ಬೆಂಗಳೂರಿನ ಸುಮಾರು 75 ಪ್ರತಿಶತ ಜನರು ಡಿಜಿಟಲ್ ತಂತ್ರಜ್ಞಾನಗಳನ್ನು ಎಂದಿಗೂ ಬಳಸಿಲ್ಲ ಮತ್ತು ಅವರಲ್ಲಿ 79 ಪ್ರತಿಶತದಷ್ಟು ಜನರು ಶಿಕ್ಷಣಕ್ಕಾಗಿ ವೀಡಿಯೊಗಳನ್ನು ನೋಡಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.
'ಡಿಜಿಟಲ್ ಸೊಸೈಟಿ ಇನ್ ಇಂಡಿಯಾ - ಎ ಸ್ಟಡಿ ಆಫ್ ಆನ್ ಅರ್ಬನ್ ಸಿಟಿ (ಬೆಂಗಳೂರು) 2024' ಎಂಬ ಎನ್‌ಜಿ ರಿಸರ್ಚ್‌ನಲ್ಲಿ ಈ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದರೂ ಕೂಡಾ ಶೈಕ್ಷಣಿಕ ಉದ್ದೇಶಗಳಿಗಾಗಿ ಅದರ ಬಳಕೆಯು ಬಹಳ ಸೀಮಿತವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಬೆಂಗಳೂರಿನ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ-ಬಿ) ಯಲ್ಲಿನ ಐಟಿ ಮತ್ತು ಸಾರ್ವಜನಿಕ ನೀತಿ ಕೇಂದ್ರದಲ್ಲಿ (ಸಿಐಟಿಎಪಿಪಿ) ಈ ಸಮೀಕ್ಷೆಯ ವರದಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ 198 ವಾರ್ಡ್‌ಗಳಾದ್ಯಂತ 80 ಕ್ಲಸ್ಟರ್‌ಗಳಿಂದ ಗುರುತಿಸಲಾದ 1,640 ಜನರ ಸಮೀಕ್ಷೆಯನ್ನು ಇದು ಆಧರಿಸಿದೆ. ಐಟಿ ವೃತ್ತಿಪರರು ಸೇರಿದಂತೆ 206 ಜನರ ಪ್ಯತ್ಯೇಕ ಸಮೀಕ್ಷೆಯನ್ನು ಮಾಡಲಾಗಿದೆ.
ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರ್ವಹಿಸುವ ಚಟುವಟಿಕೆಗಳು, ಸರ್ಕಾರಿ/ಖಾಸಗಿ ಡಿಜಿಟಲ್ ಪರಿಹಾರಗಳ ಬಳಕೆ, ಮಟ್ಟ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯ ಮೂಲಗಳು ಇತ್ಯಾದಿಗಳಲ್ಲಿ ಸಾಮಾಜಿಕ-ಆರ್ಥಿಕ ವರ್ಗೀಕರಣದಾದ್ಯಂತ ಡಿಜಿಟಲ್ ತಂತ್ರಜ್ಞಾನಗಳ ಅನುಭವಗಳನ್ನು ಗುರುತಿಸುವುದು ಸಮೀಕ್ಷೆಯ ಉದ್ದೇಶವಾಗಿದೆ.
ಹೆಚ್ಚುವರಿಯಾಗಿ, ಸಮೀಕ್ಷೆಯು ಡಿಜಿಟಲ್ ತಂತ್ರಜ್ಞಾನಗಳ ಬಗ್ಗೆ ಸುರಕ್ಷತೆ, ನಂಬಿಕೆ, ಪ್ರಯೋಜನಗಳ ವಿರುದ್ಧ ಅಪಾಯಗಳ ಮೌಲ್ಯಮಾಪನ, ಗೌಪ್ಯತೆ, ನಿಯಮಗಳು, ಉದ್ಯೋಗಗಳ ಮೇಲಿನ ಪ್ರಭಾವ ಇತ್ಯಾದಿಗಳ ಬಗ್ಗೆ ನಂಬಿಕೆಗಳು, ಭರವಸೆಗಳು ಮತ್ತು ಕಾಳಜಿಗಳನ್ನು ಅಧ್ಯಯನ ಮಾಡಿದೆ.
ಕೇವಲ ಶಿಕ್ಷಣ ಮಾತ್ರವಲ್ಲ, ಸಾಮಾನ್ಯ ಜನರಲ್ಲಿ ಕೆಲಸಕ್ಕಾಗಿ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಸೀಮಿತವಾಗಿದೆ. ಏಕೆಂದರೆ ಪ್ರತಿಕ್ರಿಯಿಸಿದವರಲ್ಲಿ 50 ಪ್ರತಿಶತದಷ್ಟು ಜನರು ಮಾತ್ರ ಪೂರ್ಣ ಸಮಯದ ಉದ್ಯೋಗವನ್ನು ಹೊಂದಿದ್ದಾರೆ. ಕೆಲಸಕ್ಕಾಗಿ ವಾಟ್ಸಾಪ್ ಮತ್ತು ಇಮೇಲ್ ಅನ್ನು ಬಳಸಿಕೊಂಡು ಸಹೋದ್ಯೋಗಿಗಳಿಗೆ ಕರೆ ಮಾಡುವುದು ಅಥವಾ ಸಂದೇಶ ಕಳುಹಿಸುವುದು ಮೊದಲ ಎರಡು ಚಟುವಟಿಕೆಗಳಾಗಿದ್ದು ಇದು ಬರೀ ಶೇಕಡ 9 ರಷ್ಟಿದೆ ಎಂದು ವರದಿ ಹೇಳಿದೆ.
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗಿಂತ ಸಾಮಾನ್ಯ ಜನರಲ್ಲಿ ಸರ್ಕಾರಿ ವೇದಿಕೆಗಳ ಬಳಕೆಯು ತುಂಬಾ ಕಡಿಮೆ ಎಂದು ವರದಿ ತೋರಿಸಿದೆ. ವರದಿಯ ಪ್ರಕಾರ, ಆಧಾರ್ (ಯುಐಡಿಎಐ ವೆಬ್‌ಸೈಟ್) ನಂತಹ ವೇದಿಕೆಯನ್ನು ಶೇಕಡ 32ರಷ್ಟು ಜನರು ಮಾತ್ರ, ಐಆರ್‌ಸಿಟಿಸಿ-ರೈಲ್ವೆ ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಅನ್ನು ಶೇಕಡಾ 23 ರಷ್ಟು ಮಂದಿ ಮಾತ್ರ, ಅವುಗಳಲ್ಲಿ ಅರ್ಧದಷ್ಟು (ಶೇ 54) ಈ ಯಾವುದೇ ಸರ್ಕಾರಿ ಪ್ಲಾಟ್‌ಫಾರ್ಮ್‌ಗಳನ್ನು ಎಂದಿಗೂ ಬಳಸಿಲ್ಲ. ಈ ನಡುವೆ 81 ಪ್ರತಿಶತ ಐಟಿ ತಜ್ಞರು ಆಧಾರ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದ್ದಾರೆ ಮತ್ತು ಅವರಲ್ಲಿ 76 ಪ್ರತಿಶತದಷ್ಟು ಜನರು ಐಆರ್‌ಸಿಟಿಸಿ ಪ್ಲಾಟ್‌ಫಾರ್ಮ್ ಅನ್ನು ಬಳಸಿದ್ದಾರೆ.


Click it and Unblock the Notifications