ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚೆಗಷ್ಟೇ ಈ ಮಾರ್ಗದ ರೈಲು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳಿಗೆ ಅಗತ್ಯವಾದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ಪ್ರಮಾಣೀಕರಣ (ISA) ದೊರೆತಿದೆ ಎಂದು ಅಧಿಕೃತ ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಇಟಲಿಯ ಸರ್ಕಾರಿ ಸ್ವಾಮ್ಯದ ಇಟಾಲ್ಸರ್ಟಿಫರ್ ಕಂಪನಿಯು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (BMRCL) ಈ ಪ್ರಮಾಣಪತ್ರವನ್ನು ಸಲ್ಲಿಸಿದೆ. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅದನ್ನು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಗೆ (CMRS) ಸಲ್ಲಿಸಲಾಗುವುದು ಎಂದು ವರದಿಯಲ್ಲಿ ಮಾಹಿತಿಯನ್ನು ತಿಳಿಸಿದೆ.

ಚಾಲಕ ರಹಿತ ರೈಲು ಸಂಚಾರವು ರೈಲುಗಳ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಐಎಸ್‌ಎಗೆ ಸೂಚನೆಯನ್ನು ಸಹ ನೀಡಿತ್ತು. ಬಿಎಂಆರ್‌ಸಿಎಲ್ ಸುರಕ್ಷತಾ ಸಮಗ್ರತಾ ಮಟ್ಟ 4ನ್ನು ಅನುಸರಿಸುತ್ತಿದೆ. ಇದು ಮೆಟ್ರೋ ವ್ಯವಸ್ಥೆಯಲ್ಲಿ ಅತ್ಯುನ್ನತ ಸುರಕ್ಷತಾ ಕ್ರಮವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹಳದಿ ಮಾರ್ಗದ ಸಿಗ್ನಲಿಂಗ್ ಗುತ್ತಿಗೆದಾರರಾದ ಸೀಮೆನ್ಸ್ ಇಂಡಿಯಾ ಲಿಮಿಟೆಡ್-ಸೀಮೆನ್ಸ್ ಎಜಿ, ರೈಲುಗಳ ಚಲನೆಯನ್ನು ನಿಯಂತ್ರಿಸುವ ಸಾಫ್ಟ್‌ವೇರ್‌ನಲ್ಲಿ ಕೆಲವು ದೋಷಗಳನ್ನು ಪತ್ತೆ ಮಾಡಿತು. ಈ ಕಾರಣದಿಂದಾಗಿ ಐಎಸ್‌ಎ ವರದಿಯು ವಿಳಂಬವಾಗಿದೆ.
ಮೆಟ್ರೋ ಹಳಿ, ನಿಲ್ದಾಣಗಳು, ಮಾರ್ಗಗಳು ಮತ್ತು ಇತರ ಅಂಶಗಳನ್ನು ಪರಿಶೀಲಿಸಿ, ಪ್ರಯಾಣಿಕರ ಸಂಚಾರಕ್ಕೆ ಸುರಕ್ಷಿತವೇ ಎಂದು ಸಿಎಂಆರ್‌ಎಸ್ ನಿರ್ಧಾರವನ್ನು ಮಾಡಿದೆ. ಸಿಎಂಆರ್‌ಎಸ್ ವರದಿಯನ್ನು ಸಾಮಾನ್ಯವಾಗಿ ನೀಡಲು ಒಂದು ವಾರ ತಗೆದುಕೊಳ್ಳತ್ತದೆ. ವರದಿಯಲ್ಲಿ ಕೆಲವು ಷರತ್ತುಗಳಿರಬಹುದು.ಅವುಗಳನ್ನು ಬಿಎಂಆರ್‌ಸಿಎಲ್ ಪೂರೈಸಬೇಕಾಗುತ್ತದೆ.
ಹಳದಿ ಮಾರ್ಗವನ್ನು ಓಪನ್ ಮಾಡಲು ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಸಮಾನ ಪಾಲುದಾರನಾಗಿರುವ ಕೇಂದ್ರ ಸರ್ಕಾರದಿಂದಲೂ ಅನುಮೋದನೆ ಪಡೆಯುವುದು ಕಡ್ಡಾಯ. ಜುಲೈ ವೇಳೆಗೆ ಹಳದಿ ಮಾರ್ಗವು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಈ ಹಿಂದೆ ಮಾಹಿತಿಯನ್ನು ತಿಳಿಸಿದ್ದರು.
ಬಿಎಂಆರ್‌ಸಿಎಲ್ ಹಳದಿ ಮಾರ್ಗ ಉದ್ಘಾಟನೆಯಾದ ನಂತರ ಮೂರು ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತದೆ. 20 ರಿಂದ 25 ನಿಮಿಷಗಳಿಗೊಮ್ಮೆ ಒಂದೊಂದು ರೈಲು ಸಂಚಾರವನ್ನು ಮಾಡುತ್ತೇವೆ.ಒಟ್ಟು 16 ನಿಲ್ದಾಣಗಳಲ್ಲಿ ರೈಲುಗಳು ಸಂಚಾರವನ್ನು ಮಾಡುತ್ತೇವೆ.
ಕೋಲ್ಕತ್ತಾ ಮೂಲದ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ನಾಲ್ಕನೇ ರೈಲನ್ನು ಕಳುಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ಧಾರೆ.
ಎಲ್ಲಾ ಆರು ಬೋಗಿಗಳನ್ನು ಹೊಂದಿರುವ ರೈಲು ಸಿದ್ಧವಾದ್ದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ರೈಲು ಸುಮಾರು 10 ದಿನಗಳಲ್ಲಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಇದೆ.
ಹಳದಿ ಮಾರ್ಗವು ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕವನ್ನು ಒದಗಿಸುತ್ತದೆ. ಇದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಕಕಡಿಮೆಯಾಗುತ್ತದೆ.


Click it and Unblock the Notifications