ಜಿಎಸ್‌ಟಿ ತಾಂತ್ರಿಕ ದೋಷಗಳಿಗೆ ವಿವರಣೆ ನೀಡುವಂತೆ ನಂದನ್ ನಿಲೇಕಣಿಗೆ ಕೇಂದ್ರ ಸೂಚನೆ

ಜಿಎಸ್‌ಟಿಯ ತಾಂತ್ರಿಕ ದೋಷಗಳನ್ನು ನಿವಾರಿಸುವ ಪರಿಹಾರ ಮಾರ್ಗಗಳನ್ನು 15 ದಿನಗಳೊಳಗೆ ಸಲ್ಲಿಸುವಂತೆ ಹಣಕಾಸು ಸಚಿವಾಲಯ ಇನ್ಫೋಸಿಸ್‌ಗೆ ಕೇಳಿದೆ.

ಸರಕು ಸೇವೆ ಮತ್ತು ತೆರಿಗೆಯ (ಜಿಎಸ್‌ಟಿ) ತಾಂತ್ರಿಕ ವ್ಯವಸ್ಥೆ ನಿರ್ಮಿಸಿ ಕೊಟ್ಟ ಇನ್ಫೋಸಿಸ್‌ ಸಂಸ್ಥೆಗೆ ಜಿಎಸ್‌ಟಿ ನೆಟ್‌ವರ್ಕ್‌ನಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರಕಾರ ಸೂಚಿಸಿದೆ.

ಜಿಎಸ್‌ಟಿ ತಾಂತ್ರಿಕ ದೋಷಗಳಿಗೆ ವಿವರಣೆ ನೀಡುವಂತೆ ನಿಲೇಕಣಿಗೆ ಸೂಚನೆ

ಹೀಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಮುಂದಿನ ವಾರ ಜಿಎಸ್‌ಟಿ ಮಂಡಳಿ ಮುಂದೆ ಸಮಸ್ಯೆಗಳು ಮತ್ತು ಅದರ ನಿವಾರಣೆಯ ಬಗ್ಗೆ ಸೂಕ್ತ ಪ್ರಾತ್ಯಕ್ಷಿಕೆ ನೀಡುವಂತೆ ಸೂಚಿಸಿದೆ.

ರಿಟರ್ನ್ಸ್ ಸಲ್ಲಿಸುವಾಗ ಎದುರಾಗುತ್ತಿರುವ ಸಮಸ್ಯೆಗಳು ಎರಡು ವರ್ಷ ಕಳೆದರೂ ಬಗೆಹರಿಯುತ್ತಿಲ್ಲ. ಹೀಗಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿರುವ ಇನ್ಫೊಸಿಸ್‌ಗೆ ಪರಿಹಾರ ಸೂಚಿಸುವಂತೆ ಕೇಳಲಾಗಿದೆ. ಮಾರ್ಚ್ 5ರಂದು ಇನ್ಫೋಸಿಸ್‌ಗೆ ಪತ್ರ ಬರೆದಿರುವ ಸಚಿವಾಲಯವು, 2018ರ ಆರಂಭದಲ್ಲಿ ಕಂಡುಬಂದಿದ್ದ ತಾಂತ್ರಿಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ. ರಿಟರ್ನ್ಸ್ ಸಲ್ಲಿಕೆಯಲ್ಲಿನ ವೈಫಲ್ಯಗಳು ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಲೇ ಇದೆ. ಇದರಿಂದ ಪ್ರಾಮಾಣಿಕ ತೆರಿಗೆದಾರರಿಗೆ ತೊಂದರೆಯಾಗುತ್ತಿದೆ.

ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+