ಭರ್ಜರಿ ಸಿಹಿಸುದ್ದಿ...ಬಹುದಿನಗಳಿಂದ ಕಾತುರದಿಂದ ಕಾಯುತ್ತಿರುವ ಚಾಲಕರಹಿತ ನಮ್ಮ ಮೆಟ್ರೋ ಹಳದಿ ಮಾರ್ಗದ ಮೂರನೇ ಹಂತದ ಮೆಟ್ರೋದ ಆರಂಭ ವಿಳಂಭವಾಗುತ್ತಲ್ಲೇ ಇದ್ದು, ಇದೀಗ ದೊಡ್ಡ ಅಪ್ಡೇಟ್ಸ್‌ವೊಂದು ಸಿಕ್ಕಿದೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತಾರಗೊಳ್ಳುತ್ತಿದೆ. ಬಹುನಿರೀಕ್ಷಿತ ಹಳದಿ ಮಾರ್ಗ, ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಬಿಎಂಆರ್‌ಸಿಎಲ್ ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರದ ದಿನಾಂಕದಿಂದ ಮುಂದೂಡಿಕೆ ಮಾಡಿದೆ.ಇದೀಗ ಮೇ ಅಂತ್ಯ ಅಥವಾ ಜೂನ್ ಆರಂಭವಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.

ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಯವರೆಗೆ ಮೆಟ್ರೋ ಮಾರ್ಗದಲ್ಲಿ ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅಗತ್ಯವಿದೆ. ಚಾಲಕರಹಿತ (ಡ್ರೈವರ್‌ಲೆಸ್) ಎಂಜಿನ್ ಹೊಂದಿರುವ ಎರಡು ಪ್ರೊಟೊಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದೆ. ಇನ್ನುಳಿದ ಮೂರನೇ ರೈಲುಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾಯುತ್ತಿದ್ದು, ಅದು ಬಂದ ನಂತರ ಈ ಮಾರ್ಗದಲ್ಲಿ ಪ್ರಯಾಣಿಕರಿಗಾಗಿ ಸೇವೆ ಆರಂಭ ಮಾಡುವ ಸಾಧ್ಯತೆ ಇದೆ.
ಒಟ್ಟು 14 ರೈಲುಗಳು
ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆವರೆಗೆ ವಿಸ್ತರಿಸಲಾದ ಹಳದಿ ಮೆಟ್ರೋ ಮಾರ್ಗವು 18.8 ಕಿಲೋಮೀಟರ್ ಉದ್ದವಿದ್ದು, ದಕ್ಷಿಣ ಬೆಂಗಳೂರು ಮತ್ತು ನಗರ ಕೇಂದ್ರದ ನಡುವಿನ ಸಂಚಾರಕ್ಕೆ ಪ್ರಮುಖ ಸಂಪರ್ಕನ್ನು ನೀಡುತ್ತದೆ. ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್.ವಿ. ರಸ್ತೆ ಎಂಬ 16 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಐಟಿ ಉದ್ಯೋಗಿ ಕೆಲಸಕ್ಕೆ ಹೋಗುವ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ದಕ್ಷಿಣ ಬೆಂಗಳೂರಿನ ಜನಸಂಚಾರ ಪ್ರದೇಶದ ಕೇಂದ್ರವನ್ನು ಇದು ಸಂಪರ್ಕಿಸಲಿದೆ.
ಹಳದಿ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭದ ತಯಾರಿ ಅಂತಿಮ ಹಂತದಲ್ಲಿದೆ. ಆರಂಭಿಕ ದಿನಗಳಲ್ಲಿ ರೈಲುಗಳು ಪ್ರತಿ ಅರ್ಧ ಗಂಟೆಗೆ ಒಮ್ಮೆ ಸಂಚರಿಸಲಿದ್ದು, ಈ ಹಂತದಲ್ಲೇ ದಿನಕ್ಕೆ 50,000 ಜನರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆ ಇದೆ.
3.5 ಲಕ್ಷ ಜನರಿಗೆ ಪ್ರಯೋಜನ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳ ಅಂದಾಜು ಪ್ರಕಾರ, ಈ ಮಾರ್ಗವು ಸಂಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದಾಗ, ದಿನಕ್ಕೆ ಸುಮಾರು 3.5 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಹಾಗೂ ದಕ್ಷಿಣ ಬೆಂಗಳೂರು ನಿವಾಸಿಗಳಿಗೆ ಇದು ಪ್ರಮುಖ ಸಂಚಾರ ಮಾರ್ಗವಾಗುತ್ತದೆ ಎಂದು ಹೇಳಿದ್ದಾರೆ.
ಹಳದಿ ಮೆಟ್ರೋ ಕಾಮಗಾರಿ 2024 ಪೂರ್ಣ
ಹಳದಿ ಮೆಟ್ರೋ ಮಾರ್ಗದ ಕಾಮಗಾರಿ 2024ರ ಜೂನ್‌ನಲ್ಲಿಯೇ ಪೂರ್ಣಗೊಂಡಿದ್ದರೂ, ಅನುಕೂಲಕರ ಸಂಖ್ಯೆಯ ರೈಲುಗಳು ಲಭ್ಯವಿರದ ಕಾರಣ ಸಂಚಾರ ಆರಂಭವಾಗಲಿಲ್ಲ. ಇದೀಗ, ಸುಮಾರು ಒಂದು ವರ್ಷದ ನಂತರ, 2025ರ \ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಕಾಯಾರಂಭ
ಈಗಾಗಲೇ ಹಳದಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭದ ತಯಾರಿಗಳ ಅಂತಿಮ ಹಂತದಲ್ಲಿದೆ. ಕಳೆದ ವರ್ಷ ಜೂನ್‌ನಿಂದ ಮೂರು ತಿಂಗಳುಗಳವರೆಗೆ, ವಿವಿಧ ತಾಂತ್ರಿಕ ತಂಡಗಳು ಈ ಮಾರ್ಗದಲ್ಲಿ ಟ್ರ್ಯಾಕ್, ಟ್ರ್ಯಾಕ್ಷನ್, ಬ್ರೇಕಿಂಗ್ ಮತ್ತು ಚಾಲಕರಿಲ್ಲದ ಎಂಜಿನ್ ಕುರಿತಂತೆ ಯಶಸ್ವೀ ಪರೀಕ್ಷೆಗಳನ್ನು ಮಾಡಿದ್ದಾರೆ.ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಉದ್ದೇಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗದಲ್ಲಿ ಈಗಾಗಲೇ ಎರಡು ರೈಲುಗಳು ಲಭ್ಯವಿದ್ದು, ಅಗತ್ಯವಿರುವ ಮೂರನೇ ರೈಲು ಟಿಟಾಗಢನಲ್ಲಿ ತಯಾರಾಗಿದ್ದು, ಪ್ರಸ್ತುತ ಪ್ಯಾಕಿಂಗ್ ಹಂತದಲ್ಲಿದೆ. ಮೂರನೇ ರೈಲು ಬಂದ ತಕ್ಷಣ ನಾವು ಅಂತಿಮ ತಾಂತ್ರಿಕ ಪರೀಕ್ಷೆಗಳು ನಡೆಸಿ ಸಂಚಾರವನ್ನು ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.


Click it and Unblock the Notifications