ವಿಶ್ವದ ಅತಿದೊಡ್ಡ ಪ್ಯಾಕೇಜ್ ಫುಡ್ ಮತ್ತು ತಂಪು ಪಾನೀಯಗಳ ಕಂಪನಿಯಾದ ನೆಸ್ಲೆಯ ಪ್ರಮುಖ ಆಹಾರ ಉತ್ಪನ್ನಗಳು, ಪಾನೀಯಗಳ ಪೋರ್ಟ್‌ಪೊಲಿಯೋ ಅನಾರೋಗ್ಯಕರವಾಗಿದೆ ಎಂದು ವರದಿಯಾದ ಬಳಿಕ ಇದೀಗ ದೊಡ್ಡ ಮಟ್ಟಿನ ಟೀಕೆಗಳನ್ನು ಎದುರಿಸುತ್ತಿದೆ.
ಸದ್ಯ ಎದುರಾಗಿರುವ ಟೀಕೆಗಳನ್ನು ಎದುರಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದು, ತನ್ನ ಉತ್ಪನ್ನಗಳ ಆರೋಗ್ಯ ಕಾರ್ಯತಂತ್ರವನ್ನು ರೂಪಿಸಿ ಉತ್ಪಾದಿಸುವ ಕೆಲಸ ಮಾಡುವುದಾಗಿ ತಿಳಿಸಿದೆ.
ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಇಂಟರ್ನಲ್ ಡಾಕ್ಯುಮೆಂಟ್‌ನಲ್ಲಿ ವಿಶ್ಲೇಷಣೆ ಪ್ರಕಾರ ನೆಸ್ಲೆ ಪ್ರಮುಖ ಆಹಾರ ಉತ್ಪನ್ನಗಳು ಮತ್ತು ಪಾನೀಯಗಳು ಅನಾರೋಗ್ಯಕರ ಎಂದು ವಿವರಿಸಿದೆ. 2021ರ ಆರಂಭದಲ್ಲಿ ಕಂಪನಿಯ ಗಮನಕ್ಕೆ ಈ ವಿಚಾರವು ಬಂದಿದ್ದು, ಉನ್ನತ ಅಧಿಕಾರಿಗಳ ನಡುವೆ ಆಂತರಿಕ ಚರ್ಚೆಗೆ ಕಾರಣವಾಗಿದೆ.

ಈ ಡಾಕ್ಯುಮೆಂಟ್‌ನಲ್ಲಿ ತಿಳಿಸಿರುವಂತೆ ಆರೋಗ್ಯಕರ ಎಂದು ಮಾನ್ಯತೆ ಪಡೆದಿರುವ ಅಡಿಯಲ್ಲಿ ನೆಸ್ಲೆಯ ಶೇಕಡಾ 60ಕ್ಕಿಂತ ಹೆಚ್ಚಿನ ಆಹಾರ ಮತ್ತು ಪಾನೀಯಗಳ ಪೋರ್ಟ್‌ಪೊಲಿಯೋ ಅನಾರೋಗ್ಯಕರ ಎಂದು ಅದು ಸೂಚಿಸಿದೆ.
ಅಷ್ಟೇ ಏಕೆ ನೆಸ್ಲೆ ಕಂಪನಿಯೇ ಸ್ವತಃ ಕಂಪನಿಯು ಆಂತರಿಕ ದಾಖಲೆಯಲ್ಲಿ ತನ್ನ ಕೆಲವು ವಿಭಾಗಗಳು "ಎಂದಿಗೂ ಆರೋಗ್ಯಕರವಾಗಿರುವುದಿಲ್ಲ" ಎಂದು ಬಹಿರಂಗಪಡಿಸಿದೆ.
"ನಮ್ಮ ಕೆಲವು ವರ್ಗಗಳು ಮತ್ತು ಉತ್ಪನ್ನಗಳು ನಾವು ಎಷ್ಟೇ ನವೀಕರಿಸಿದರೂ ಎಂದಿಗೂ ಆರೋಗ್ಯಕರ ಆಗುವುದಿಲ್ಲ" ಎಂದು ನೆಸ್ಲೆ ಆಂತರಿಕ ಪ್ರಸ್ತುತಿ ಹೇಳಿದೆ.
ಆಸ್ಟ್ರೇಲಿಯಾದ ಹೆಲ್ತ್ ಸ್ಟಾರ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಮೌಲ್ಯಮಾಪನ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ, ಶೇಕಡಾ 37ರಷ್ಟು ನೆಸ್ಲೆ ಆಹಾರ ಮತ್ತು ಪಾನೀಯಗಳು ಐದರಲ್ಲಿ 3.5 ರೇಟಿಂಗ್ ಪಡೆದಿದೆ.
ನೆಸ್ಲೆ ಕಂಪನಿಯು ತನ್ನ ಆಂತರಿಕ ದಾಖಲೆಯಲ್ಲಿ, ನೆಸ್ಲೆ 3.5-ಸ್ಟಾರ್ ಮಿತಿಯನ್ನು "ಆರೋಗ್ಯದ ಮಾನ್ಯತೆ ಪಡೆದ ವ್ಯಾಖ್ಯಾನ" ಎಂದು ಬಣ್ಣಿಸಿದೆ. ಡಾಕ್ಯುಮೆಂಟ್ ಪ್ರಕಾರ, ನೆಸ್ಲೆಯ ಆಹಾರ ಉತ್ಪನ್ನಗಳಲ್ಲಿ ಸುಮಾರು ಶೇಕಡಾ 70 ಮತ್ತು ಶೇಕಡಾ 96 ರಷ್ಟು ಪಾನೀಯಗಳು ಶುದ್ಧ ಕಾಫಿಯನ್ನು ಹೊರತುಪಡಿಸಿ ಉತ್ತಮ ಮಿತಿ ಪೂರೈಸಲು ವಿಫಲವಾಗಿವೆ. ಇದಲ್ಲದೆ, ನೆಸ್ಲೆ ಮಿಠಾಯಿ ಮತ್ತು ಐಸ್ ಕ್ರೀಮ್ ಪೋರ್ಟ್ಫೋಲಿಯೊದ ಶೇಕಡಾ 99ರಷ್ಟು ಉತ್ತಮ ಮಿತಿ ರೇಟಿಂಗ್ ಅನ್ನು ಪೂರೈಸುವಲ್ಲಿ ವಿಫಲವಾಗಿದೆ.


Click it and Unblock the Notifications