ನಜರಾ ಟೆಕ್ನಾಲಜೀಸ್ ಐಪಿಒ ಇಂದು ಆರಂಭ: ಇದರ ಮೇಲಿದೆ ಹೂಡಿಕೆದಾರರ ಕಣ್ಣು

ಬಹುನಿರೀಕ್ಷಿತ ಗೇಮಿಂಗ್ ಸಂಸ್ಥೆ ನಜರಾ ಟೆಕ್ನಾಲಜೀಸ್‌ನ ಐಪಿಒ ಇಂದು ತೆರೆಯುತ್ತಿದೆ. ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಬೆಂಬಲದೊಂದಿಗೆ ಈ ಕಂಪನಿಯು ಪ್ರೈಸ್‌ ಬ್ಯಾಂಡ್‌ ಅನ್ನು ಪ್ರತಿ ಷೇರಿಗೆ 1,100-1,101 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.

ಮಾರ್ಚ್‌ 17ರಿಂದ ಪ್ರಾರಂಭವಾಗಲಿರುವ ಐಪಿಒ ಮಾರ್ಚ್‌ 19ರಂದು ಮುಕ್ತಾಯವಾಗಲಿದೆ. ಈ ಐಪಿಒ ಮೂಲಕ 583 ಕೋಟಿ ರೂಪಾಯಿ ಪಡೆಯುವ ನಿರೀಕ್ಷೆಯಿದೆ. ಕಂಪನಿಯ ಡ್ರಾಫ್ಟ್ ಪ್ರಾಸ್ಪೆಕ್ಟಸ್ ಪ್ರಕಾರ ರಾಕೇಶ್ ಜುಂಜುನ್‌ವಾಲಾ ಅವರು ಮಾರ್ಚ್ 2020 ರ ವೇಳೆಗೆ ಶೇಕಡಾ 11.77ರಷ್ಟು ನಜರಾ ಟೆಕ್ನಾಲಜೀಸ್ ಪಾಲನ್ನು ಹೊಂದಿದ್ದಾರೆ.

ನಜರಾ ಟೆಕ್ನಾಲಜೀಸ್ ಐಪಿಒ ಇಂದು ಆರಂಭ: ಇದರ ಮೇಲಿದೆ ಹೂಡಿಕೆದಾರರ ಕಣ್ಣು

ನಜಾರಾ ಟೆಕ್ನಾಲಜೀಸ್ ಕಂಪನಿ ಹಾಗೂ ಐಪಿಒ ಕುರಿತು ಮಾಹಿತಿ:

1) ನಜಾರಾ ಟೆಕ್ನಾಲಜೀಸ್ ಲಿಮಿಟೆಡ್ ವೈವಿಧ್ಯಮಯ ಗೇಮಿಂಗ್ ಕಂಪನಿಯಾಗಿದ್ದು, ಇಂಟರ್‌ಆ್ಯಕ್ಟಿವ್ ಗೇಮಿಂಗ್, ಇ-ಸ್ಪೋರ್ಟ್ಸ್ ಮತ್ತು ಗ್ಯಾಮಿಫೈಡ್ ಆರಂಭಿಕ ಕಲಿಕಾ ವ್ಯವಸ್ಥೆಗಳಲ್ಲಿ ಕೊಡುಗೆಗಳನ್ನು ಹೊಂದಿದೆ.

2) ''ನಜಾರಾ ಟೆಕ್ನಾಲಜೀಸ್ ಬಹುನಿರೀಕ್ಷಿತ ಐಪಿಒ ಆಗಿದ್ದು, ಇದು ಪ್ರಸ್ತುತ ಮಾರುಕಟ್ಟೆಯು ಪ್ರೀಮಿಯಂ ಮೌಲ್ಯಮಾಪನಗಳಲ್ಲಿ ಅನನ್ಯ ಮತ್ತು ಡಿಜಿಟಲ್ ಥೀಮ್ ಸ್ಟಾಕ್‌ಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ 5ಜಿ ನೆಟ್‌ವರ್ಕ್‌ ಹಾಗೂ ಸ್ಮಾರ್ಟ್‌ಫೋನ್‌ಗಳು ಹೆಚ್ಚಾದಂತೆ ಗೇಮಿಂಗ್ ಅಪ್ಲಿಕೇಶನ್‌ಗಳು ಬೆಳೆಯುತ್ತವೆ'' ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

3) ಲಿಂಕ್ ಇನ್‌ಟೈಮ್ ಇಂಡಿಯಾ ಪ್ರೈವೇಟ್ ಐಪಿಒ ರಿಜಿಸ್ಟ್ರಾರ್ ಐಪಿಒ ಪ್ರಕಾರ, ಮಾರ್ಚ್ 24 ರಂದು ಷೇರು ಹಂಚಿಕೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಮತ್ತು ಮಾರ್ಚ್ 30 ರಂದು ಲಿಸ್ಟ್ ಮಾಡಬಹುದು.

4) ಈ ಐಪಿಒನಲ್ಲಿ ಶೇಕಡಾ 75ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ), ಎಚ್‌ಎನ್‌ಐಗಳಿಗೆ ಶೇಕಡಾ 15ರಷ್ಟು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಶೇಕಡಾ 10ರಷ್ಟು ಮೀಸಲಿಡಲಾಗಿದೆ.

5) ಈಕ್ವಿಟಿ ಷೇರುಗಳ ಪಟ್ಟಿಯು ತನ್ನ ಬ್ರಾಂಡ್ ಹೆಸರನ್ನು ಹೆಚ್ಚಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಗೆ ದ್ರವ್ಯತೆಯನ್ನು(Liquidity) ನೀಡುತ್ತದೆ ಎಂದು ಕಂಪನಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+