Metro Yellow Line: ನಮ್ಮ ಮೆಟ್ರೋ: ಆಗಸ್ಟ್ ಆರಂಭದಲ್ಲಿ ಹಳದಿ ಮಾರ್ಗ ತೆರೆಯುವ ಸಾಧ್ಯತೆ..ಸುರಕ್ಷತಾ ಪರಿಶೀಲನೆ..!

ಬೆಂಗಳೂರಿನ ಭಾರೀ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರಿ ಜೀವನಾಡಿ ನಮ್ಮ ಮೆಟ್ರೋ ತನ್ನ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಿ ಸಾರ್ವಜನಿಕರ ತನ್ನ ಸೇವೆಯನ್ನು ಒದಗಿಸುತ್ತಿದೆ.ಹೌದು,ನಮ್ಮ ಮೆಟ್ರೋ ಈಗಾಗಳೇ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗದಲ್ಲಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದು,ಇದೀಗ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚಾರವನ್ನು ಆರಂಭಿಸಲು ಸಕಲ ಸಿದ್ದತೆಯನ್ನು ಮಾಡಿದೆ.

ಹೌದು,ಬಹಳ ದಿನಗಳಿಂದ ಬೆಂಗಳೂರಿನವರ ಆಸೆಯ ಚಾಲಕ ರಹಿತ ಮೆಟ್ರೋ ಯೋಜನೆಯು ವಿಳಂಬದಂತಹ ಸಮಸ್ಯೆಯನ್ನು ಎದುರಿಸುತ್ತಲ್ಲೇ ಇದೆ. ಬಿಎಂಆರ್ ಸಿಎಲ್ ಹಳದಿ ಮಾರ್ಗದ ಮೆಟ್ರೋ ಓಡಾಟದ ಸಂಚಾರವನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಿತ್ತದೆ.

 ನಮ್ಮ ಮೆಟ್ರೋ: ಆಗಸ್ಟ್ ಆರಂಭದಲ್ಲಿ ಹಳದಿ ಮಾರ್ಗ ತೆರೆಯುವ ಸಾಧ್ಯತೆ

ನಮ್ಮ ಮೆಟ್ರೋದ ಹಳದಿ ಮಾರ್ಗವು 19.15 ಕಿ.ಮೀ ಉದ್ದವಾದ ಮಾರ್ಗವಾಗಿದೆ. ಈ ಮಾರ್ಗವು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್,ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕವನ್ನು ನಿಮ್ಮಗೆ ಕಲ್ಪಿಸುತ್ತದೆ. ಹಳದಿ ಮಾರ್ಗದ ಸಂಚಾರ ಓಡಾಟ ಈಗಾಗಲೇ ಆರಂಭವಾಗಲ್ಲೇ ಬೇಕಿತ್ತು.ಕೆಲವು ಕಾರಣ ಹಾಗೂ ಮೆಟ್ರೋ ರೈಲು ಕೊರೆತೆಯಿಂದಾಗಿ ವಿಳಂಬವಾಗಿತ್ತು.ಆದರೆ ಈಗ ಎಲ್ಲಾ ಪರಿಶೀಲನೆಗಳು ಪೂರ್ಣಗೊಳ್ಳವಂತಹ ಹಂತದಲ್ಲಿ ಇವೆ.

ಮೆಟ್ರೋ ಸಂಚಾರ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾದ್ದರೆ ಸಾರ್ವಜನಿಕರಿಗೆ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೂ ಕೂಡ ಹೆಚ್ಚಿನ ಸಹಾಯವಾಗುತ್ತದೆ.

ಹಳದಿ ಮಾರ್ಗ ಏನೆಲ್ಲಾ ಸಾವಲುಗಳು.?

ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸದ್ಯಕ್ಕೆ ಕೇವಲ ಮೂರು ರೈಲುಗಳನ್ನು ಮಾತ್ರ ಒಳಗೊಂಡಿದೆ. ಗ ಪ್ರಯಾಣಕ್ಕೆ ಪ್ರತಿ 25 ನಿಮಿಷಗಳಿಗೊಮ್ಮೆ ಒಂದೊಂದು ಮೆಟ್ರೋ ರೈಲು ಓಡಾಟ ಹಳದಿ ಮಾರ್ಗ ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಚಾಲಕನಿಲ್ಲದ ರೈಲುಗಳನ್ನು ಬಿಎಂಆರ್‌ಸಿಎಲ್ ಓಡಿಸುವುದರಿಂದ, ಸಿಗ್ನಲಿಂಗ್‌ ಮೌಲ್ಯಕರಣ ಇದ್ದೇ ಇರುತ್ತದೆ. ಸುರಕ್ಷತಾ ಮೌಲ್ಯಮಾಪನ (ಐಎಸ್‌ಎ) ಪ್ರಮಾಣೀಕರಣವು ಇದೆ.

ಸುರಕ್ಷತಾ ಮೌಲ್ಯಮಾಪನ (ಐಎಸ್‌ಎ) ಪ್ರಮಾಣೀಕರಣವು ಇರುತ್ತದೆ. ಹಳದಿ ಮಾರ್ಗವು ಸಿಗ್ನಲಿಂಗ್ ಗುತ್ತಿಗೆದಾರರಾದ ಸೀಮೆನ್ಸ್ ಇಂಡಿಯಾ ಲಿಮಿಟೆಡ್-ಸೀಮೆನ್ಸ್ ಎಜಿ, ಐಎಸ್‌ಎ ಪ್ರಮಾಣೀಕರು ಇಲ್ಲಿದ್ದಾರೆ. ಮೂರನೇ ವ್ಯಕ್ತಿಯ ಮೌಲ್ಯಮಾಪಕರಿಗೆ ಕರಡು ವರದಿಯನ್ನು ಸಲ್ಲಿಸಿದೆ.ಇದು ಜುಲೈ 7 ಅಥಾವ 8 ರೊಳಗೆ ಬರುವ ನಿರೀಕ್ಷೆಯಿದೆ. ಈ ವರದಿ ಬಂದ ನಂತರ, ಬಿಎಂಆರ್‌ಸಿಎಲ್ ಶಾಸನಬದ್ಧ ಸುರಕ್ಷತಾ ತಪಾಸಣೆ ನಡೆಸಲು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ದಕ್ಷಿಣ ವೃತ್ತ) ಅವರನ್ನು ಅಧಿಕೃತವಾಗಿ ಸಂಪರ್ಕದಲ್ಲಿ ಇರುತ್ತದೆ.

ಜುಲೈ 15 ರ ನಂತರ ಸುರಕ್ಷತಾ ತಪಾಸಣೆ ನಡೆಯುವ ಸಾಧ್ಯತೆಯಿದೆ. ಇದು ಅನೇಕ ನಿಲ್ದಾಣಗಳನ್ನು ಹೊಂದಿರುವ ದೊಡ್ಡ ಮಾರ್ಗವಾಗಿರುವುದರಿಂದ, ಈ ಪ್ರಕ್ರಿಯೆಗೆ ಮೂರರಿಂದ ನಾಲ್ಕು ದಿನಗಳು ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಕೊಡುತ್ತದೆ. ತಪಾಸಣೆಯಲ್ಲಿ ಎಲ್ಲಾ 16 ನಿಲ್ದಾಣಗಳು ಇವೆ.

ಹಳಿ ಪರಿಶೀಲನೆ ಮತ್ತು ವಿವಿಧ ಕಾರ್ಯಾಚರಣಾ ಪರೀಕ್ಷೆಗಳು ಸೇರಿಗೋಂಡಿದೆ.ಬೈಯಪ್ಪನಹಳ್ಳಿ ಡಿಪೋದಲ್ಲಿರುವ ಕಾರ್ಯಾಚರಣಾ ನಿಯಂತ್ರಣ ಕೇಂದ್ರಕ್ಕೆ (OCC) ಭೇಟಿ ನೀಡಲು ಒಂದು ದಿನವನ್ನು ಮೀಸಲಿಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ಧಾರೆ.

ಸಮಾರಂಭ ಮತ್ತು ಸಿದ್ಧತೆಗಳು
ಜುಲೈ ಅಂತ್ಯದ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್ ರಾವ್ ಹೇಳಿದ್ದಾರೆ. ನಾವು ಬಿಸಿಎಂಆರ್‌ಎಸ್ ಅನುಮತಿ ಪಡೆದ ನಂತರ ಉದ್ಘಾಟನಾ ದಿನಾಂಕವನ್ನು ಘೋಷಿಸುತ್ತೇವೆ ಎಂದು ಹೇಳಿದ್ದಾರೆ.

ಆಗಸ್ಟ್ ಉದ್ಘಾಟನೆ

ಸಂಸತ್ತಿನ ಮಳೆಗಾಲದ ಅಧಿವೇಶನದ ದಿನಾಂಕಗಳು ಹೊಂದಿಕೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ಬಿಎಂಆರ್‌ಸಿಎಲ್ ಸಮಾರಂಭವನ್ನು ಸಿಲ್ಕ್ ಬೋರ್ಡ್ ಬಳಿಯ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಸಲಾಗಿದೆ.

ಕೇವಲ ಏಳು ನಿಲ್ದಾಣಗಳನ್ನು ತೆರೆಯುವ ಯೋಜನೆಯಲ್ಲಿ ಬಂದಿತ್ತು. ಆದರೆ ಈಗ ಬಿಎಂಆರ್‌ಸಿಎಲ್ ಎಲ್ಲಾ 16 ನಿಲ್ದಾಣಗಳನ್ನು ನಿರ್ವಹಿಸಲು ಸಿದ್ಧತೆಯನ್ನು ಮಾಡುತ್ತದೆ. ಎಲ್ಲಾ ನಿಲ್ದಾಣಗಳನ್ನು ನಿರ್ವಹಿಸುತ್ತೇವೆ ಮತ್ತು ಪ್ರತಿ 25 ನಿಮಿಷಗಳಿಗೊಮ್ಮೆ ರೈಲುಗಳನ್ನು ಓಡುತ್ತವೆ. ಕೇವಲ ಏಳು ನಿಲ್ದಾಣಗಳನ್ನು ತೆರೆಯುವುದರಿಂದ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಮೂರು ರೈಲು ಸೇವೆಯಲ್ಲಿರುತ್ತವೆ ಮತ್ತು ರಾತ್ರಿಯಲ್ಲಿ ನಿರ್ವಹಣೆಯ ಮಾಡಲಾಗಿದೆ ಎಂದು ಅಧಿಕಾರಿಯನ್ನು ಮಾಡುತ್ತಿದ್ದಾರೆ.

ಸಾರ್ವಜನಿಕರು

ಅಸ್ತವ್ಯಸ್ತ"ವಾಗಬಹುದು ಎಂದು ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. "ಸಾರ್ವಜನಿಕರಿಂದ ಮಾರ್ಗವನ್ನು ತೆರೆಯಲು ಒತ್ತಡವಿದೆ. ಸೀಮಿತ ರೈಲುಗಳೊಂದಿಗೆ, ಕೆಲವು ಸಮಸ್ಯೆಗಳು ಉಂಟಾಗಬಹುದು" ಎಂದು ಅವರು ಹೇಳಿದ್ದಾರೆ.

ಎಲ್ಲಾ 15ರೈಲುಗಳು ಬಂದ ನಂತರ, ಹಳದಿ ಮಾರ್ಗವು ಮಾರ್ಚ್ 2026 ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚವಾಣ್ ತಿಳಿಸಿದ್ದಾರೆ.

ಪೂರ್ಣ ಪ್ರಮಾಣದ ಕಾರ್ಯಾಚರಣೆ ಎಂದರೆ ಗರಿಷ್ಠ ಜನದಟ್ಟಣೆಯ ಸಮಯದಲ್ಲಿ ಕನಿಷ್ಠ ಐದು ನಿಮಿಷಗಳ ಆವರ್ತನದಲ್ಲಿ ರೈಲುಗಳು ಚಲಿಸುತ್ತವೆ. ನಾವು ಸಂಭಾವ್ಯ ಬೇಡಿಕೆ ಮತ್ತು ಇತರ ಪ್ರಮುಖ ನಿಯತಾಂಕಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ವಿವರವಾದ ಮೌಲ್ಯಮಾಪನ ನಡೆಯುತ್ತಿದೆ ಎಂದು ಅವರು ಹೇಳಿದರು.

ಹಳದಿ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇದು ನಗರದ ಹಲವು ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಪ್ರಯಾಣಿಕರಿಗೆ ಅನುಕೂಲಕರ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+