ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!.. ಬೆಂಗಳೂರಿನ ಜನರು ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ. ಟ್ರಾಫಿಕ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಮ್ಮರವಾಗಿ ಬಿಟ್ಟಿದೆ.ಇಂತಹ ಜನದಟ್ಟಣೆ ಸಮಸ್ಯೆಯನ್ನ ನಿವಾರಣೆ ಮಾಡುವಲ್ಲಿ ನಮ್ಮ ಮೆಟ್ರೋ ಪಾತ್ರ ಬಹಳಷ್ಟಿದೆ. ಹಲವೆಡೆ ನಮ್ಮ ಮೆಟ್ರೋ ಜನರಿಗೆ ಸೇವೆಯನ್ನ ನೀಡುತ್ತಿದೆ. ಇನ್ನು ಇದನ್ನ ಹೊರತುಪಡಿಸಿ ಬೆಂಗಳೂರಿಗರು ಬಹುದಿನಗಳಿಂದ ಕಾತುರದಿಂದ ಕಾಯುತ್ತಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಆರಂಭ ದೇಶಿಯ ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಇದೀಗ ಬಿಎಂಆರ್‌ಸಿಎಲ್ (BMRCL) ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಯಾವಾಗಿನಿಂದ ಮೆಟ್ರೋ ಹಳದಿ ಮಾರ್ಗ ಸಂಚಾರ ಆರಂಭವಾಗುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು,ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಮೆಟ್ರೋಗಾಗಿ (Yellow Line Metro) ಕಾಯುತ್ತಿರುವವರಿಗಾಗಿ ಬಿಎಂಆರ್‌ಸಿಎಲ್ (BMRCL) ಸಿಹಿಸುದ್ದಿಯೊಂದನ್ನು ಕೊಟ್ಟಿದೆ.ಇದೇ ಜುಲೈಯೊಳಗೆ ಹಳದಿ ಮಾರ್ಗಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.

ಇದುವರೆಗೂ ಬೆಂಗಳೂರಿನಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ಮಾಡುತ್ತಿದೆ. ಇದೀಗ ಹಳದಿ ಮೆಟ್ರೋ ರೈಲು ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸಲು ಮುಂದಾಗಿದೆ ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ.
ಬಿಎಂಆರ್‌ಸಿಎಲ್ ಈಗಾಗಲೇ ಹಲವು ಬಾರಿ ಯೆಲ್ಲೋ ಮಾರ್ಗ ಸಂಚಾರದ ದಿನಾಂಕದಿಂದ ಮುಂದೂಡಿಕೆ ಮಾಡಿದೆ.ಬಿಎಂಆರ್‌ಸಿಎಲ್ (BMRCL) ತನ್ನ ಮೆಟ್ರೋ ಮಾರ್ಗವನ್ನು ಶೀಘ್ರವೇ ಪ್ರಾರಂಭಿಸಲು ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತು ಡ್ರೈವರ್ ಲೈಸ್ ಮೆಟ್ರೋಗಳನ್ನು (Driverless Metro) ಓಡಿಸಲು ತಯಾರಿಯನ್ನು ಕೈಗೊಂಡಿದೆ. ದುರದೃಷ್ಟವಶಾತ್, ರೈಲುಗಳ ಬರುವಿಕೆಯಲ್ಲಿ ತಡವಾಯಿತು ಮತ್ತು ಇದರಿಂದ ಮೊಟ್ರೋ ಪ್ರಯಾಣವನ್ನು ಪ್ರಾರಂಭಿಸಲು ನಿಧಾನವಾಗಿತ್ತು.ಬಿಎಂಆರ್‌ಸಿಎಲ್ ಬಳಿ ಕೇವಲ ಎರಡು ರೈಲುಗಳು ಇದ್ದು, ಅವುಗಳನ್ನು ಬಳಸಿ ಸಂಚಾರ ಪ್ರಾರಂಭ ಮಾಡಲು ಪ್ರಯತ್ನವನನ್ನು ಮಾಡುತ್ತಿದೆ.ಆದರೆ, ಶೀಘ್ರದಲ್ಲೇ ಇನ್ನಷ್ಟು ರೈಲುಗಳನ್ನು ಬರುವ ಯೋಜನೆಯೂ ಸಹ ಇದೆ.
ಇದು ನಗರದ ಜನರಿಗಾಗಿ ಪ್ರಯಾಣವನ್ನು ಸುಲಭಗೊಳಿಸಲು ಮತ್ತು ಮೆಟ್ರೋ ಸೇವೆಯನ್ನು ವೇಗವಾಗಿ ಲಭ್ಯವಾಗಿಸಲು ಹೆಜ್ಜೆಯಾಗಿದೆ. ಬಿಎಂಆರ್‌ಸಿಎಲ್ ಇದರ ಮೂಲಕ ಬೆಂಗಳೂರು ಮಾದರಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.
ಬಿಎಂಆರ್‌ಸಿಎಲ್ ತನ್ನ ಮೆಟ್ರೋ ಮಾರ್ಗವನ್ನು ಶೀಘ್ರದಲ್ಲಿ ಪ್ರಾರಂಭಿಸಲು ಕಾರ್ಯಚರಣೆಗಳನ್ನು ಜೋರಾಗಿ ಮಾಡುತ್ತಿದೆ. ಈ ತಿಂಗಳ ಕೊನೆಯಲ್ಲಿ ಒಂದು ರೈಲು ಬಿಎಂಆರ್‌ಸಿಎಲ್ ಕೈ ಸೇರಲಿದೆ, ಮತ್ತು ಜೂನ್ ಮೊದಲ ವಾರಕ್ಕೆ ಮತ್ತೊಂದು ರೈಲು ಸೇರಲಿದೆ. ಇದರಿಂದ ಒಟ್ಟು 4 ರೈಲುಗಳನ್ನು ಈ ಮಾರ್ಗದಲ್ಲಿ ಸಂಚಾರಕ್ಕೆ ಸಿದ್ದವಾಗುತ್ತಿದ್ದೇವೆ.
ಬಿಎಂಆರ್‌ಸಿಎಲ್ ಈಗ ಈ ನಾಲ್ಕು ರೈಲುಗಳ ಮೂಲಕ ಮಾರ್ಗ ಸಂಚಾರವನ್ನು ಪುನಃ ಆರಂಭಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ರೈಲು ಸಂಚಾರಕ್ಕೆ ಪ್ರಾರಂಭವಾದ ಬಳಿಕ, ಮಾರ್ಗದ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ. ಅದು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಜುಲೈ ಮೊದಲ ವಾರದಲ್ಲಿ ಈ ನಾಲ್ಕು ರೈಲುಗಳ ಮೂಲಕವೇ ಈ ಮಾರ್ಗವನ್ನು ಸಂಚಾರ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಬಹುತೇಕ ಗ್ಯಾರಂಟಿಯಾಗಿದೆ.
ಪ್ರತಿ 30 ನಿಮಿಷಕ್ಕೊಂದು ರೈಲಿನಂತೆ, ಸಂಚಾರ ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಒಟ್ಟು ನಿಲ್ದಾಣಗಳ ಪೈಕಿ 3 ಅಥವಾ 5 ನಿಲ್ದಾಣಕ್ಕೊಂದು ವಿರಾಮದಂತೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಚರಣೆ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದೆ.
ಬಿಎಂಆರ್‌ಸಿಎಲ್, ತಮ್ಮ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ಮುಂಚಿತವಾಗಿ ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳನ್ನು ಮತ್ತೊಮ್ಮೆ ಮಾರ್ಗ ಪರಿಶೀಲನೆಗೆ ಬರುತ್ತಾರೆ. ಈ ಪರಿಶೀಲನೆ ಸಂದರ್ಭದಲ್ಲಿ, ಅಧಿಕಾರಿಗಳು ಮಾರ್ಗವನ್ನು ಭೇಟಿ ಮಾಡಿ, ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಿ, ಮಾರ್ಗ ಓಪನ್‌ಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ಆಗಾಗಲೇ, ಈ ಪರೀಕ್ಷೆಗಳ ನಂತರ ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಪರಿಶೀಲನೆ ವರದಿಯನ್ನು ಸಲ್ಲಿಸಿ, ಅನುಮತಿ ಪಡೆದು, ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಿದೆ. ಇದರಿಂದ, ಜುಲೈ ಅಂತ್ಯದೊಳಗೆ ಈ ಮಾರ್ಗವನ್ನು ಸಂಚಾರ ಮುಕ್ತಗೊಳಿಸಲು ಅವಕಾಶ ಸಿಗಬಹುದು.
ಹಳದಿ ಮಾರ್ಗ
ಹಳದಿ ಮಾರ್ಗವು ಆರ್‌ವಿ ರಸ್ತೆಯಿಂದ, ಬೊಮ್ಮಸಂದ್ರದವರೆಗೆ 19.15 ಕಿ.ಮೀ. ಉದ್ದವಿದ್ದು, ಎಲೆಕ್ಟ್ರಾನಿಕ್ಸ್ ಸಿಟಿಯಂತಹ ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ. ಇದು 16 ಎತ್ತರದ ನಿಲ್ದಾಣಗಳನ್ನು ಹೊಂದಿದ್ದು, ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಸಿರು ಮಾರ್ಗ ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಮಾರ್ಗವನ್ನು ಸಂಪರ್ಕಿಸುತ್ತದೆ.
ಈ ಕಾರಿಡಾರ್ ದಕ್ಷಿಣ ಬೆಂಗಳೂರಿನ ನಿವಾಸಿಗಳು ಮತ್ತು ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಾರ್ಪೊರೇಟ್ ಕೇಂದ್ರಗಳಿಗೆ ಸಂಪರ್ಕವನ್ನು ತಲುಪುವ ಗುರಿಯನ್ನು ಹೊಂದಿದೆ.


Click it and Unblock the Notifications