೆಯನ್ನು ವೇಗಗೊಳಿಸಲು ಮತ್ತು ಸೆಪ್ಟೆಂಬರ್ 2025 ರ ವೇಳೆಗೆ ತಿಂಗಳಿಗೆ ಎರಡು ರೈಲು ಸೆಟ್‌ಗಳನ್ನು ವಿತರಿಸಲು ಪ್ರಾರಂಭಿಸಲು ಯೋಜನೆಯನ್ನು ಮಾಡಿತ್ತು.

ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆವರೆಗೆ ವಿಸ್ತರಿಸಲಾದ ಹಳದಿ ಮೆಟ್ರೋ ಮಾರ್ಗವು 18.8 ಕಿಲೋಮೀಟರ್ ಉದ್ದವಿದ್ದು, ದಕ್ಷಿಣ ಬೆಂಗಳೂರು ಮತ್ತು ನಗರ ಕೇಂದ್ರದ ನಡುವಿನ ಸಂಚಾರಕ್ಕೆ ಪ್ರಮುಖ ಸಂಪರ್ಕನ್ನು ನೀಡುತ್ತದೆ. ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್.ವಿ. ರಸ್ತೆ ಎಂಬ 16 ನಿಲ್ದಾಣಗಳಿವೆ.

ಈ ಮಾರ್ಗದಲ್ಲಿ ಐಟಿ ಉದ್ಯೋಗಿ ಕೆಲಸಕ್ಕೆ ಹೋಗುವ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ದಕ್ಷಿಣ ಬೆಂಗಳೂರಿನ ಜನಸಂಚಾರ ಪ್ರದೇಶದ ಕೇಂದ್ರವನ್ನು ಇದು ಸಂಪರ್ಕಿಸಲಿದೆ. ಹಳದಿ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭದ ತಯಾರಿ ಅಂತಿಮ ಹಂತದಲ್ಲಿದೆ. ಆರಂಭಿಕ ದಿನಗಳಲ್ಲಿ ರೈಲುಗಳು ಪ್ರತಿ ಅರ್ಧ ಗಂಟೆಗೆ ಒಮ್ಮೆ ಸಂಚರಿಸಲಿದ್ದು, ಈ ಹಂತದಲ್ಲೇ ದಿನಕ್ಕೆ 50,000 ಜನರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+