For Quick Alerts
ALLOW NOTIFICATIONS  
For Daily Alerts

ನಜಾರಾ ಟೆಕ್ನಾಲಜೀಸ್‌ನ ಷೇರು ಭರ್ಜರಿ ಆರಂಭ: ಶೇಕಡಾ 81ಕ್ಕೂ ಹೆಚ್ಚು ಜಿಗಿತ

|

ಖ್ಯಾತ ಷೇರುಪೇಟೆ ಹೂಡಿಕೆದಾರರ ರಾಕೇಜ್‌ ಜುಂಜುನ್‌ವಾಲಾ ಬೆಂಬಲಿತ ನಜಾರಾ ಟೆಕ್ನಾಲಜೀಸ್‌ ಷೇರು ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇಕಡಾ 81 ರಷ್ಟು ಪ್ರೀಮಿಯಂನೊಂದಿಗೆ ಗರಿಷ್ಠ 2,026 ರೂ.ವರೆಗೆ ಏರಿಕೆಗೊಂಡರೆ, ಅದೇ ಸಮಯದಲ್ಲಿ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ನಲ್ಲಿ ಗರಿಷ್ಠ 2,024 ರೂಪಾಯಿವರೆಗೆ ಜಿಗಿದಿದೆ.

ಆನ್‌ಲೈನ್ ಗೇಮಿಂಗ್ ಕಂಪನಿಯಾದ ನಜಾರಾ ಟೆಕ್ನಾಲಜೀಸ್‌ನ ಐಪಿಒ ಮಾರ್ಚ್ 17 ರಂದು ಹೂಡಿಕೆಗಾಗಿ ತೆರೆಯಿತು ಮತ್ತು ಐಪಿಒ ಮಾರ್ಚ್ 19 ರಂದು ಮುಚ್ಚಲ್ಪಟ್ಟಿತು. ನಜರಾ ಟೆಕ್ನಾಲಜೀಸ್‌ನ 1100 ರಿಂದ 1101 ರೂ. ಪ್ರೈಸ್ ಬ್ಯಾಂಡ್‌ನೊಂದಿಗೆ 583 ಕೋಟಿ ರೂ. ಗುರಿಯನ್ನು ಹೊಂದಿತ್ತು.

ನಜಾರಾ ಟೆಕ್ನಾಲಜೀಸ್‌ನ ಷೇರು ಭರ್ಜರಿ ಆರಂಭ: 81% ಜಿಗಿತ

ರಾಕೇಜ್ ಜುಂಜುನ್‌ವಾಲಾ ನಜಾರಾ ಟೆಕ್ನಾಲಜೀಸ್‌ನಲ್ಲಿ ತಮ್ಮ ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಿಲ್ಲ. ಈ ಕಾರಣದಿಂದಾಗಿ, ಹೂಡಿಕೆದಾರರ ಭಾವನೆ ಉತ್ತಮವಾಗಿತ್ತು. ಅದೇ ಸಮಯದಲ್ಲಿ, ನಜಾರಾ ಟೆಕ್ನಾಲಜೀಸ್ ಪ್ರಮುಖ ಹೂಡಿಕೆದಾರರಿಂದ ಪ್ರತಿ ಷೇರಿಗೆ 1101 ದರದಲ್ಲಿ 262 ಕೋಟಿ ರೂ. ಹೊಂದಿದ್ದರೆ, ಸೆಪ್ಟೆಂಬರ್ 2020 ರ ತ್ರೈಮಾಸಿಕದ ವೇಳೆಗೆ ರಾಕೇಜ್‌ ಜುಂಜುನ್‌ವಾಲಾ ಅವರು ನಜಾರಾ ಟೆಕ್ನಾಲಜೀಸ್‌ನಲ್ಲಿ ಶೇ 11.51 ರಷ್ಟು ಪಾಲನ್ನು ಹೊಂದಿದ್ದರು.

ಪ್ರಮುಖ ಹೂಡಿಕೆದಾರರಲ್ಲಿ ಸಿಂಗಾಪುರ್ ಸರ್ಕಾರ, ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ, ಗೋಲ್ಡ್ಮನ್ ಸ್ಯಾಚ್ಸ್ ಇಂಡಿಯಾ ಲಿಮಿಟೆಡ್, ನೌಮುರಾ ಫಂಡ್ಸ್ ಐರ್ಲೆಂಡ್ ಪಬ್ಲಿಕ್ ಲಿಮಿಟೆಡ್ ಕಂಪನಿ, ಸ್ಟೀಡ್ ವ್ಯೂ ಕ್ಯಾಪಿಟಲ್ ಮಾರಿಷಸ್ ಲಿಮಿಟೆಡ್ ಸೇರಿವೆ.

English summary

Nazara Technologies Shares List At 81% On Market Debut

Nazara Technologies made a bumper market debut on Tuesday, as the shares listed at Rs 1,990 on NSE, a 80.74 per cent premium over the issue price of Rs 1,101.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X