ಗೂಗಲ್‌ ಮೇಲೆ 1,337 ಕೋಟಿ ರೂ. ದಂಡ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ, 30 ದಿನಗಳ ಗಡುವು

ಗೂಗಲ್‌ ವಿರುದ್ಧವಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ ದಂಡ ಆದೇಶವನ್ನು ಮಾರ್ಚ್ 29ರಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಎತ್ತಿ ಹಿಡಿದಿದೆ. ಇದರಿಂದಾಗಿ ಗೂಗಲ್‌ಗೆ ಮುಖಭಂಗವಾಗಿದ್ದು, ಸಂಸ್ಥೆಗೆ ದಂಡ ಪಾವತಿಗೆ ಗಡುವು ಕೂಡಾ ನೀಡಲಾಗಿದೆ. ಹೌದು, ಎನ್‌ಸಿಎಲ್‌ಎಟಿ ಆದೇಶದ ಪ್ರಕಾರವಾಗಿ ಗೂಗಲ್ ಸುಮಾರು 30 ದಿನಗಳ ಒಳಗಾಗಿ 1338 ಕೋಟಿ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗಿದೆ.

ಗೂಗಲ್ ಸಾಧನ ತಯಾರಕರೊಂದಿಗೆ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಮೇಲೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ದಂಡವನ್ನು ವಿಧಿಸಿತ್ತು. ಆದರೆ ಈ ಆದೇಶವನ್ನು ಗೂಗಲ್ ತಳ್ಳಿಹಾಕಿದ್ದು, ಇದು ಅನ್ಯಾಯದ ದಂಡ ಹೇರಿಕೆ ಎಂದು ಹೇಳಿತ್ತು. ಹಾಗೆಯೇ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಕದವನ್ನು ತಟ್ಟಿತ್ತು. ಆದರೆ ಎನ್‌ಸಿಎಲ್‌ಎಟಿ ಈ ಹಿಂದೆ ಗೂಗಲ್ ಮೇಲೆ ದಂಡ ವಿಧಿಸಿ ಸಿಸಿಐ ನೀಡಿದ ಆದೇಶವನ್ನೇ ಎತ್ತಿಹಿಡಿದು, ಶೀಘ್ರ ದಂಡ ಪಾವತಿಸಲು ಗೂಗಲ್‌ಗೆ ಆದೇಶಿಸಿದೆ.

ಗೂಗಲ್‌ ಮೇಲೆ ದಂಡ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ, 30 ದಿನ ಗಡುವು

ಗೂಗಲ್ ಪರವಾದ ನಿರ್ದೇಶನಗಳು

30 ದಿನಗಳ ಒಳಗಾಗಿ ದಂಡವನ್ನು ಪಾವತಿಸುವಂತೆ ಗೂಗಲ್‌ಗೆ ಎನ್‌ಸಿಎಲ್‌ಎಟಿ ಆದೇಶವನ್ನು ನೀಡಿದ್ದರೂ ಕೂಡಾ ಸಿಸಿಐ ಗೂಗಲ್ ಮೇಲೆ ಮಾಡಿದ ಪ್ರಮುಖ ನಾಲ್ಕು ನಿರ್ದೇಶನಗಳನ್ನು ಬದಿಗಿರಿಸಿದೆ. ಗೂಗಲ್ ಯಾವುದೇ ಅಪ್ಲಿಕೇಷನ್‌ ಅನ್ನು ವೆಬ್‌ಸೈಟ್ ಅಥವಾ ತಿಳಿಯದ ಮೂಲಗಳಿಂದ ಡೌನ್‌ಲೋಡ್ ಮಾಡುವಾಗ ಎಚ್ಚರಿಕೆಯನ್ನು ನೀಡುತ್ತದೆ. ಮೂರನೇ ವ್ಯಕ್ತಿಗೆ ಗೂಗಲ್ ಎಪಿಐ ಹಂಚಬೇಕಾಗಿಲ್ಲ. ಮಾಲ್ವೇರ್‌ ಅನ್ನು ತಡೆಹಿಡಿಯುವ ನಿಟ್ಟಿನಲ್ಲಿ ಗೂಗಲ್‌ ಮೂರನೇ ವ್ಯಕ್ತಿಯ ಅಪ್ಲಿಕೇಷನ್‌ಗಳಿಗೆ ಅವಕಾಶ ನೀಡದಿರುವುದು ಸರಿಯಾದ ನಿರ್ಧಾರ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್‌ ಸೂಟ್ ಅಪ್ಲಿಕೇಷನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದನ್ನು ಗೂಗಲ್ ತಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಗೂಗಲ್ ದಂಡವನ್ನು ತೆರಲು 30 ದಿನಗಳ ಗಡುವನ್ನು ನೀಡಲಾಗಿದೆ. ಇನ್ನು ಈ ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್ ಸಿಸಿಐ ಆದೇಶವನ್ನು ಎತ್ತಿಹಿಡಿದ ಎನ್‌ಸಿಎಲ್‌ಎಟಿ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶವನ್ನು ಹೊಂದಿದೆ. ಈ ಪ್ರಕರಣದ ತೀರ್ಪನ್ನು ಜಸ್ಟಿಸ್ (ನಿವೃತ್ತ) ಅಶೋಕ್ ಭೂಷಣ್ ಮತ್ತು ಡಾ. ಅಲೋಕ್ ಶ್ರೀವಾಸ್ತವ ನೇತೃತ್ವದ ಪೀಠವು ನೀಡಿದೆ.

ಮಾರ್ಚ್ 31ರ ಒಳಗಾಗಿ ಈ ಪ್ರಕರಣದ ನಿರ್ದೇಶನವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ಪೀಠವು ಫೆಬ್ರವರಿ 15ರಂದು ಪ್ರಕರಣದ ವಿಚಾರಣೆಯನ್ನು ಆರಂಭಿಸಿದೆ. ಸುಮಾರು ಒಂದು ತಿಂಗಳುಗಳ ಕಾಲ ಗೂಗಲ್ ಪರವಾದ ಹಿರಿಯ ಕೌನ್ಸಿಲ್ ಅರುಣ್ ಕಥ್‌ಪಾಲಿಯಾ ಹಾಗೂ ವಕೀಲ ಮನೀಂದರ್ ಸಿಂಗ್ ವಾದವನ್ನು ಪೀಠವು ಆಲಿಸಿದೆ. ಸಿಸಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಮತ್ತು ವಕೀಲ ಸಮರ್ ಬನ್ಸಾಲ್ ವಾದ ಮಂಡಿಸಿದ್ದಾರೆ.

ಇನ್ನು ಅಪ್ಲಿಕೇಷನ್ ಅಭಿವೃದ್ಧಿ ಮಾಡಿದ ಸಂಸ್ಥೆಗಳಾದ ಮ್ಯಾಪ್‌ಮೈಇಂಡಿಯಾ, ಇಂಡಸ್ ಒಎಸ್, ಎಪಿಕ್ ಗೇಮ್ಸ್‌ ಗೂಗಲ್‌ನ ಈ ಪಾಲಿಸಿಯು ತಮಗೆ ಹೇಗೆ ಪ್ರಭಾವ ಉಂಟು ಮಾಡಿದೆ ಎಂದು ವಾದ ಮಾಡಿದ್ದಾರೆ. ಇನ್ನು ಗೂಗಲ್ ಎನ್‌ಸಿಎಲ್‌ಎಟಿಗೆ ಜನವರಿಯಲ್ಲೇ ಈ ಪ್ರಕರಣದ ವಿಚಾರಣೆಗೆ ಅರ್ಜಿ ಸಲ್ಲಿಸಿದೆ. ಆದರೆ ತಕ್ಷಣ ಆದೇಶವು ಲಭ್ಯವಾಗಿಲ್ಲ. ಅದಾದ ಬಳಿಕ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಆದರೆ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಹಿಂದೇಟು ಹಾಕಿದ್ದು, ಎಲ್‌ಸಿಎಲ್‌ಎಟಿ ಪ್ರಕರಣದ ತನಿಖೆ ನಡೆಸಬೇಕು ಎಂದು ತಿಳಿಸಿದೆ. ಈಗ ಎನ್‌ಸಿಎಲ್ಎಟಿ ಆದೇಶವನ್ನು ನೀಡಿದ್ದು ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶವನ್ನು ಗೂಗಲ್ ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+