ಈ ಹಿಂದೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು ಎಂದು ಹೇಳಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಈಗ ಒಂದು ದಿನದಲ್ಲೇ ಒಂದೆರಡು ಸಾವಿರ ರೂಪಾಯಿಯಲ್ಲ ಬರೋಬ್ಬರಿ 2.5 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡಬಹುದು ಎಂದು ಹೇಳಿದ್ದಾರೆ ಎಂದು ವಿಡಿಯೋವೊಂದು ತಿಳಿಸುತ್ತದೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಅದು ಕೂಡಾ ಮುಖ್ಯವಾಗಿ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಬಳಿಕ ಭಾರೀ ಟ್ರೆಂಡಿಂಗ್‌ನಲ್ಲಿದ್ದಾರೆ.

ಮೂರ್ತಿಯವರ ಹೇಳಿಕೆಯು ವಿವಿಧ ವಯೋಮಾನದವರು ಮತ್ತು ಉದ್ಯಮಗಳ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೂ ಇನ್ಫೋಸಿಸ್‌ನ ಐಐಟಿ ಪದವೀಧರ ಸಂಸ್ಥಾಪಕರು ಮೊದಲಿನಿಂದಲೂ ದೊಡ್ಡ ಟೆಕ್ ಕಂಪನಿಗಳಲ್ಲಿ ಒಂದನ್ನು ಪ್ರಾರಂಭಿಸುವ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇನ್ಫೋಸಿಸ್ ಪ್ರಸ್ತುತ 6.21 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. 37491 ಕೋಟಿ ರೂಪಾಯಿಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಬಿಲಿಯನೇರ್ ನಾರಾಯಣ ಮೂರ್ತಿ ಹೊಂದಿದ್ದಾರೆ. ಹಾಗೆಯೇ ಅವರು ತಮ್ಮ ವ್ಯಾಪಾರ ಕೌಶಲ್ಯ ಮತ್ತು ಲೋಕೋಪಕಾರಕ್ಕೆ ಹೆಸರುವಾಸಿಯಾಗಿದ್ದಾರೆ.
ಡೀಪ್‌ಫೇಕ್ ವಿಡಿಯೋಗಳು
ಆದರೆ ದುರದೃಷ್ಟವಶಾತ್, ಕೋಟ್ಯಾಧಿಪತಿಯ ಒಂದೆರಡು ಡೀಪ್‌ಫೇಕ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ನಾರಾಯಣ ಮೂರ್ತಿ ಅವರ ಚಿತ್ರವನ್ನು ಬಳಸುತ್ತಿದ್ದಾರೆ. ನಾರಾಯಣ ಮೂರ್ತಿಯವರ ಡೀಪ್‌ಫೇಕ್ ವೀಡಿಯೊಗಳಲ್ಲಿ ಒಂದಾದ ಹೂಡಿಕೆ ವೇದಿಕೆ "ಕ್ವಾಂಟಮ್ AI" ಅನ್ನು ಪ್ರಚಾರ ಮಾಡುತ್ತಿದೆ.
ಬಳಕೆದಾರರು ಮೊದಲ ಕೆಲಸದ ದಿನದಂದು 2.5 ಲಕ್ಷ ರೂಪಾಯಿಗಳನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಈ ಡೀಪ್‌ಫೇಕ್ ವೀಡಿಯೊದಲ್ಲಿ ನಾರಾಯಣ ಮೂರ್ತಿ ಹೇಳಿದಂತೆ ಕಾಣುತ್ತದೆ. ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಜೊತೆಗೆ "ಕ್ವಾಂಟಮ್ AI" ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮೂರ್ತಿಯ ಮಾರ್ಫ್ಡ್ ಡಿಯೊಗಳಲ್ಲಿ ಒಂದನ್ನು ತೋರಿಸಿದೆ.
"ಇಂದು ನಾನು ನಮ್ಮ ಹೊಸ ಯೋಜನೆಯನ್ನು ಎಲಾನ್ ಮಸ್ಕ್ ಜೊತೆಗೆ ಪ್ರಸ್ತುತಪಡಿಸಲು ಬಯಸುತ್ತೇನೆ. ಕ್ವಾಂಟಮ್ ಎಐ ನನ್ನ ತಂಡ ಮತ್ತು ಎಲಾನ್ ಮಸ್ಕ್ ತಂಡವು ಶೇಕಡ 94 ರಷ್ಟು ಯಶಸ್ಸಿನ ದರದೊಂದಿಗೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಕ್ವಾಂಟಮ್ ಕಂಪ್ಯೂಟಿಂಗ್ ಸಾಫ್ಟ್‌ವೇರ್ ಆಗಿದೆ ಎಂದು ಈ ನಕಲಿ ವಿಡಿಯೋದಲ್ಲಿ ತಿಳಿಸಲಾಗಿದೆ.
ಡೀಪ್‌ಫೇಕ್ ಎನ್ನುವುದು ವೀಕ್ಷಕರನ್ನು ಮೋಸಗೊಳಿಸಲು ದೃಶ್ಯ ಮತ್ತು ಆಡಿಯೊ ವಿಷಯವನ್ನು ತಯಾರಿಸಲು ಎಐ ಮತ್ತು ಯಂತ್ರ ಕಲಿಕೆಯನ್ನು ಬಳಸುವ ತಂತ್ರಜ್ಞಾನವಾಗಿದೆ. ಇದು ನಿಜವಾದ ವೀಡಿಯೊದಂತೆ ಕಾಣುತ್ತದೆ. ಆದರೆ ನಕಲಿ ವಿಡಿಯೋ ಆಗಿರುತ್ತದೆ.
ಡೀಪ್‌ಫೇಕ್ ತಂತ್ರಜ್ಞಾನವು ವರ್ಷಗಳಲ್ಲಿ ಗಮನಾರ್ಹ ಸುಧಾರಣೆಗೆ ಸಾಕ್ಷಿಯಾಗಿದೆ. ನಟ ಪಾಲ್ ವಾಕರ್ ಅವರ ಮರಣದ ನಂತರ 'ಫಾಸ್ಟ್ ಅಂಡ್ ಫ್ಯೂರಿಯಸ್ 7' ಪೂರ್ಣಗೊಂಡಾಗ ಮತ್ತು ಬಿಡುಗಡೆಯಾದಾಗ ಡೀಪ್‌ಫೇಕ್ ತಂತ್ರಜ್ಞಾನವು ಜನಪ್ರಿಯತೆಯನ್ನು ಗಳಿಸಿದೆ.


Click it and Unblock the Notifications