ನವದೆಹಲಿ, ಸೆಪ್ಟೆಂಬರ್ 1: ಫಿನ್‌ಟೆಕ್ ವಲಯವು ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 2.59 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜಾಗತಿಕ ಫಿನ್‌ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಫಿನ್‌ಟೆಕ್ ವಲಯದ ಬೆಳವಣಿಗೆಗೆ ಉತ್ತೇಜನ ನೀಡಲು, ಏಂಜೆಲ್ ತೆರಿಗೆ ರದ್ದು ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ ಎಂದು ತಿಳಿಸಿದರು.

ಇದೆ ವೇಳೆ ಸೈಬರ್ ವಂಚನೆ ತಡೆಗಟ್ಟಲು ಮತ್ತು ಜನರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿಯಂತ್ರಕರಿಗೆ ಸೂಚಿಸಿದರು. ಭಾರತೀಯರು ಜಗತ್ತಿನಲ್ಲೇ ಅತಿ ತ್ವರಿತವಾಗಿ ಫಿನ್‌ಟೆಕ್ ಅನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ. ಹಣಕಾಸು ಸೇವೆ ಗಳಿಂದಾಗಿ ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರ ಕಡಿಮೆಯಾಘುತ್ತಿದೆ ಎಂದರು. ವಿಶ್ವದ ಅತಿ ದೊಡ್ಡ ಕಿರುಸಾಲ ಯೋಜನೆಯಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 27 ಲಕ್ಷ ಕೋಟಿ ರೂ. ಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು 500 ಪ್ರತಿಶತದಷ್ಟು ಕಳೆದ ಹತ್ತು ವರ್ಷದಲ್ಲಿ ಬೆಳೆದಿವೆ. ವಿದೇಶದಿಂದ ಆಗಮಿಸುವವರು ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಂಡವರು ಆಶ್ಚರ್ಯಗೊಳ್ಳುತ್ತಿದ್ದರು. ಈಗ ನಮ್ಮ ಫಿನ್‌ಟೆಕ್ ವೈವಿಧ್ಯತೆಯನ್ನು ನೋಡಿ ಅವರು ಆಶ್ಚರ್ಯಚಕಿತರಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಯುಪಿಐ ಜಗತ್ತು:
ಯುಪಿಐ ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಯುಪಿಐ ಭಾರತದ ಫಿನ್‌ಟೆಕ್ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ. ಇಡೀ ಪ್ರಪಂಚದಲ್ಲಿ, ಭಾರತದ UPI ಫಿನ್‌ಟೆಕ್‌ಗೆ ಉತ್ತಮ ಉದಾಹರಣೆಯಾಗಿದೆ. ಇಂದು ಅದು ಹಳ್ಳಿಯಾಗಿರಲಿ ಅಥವಾ ನಗರವೇ ಆಗಿರಲಿ ಭಾರತದಲ್ಲಿ ಬ್ಯಾಂಕಿಂಗ್ ಸೇವೆಯು 24 ಗಂಟೆಗಳು, 7 ದಿನಗಳು ಮತ್ತು 12 ತಿಂಗಳು ಅನಿಯಂತ್ರಿತವಾಗಿ ನಡೆಯುತ್ತಲೇ ಇವೆ. ಇದಕ್ಕೆ ಕಾರಣ UPI ಎಂದು ಹೇಳಿದರು.
ಏಂಜೆಲ್ ತೆರಿಗೆ ರದ್ದು:
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಏಂಜೆಲ್ ತೆರಿಗೆ ರದ್ದು ಮಾಡುವುದರ ಕಡೆ ಹೆಜ್ಜೆ ಇಟ್ಟಿತ್ತು. ನವೋದ್ಯಮಗಳಲ್ಲಿ(ಸ್ಟಾರ್ಟಪ್) ಬಂಡವಾಳ ತೊಡಗಿಸುವ ಹೂಡಿಕೆದಾರರ ಮೇಲೆ ವಿಧಿಸುತ್ತಿದ್ದ ತೆರಿಗೆಯೇ ಏಂಜೆಲ್ ಟ್ಯಾಕ್ಸ್. ಎಲ್ಲ ವರ್ಗದ ಹೂಡಿಕೆದಾರರನ್ನು ಉತ್ತೇಜಿಸುವ ಸಲುವಾಗಿ ಬಜೆಟ್‌ನಲ್ಲಿ ಈ ತೆರಿಗೆಯನ್ನು ರದ್ದುಪಡಿಸುವ ಪ್ರಸ್ತಾಪವನ್ನು ಮಂಡಿಸಲಾಗಿತ್ತು.
ಷೇರುಪೇಟೆಗಳಲ್ಲಿ ನೋಂದಾಯಿತವಾಗದ ಕಂಪನಿಗಳು ಅಥವಾ ನವೋದ್ಯಮಗಳಲ್ಲಿ ವಿದೇಶಗಳಿಂದ ಆಗುವ ಹೂಡಿಕೆಗೆ ಏಂಜೆಲ್ ತೆರಿಗೆ ಅನ್ವಯವಾಗುತಿತ್ತು. ಬಜೆಟ್‌ಗೆ ಮುಂಚಿಯೇ ಇದನ್ನ ರದ್ದುಪಡಿಸಲು ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ ಸರಕಾರಕ್ಕೆ ಶಿಫಾರಸು ಮಾಡಿದ್ದವು. ಈಗ ದೇಶದಲ್ಲಿ ಸುಮಾರು 1.17 ಲಕ್ಷಕ್ಕೂ ಹೆಚ್ಚು ನವೋದ್ಯಮಗಳಿವೆ ಎನ್ನುವುದನ್ನು ಗಮನಿಸಬೇಕಾದ ಸಂಗತಿ.
ಫಿನ್ ಟೆಕ್ ಸ್ಟಾರ್ಟ್ ಅಪ್:
ಪೇಟಿಎಂ, ಪೋನ್ ಪೇ, ಕ್ರೇಡ್ ಸೇರಿದಂತೆ ಹೊಸ ಹೊಸ ಫಿನ್ ಟೆಕ್ ಉದ್ಯಮಗಳು ಆರಂಭವಾಗುತ್ತಲೇ ಇವೆ. ಮಾರುಕಟ್ಟೆಯಲ್ಲಿ ತಮ್ಮ ಯಶಸ್ಸಿನ ಹಾದಿ ತೆರೆದುಕೊಳ್ಳುತ್ತಲೂ ಇವೆ. ಕೇವಲ ಯುಪಿಎಂ ಪೇಮೆಂಟ್ ಮಾತ್ರವಲ್ಲದೆ ವಿಮೆ ನೀಡಿಕೆ, ಬಿಲ್ ಪಾವತಿ, ವೆಹಿಕಲ್ ಇನ್ಶೂರೆನ್ಸ್, ಗ್ಯಾಸ್ ಬುಕಿಂಗ್, ಟಿಕೆಟ್ ಬುಕಿಂಗ್, ಆನ್ ಲೈನ್ ಶಾಪಿಂಗ್, ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಸಹ ಒದಗಿಸಿಕೊಡುತ್ತಿವೆ. ಬ್ಯಾಂಕಿಂಗ್ ವಲಯವೇ ನಿಧಾನಕ್ಕೆ ಫಿನ್ ಟೆಕ್ ವಲಯವಾಗಿ ಬದಲಾಗುತ್ತಿರುವುದನ್ನು ಕಾಣಬಹುದಾಗಿದೆ.


Click it and Unblock the Notifications