ಅದಾನಿ ಸಮೂಹದ ಮಾಧ್ಯಮ ವಿಭಾಗ, ನ್ಯೂಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ತನ್ನ ಹೊಸ ಪ್ರಾದೇಶಿಕ ಚಾನೆಲ್ ಅನ್ನು ಅಂದರೆ ಎನ್‌ಡಿಟಿವಿ ರಾಜಸ್ಥಾನವನ್ನು ಸೆಪ್ಟೆಂಬರ್ 5, 2023 ರಂದು ಪ್ರಾರಂಭಿಸಲಿದೆ. ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) 4 ಹೊಸ ಪ್ರಾದೇಶಿಕ ಚಾನೆಲ್‌ಗಳನ್ನು ಆರಂಭ ಮಾಡಲು ಆಗಸ್ಟ್ 17, 2023 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮೋದನೆಯನ್ನು ನೀಡಿದೆ.
ಈ ಬಗ್ಗೆ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಮಾಹಿತಿ ನೀಡಿದ್ದು, "ಆಗಸ್ಟ್ 17, 2023 ರಂದು ನಾವು ನೀಡುವ ಮಾಹಿತಿ ಪ್ರಕಾರ ಕಂಪನಿಯು ತನ್ನ ಹೊಸ ಚಾನಲ್ ಎನ್‌ಡಿಟಿವಿ ರಾಜಸ್ಥಾನ ಅನ್ನು ಸೆಪ್ಟೆಂಬರ್ 5, 2023 ರಂದು ಪ್ರಾರಂಭಿಸುತ್ತದೆ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ," ಎಂದು ತಿಳಿಸಿದೆ.

ಈ ಹಿಂದೆ ಆಗಸ್ಟ್ 21, 2023 ರಂದು ಎನ್‌ಡಿಟಿವಿ ಮಧ್ಯಪ್ರದೇಶ / ಛತ್ತೀಸ್‌ಗಢವನ್ನು ಎನ್‌ಡಿಟಿವಿ ಆರಂಭ ಮಾಡಿದೆ. ಅದಾದ ಬಳಿಕ ಎನ್‌ಡಿಟಿವಿ ರಾಜಸ್ಥಾನವು ಎನ್‌ಡಿಟಿವಿಯ ಎರಡನೇ ಹೊಸ ಚಾನೆಲ್ ಆಗಿದೆ. ಆಗಸ್ಟ್ 17, 2023 ರಂದು, ಮಾಹಿತಿ ಸಚಿವಾಲಯವು 4 ಹೊಸ ಪ್ರಾದೇಶಿಕ ಚಾನೆಲ್‌ಗಳಿಗೆ ಅನುಮತಿ ನೀಡಿದೆ ಎಂದು ಕಂಪನಿಯು ಘೋಷಿಸಿದೆ.
ಎನ್‌ಡಿಟಿವಿಯ ಎನ್‌ಡಿಟಿವಿ ರಾಜಸ್ಥಾನ, ಎನ್‌ಡಿಟಿವಿ ಮಧ್ಯಪ್ರದೇಶ/ ಛತ್ತೀಸ್‌ಗಢ, ಎನ್‌ಡಿಟಿವಿ ಗುಜರಾತಿ, ಎನ್‌ಡಿಟಿವಿ ಮರಾಠಿ ಎಂಬ ನಾಲ್ಕು ಚಾನೆಲ್‌ಗಳನ್ನು ಎನ್‌ಡಿಟಿವಿ ಆರಂಭ ಮಾಡಿದೆ. ಇದಲ್ಲದೆ, ಕಂಪನಿಯು ಮುಂದಿನ ವಾರ ಆಗಸ್ಟ್ 21, 2023 ರಂದು ಎನ್‌ಡಿಟಿವಿ ಮಧ್ಯ ಪ್ರದೇಶ / ಛತ್ತೀಸ್‌ಗಢ ಅನ್ನು ಪ್ರಾರಂಭ ಮಾಡುತ್ತದೆ ಎಂದು ಈ ಹಿಂದೆ ಕಂಪನಿಯು ಫೈಲಿಂಗ್‌ನಲ್ಲಿ ತಿಳಿಸಿದೆ.
ಎನ್‌ಡಿಟಿವಿ ಷೇರು ಹೇಗಿದೆ ನೋಡಿ
ಶುಕ್ರವಾರ ಎನ್‌ಡಿಟಿವಿಯ ಷೇರುಗಳು ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 220.85 ರೂಪಾಯಿಗೆ ವಹಿವಾಟು ಅಂತ್ಯ ಮಾಡಿದೆ. ಅದಕ್ಕೂ ಹಿಂದಿನ ಮುಕ್ತಾಯದಲ್ಲಿ ಪ್ರತಿ ಷೇರು ಸುಮಾರು ಶೇಕಡ 1.38ರಷ್ಟು ಇಳಿಕೆಯಾಗಿ, 223.95 ರೂಪಾಯಿಗೆ ವಹಿವಾಟು ಕೊನೆ ಮಾಡಿದೆ. ಕಳೆದ 1 ವಾರದಲ್ಲಿ ಸ್ಟಾಕ್ ಶೇಕಡ 1.67ರಷ್ಟು ಕುಸಿತ ಕಂಡಿದೆ.
ಕಳೆದ 1 ವರ್ಷದಲ್ಲಿ ಎನ್‌ಡಿಟಿವಿಯ ಷೇರು ಶೇಕಡ 45.29 ರಷ್ಟು ಕುಸಿದಿದೆ. ಆದರೆ, ಇದು ಕಳೆದ 2 ಮತ್ತು 3 ವರ್ಷಗಳಲ್ಲಿ ಕ್ರಮವಾಗಿ ಶೇಕಡ 102.71 ಮತ್ತು ಶೇಕಡ 505.90 ರಷ್ಟು ಆದಾಯವನ್ನು ಗಳಿಸಿದೆ. 5 ವರ್ಷಗಳಲ್ಲಿ, ಎನ್‌ಡಿಟಿವಿ ಸ್ಟಾಕ್ ಸುಮಾರು ಶೇಕಡ 497.70ರಷ್ಟು ಆದಾಯವನ್ನು ಹೂಡಿಕೆದಾರರಿಗೆ ನೀಡಿದೆ.
ಎನ್‌ಡಿಟಿವಿ ಷೇರು ಸೆಪ್ಟೆಂಬರ್ 06, 2022 ರಂದು 52 ವಾರಗಳ ಗರಿಷ್ಠ 567.85 ರೂಪಾಯಿಯನ್ನು ಮತ್ತು ಮಾರ್ಚ್ 29, 2023 ರಂದು 52 ವಾರಗಳ ಕನಿಷ್ಠ ಮಟ್ಟ 167.05 ರೂಪಾಯಿಯನ್ನು ತಲುಪಿದೆ. ಶುಕ್ರವಾರದ ಹೊತ್ತಿಗೆ ಎನ್‌ಡಿಟಿವಿ ಮಾರುಕಟ್ಟೆ ಮೌಲ್ಯವು 1,423.85 ಕೋಟಿ ರೂಪಾಯಿ ಆಗಿದೆ.
ಎನ್‌ಡಿಟಿವಿ ಬಗ್ಗೆ ಮಾಹಿತಿ
ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ಅದಾನಿ ಗ್ರೂಪ್ ಕಂಪನಿಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ನವದೆಹಲಿಯ ಈ ಮಾಧ್ಯಮವು ಕಾಲು ಶತಮಾನಕ್ಕೂ ಹೆಚ್ಚು ಕಾಲ ಭಾರತದ ಸುದ್ದಿ ದೂರದರ್ಶನ ಮತ್ತು ಡಿಜಿಟಲ್ ಪತ್ರಿಕೋದ್ಯಮದಲ್ಲಿರುವ ಸಂಸ್ಥೆಯಾಗಿದೆ.


Click it and Unblock the Notifications