ಬೆಂಗಳೂರು, ಸೆಪ್ಟೆಂಬರ್ 10: ಪ್ರತಿಯೊಬ್ಬನ ಜೀವನದಲ್ಲಿ ಪೋಷಕತ್ವವು ಹೊಸ ಹಂತವಾಗಿದೆ. ಅಲ್ಲದೇ ಇದು ಜೀವನದಲ್ಲಿ ಹೊಸ ಅಧ್ಯಾಯವಾಗಿದೆ. ಇದು ಪೋಷಕರಿಗೆ ಮಾತ್ರವಲ್ಲದೇ ಕುಟುಂಬ ಸದಸ್ಯರಿಗೆಲ್ಲರಿಗೂ ಅತ್ಯಂತ ಸಂತೋಷವನ್ನು ತರುತ್ತದೆ. ಅದೇ ರೀತಿ ಸ್ವಂತ ಮನೆ ಖರೀದಿಸುವುದು ಜೀವನದಲ್ಲಿ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ. ಇದು ಹೂಡಿಕೆಯಾಗಿದ್ದರೂ ಕುಟುಂಬದ ಭವಿಷ್ಯವನ್ನು ರೂಪಿಸುತ್ತದೆ. ಆದರೆ ಬೆಂಗಳೂರಿನಲ್ಲಿ, ಈ ನಿರ್ಧಾರ ಮಾಡುವುದು ಹಲವರಿಗೆ ಸ್ವಲ್ಪ ಗೊಂದಲಕಾರಿಯಾಗಿತ್ತದೆ.
ದಂಪತಿಗಳು ಪೋಷಕರಾಗುವ ಜೀವನ ಪ್ರಮುಖ ಬದಲಾವಣೆಯ ಸಮಯದಲ್ಲಿ ಮನೆಯ ಖರೀದಿ ಅಥವಾ ಬಾಡಿಗೆ ಬಗ್ಗೆ ಕೆಲವು ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆಯೂ ಬರುತ್ತದೆ. ಬೆಂಗಳೂರಿನ 33 ವರ್ಷದ ರೆಡ್ಡಿಟರ್ ಇದೇ ರೀತಿಯ ಸಂದಿಗ್ಧತೆಯನ್ನು ಎದುರಿಸುತ್ತಿದ್ದು ಇದಕ್ಕಾಗಿ ಅವರು ರೆಡ್ಡಿಟ್ ನಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ನೆಟ್ಟಿಗರ ಸಮುದಾಯದಿಂದ ಸಲಹೆಗಳನ್ನು ಕೇಳಿದ್ದಾರೆ.

ಒಟ್ಟಾರೆಯಾಗಿ ನೋಡುವುದಾದರೆ ಸ್ವಂತ ಮನೆ ಅಥವಾ ಬಾಡಿಗೆ ಮನೆ ಈ ವಿಚಾರ ನಿಜಕ್ಕೂ ಚರ್ಚೆಯ ಹಾಟ್ ಟಾಪಿಕ್ ಆಗಿದ್ದು ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಮನೆ ಖರೀದಿಸುವುದು ದೀರ್ಘಾವಧಿಯಲ್ಲಿ ಉತ್ತಮ ಹೂಡಿಕೆಯಾಗಿದೆ ಎಂದು ವಾದಿಸುತ್ತಾರೆ. ಇತರರು ಬಾಡಿಗೆಗೆ ಪಡೆಯುವುದು ಹೆಚ್ಚುಅನುಕೂಲಕರವಾಗಿದ್ದು ಇದು ನಮ್ಮ ಜವಾಬ್ದಾರಿಗಳನ್ನು ಚಿಂತೆಗಳನ್ನು ಕಡಿಮೆ ಮಾಡುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರೆಡ್ಡಿಟ್ ಬಳಕೆದಾರರು "ಮಗುವಿನ ಶಿಕ್ಷಣದ ಕಾರಣದಿಂದಾಗಿ (ಪ್ರಸ್ತುತ 1 ವರ್ಷ ವಯಸ್ಸಿನ ಮಗು) ನಾವು ಹೆಚ್ಚು ಕಡಿಮೆ ಇನ್ನೂ 15-20 ವರ್ಷಗಳ ಕಾಲ ಬೆಂಗಳೂರಿನಲ್ಲಿ ಇರುತ್ತೇವೆ ಹೀಗಾಗಿ ಸರಿಸುಮಾರು ₹ 50L ಡೌನ್‌ಪೇಮೆಂಟ್ ಮತ್ತು ಉಳಿದವು ಸಾಲವಾಗಿ ಮನೆಕೊಳ್ಳುವುದು ಉತ್ತಮವೇ? ಅಥವಾ ಬಾಡಿಗೆಗೆ ವಾಸ ಉತ್ತಮವೇ? ನಾವು ಪ್ರಸ್ತುತ ಬಾಡಿಗೆ ಮತ್ತು ನಿರ್ವಹಣೆಗಾಗಿ ₹ 39 ಸಾವಿರ ಪಾವತಿಸುತ್ತಿದ್ದೇವೆ. ದಂಪತಿಗಳಿಬ್ಬರು ಸೇರಿ ಮಾಸಿಕವಾಗಿ ₹ 2 ಲಕ್ಷ ಗಳಿಸುತ್ತಿದ್ದಾರೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸ್ಥಳದ ಪ್ರಮುಖ್ಯತೆಯನ್ನು ಪರಿಗಣಿಸಿ:
ಬೆಂಗಳೂರಿನ ಪೋಸ್ಟ್‌ಗೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು 15-20 ವರ್ಷಗಳ ದೀರ್ಘಾವಧಿಯನ್ನು ಗಣನೆಗೆ ತೆಗೆದುಕೊಂಡು ಮನೆ ಖರೀದಿಸುವ ಪರವಾಗಿ ಒಲವು ತೋರಿದ್ದಾರೆ. ಶಾಲೆಗಳು ಮತ್ತು ಕಚೇರಿಗಳ ಸಾಮೀಪ್ಯ ಅಗತ್ಯವಿರುವ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸ್ಥಳವು ಪ್ರಮುಖ ಅಂಶವಾಗಿದೆ ಎಂದು ಹೆಚ್ಚಿನವರು ಸಲಹೆ ನೀಡಿದ್ದಾರೆ.
"ಶಾಲೆ ಮತ್ತು ನಿಮ್ಮ ಕೆಲಸದ ಸ್ಥಳ ಸನಿಹ ಮನೆ ಹೊಂದುವುದು ಉತ್ತಮ. ಬೆಂಗಳೂರಿನಲ್ಲಿ ಇವೆರಡರ ನಡುವೆ ಇರುವ ದೂರ ನಿಮ್ಮ ಜೀವನದ ಗುಣಮಟ್ಟದ ಮೇಲೆ ಗಣನೀಯವಾಗಿ ಪರಿಣಾಮ ಬೀರಬಹುದು" ಎಂದು ನೆಟ್ಟಿಗರೊಬ್ಬರು ಎಚ್ಚರಿಸಿದ್ದಾರೆ.
ದೊಡ್ಡ ಮೊತ್ತದ ಡೌನ್‌ಪೇಮೆಂಟ್ ಅಗತ್ಯವಿದೆಯೇ?
ನೆಟಿಜನ್‌ಗಳು ಮನೆ ಖರೀದಿ ವೇಳೆ ದೊಡ್ಡ ಮೊತ್ತದ ಡೌನ್‌ಪೇಮೆಂಟ್ ಮಾಡುವುದು ಸರಿಯಾದ ಕ್ರಮವೇ ಎಂಬ ಕುರಿತು ಚರ್ಚಿಸಿದ್ದಾರೆ. " ನನ್ನ ಬಳಿ ತುರ್ತು 12L ನಗದು ಅಥವಾ ಚಿನ್ನ ಮತ್ತು ವಸ್ತುಗಳಂತಹ ಇತರ ಹೂಡಿಕೆಗಳು ಇಲ್ಲದಿದ್ದರೆ ನಾನು ಸಂಪೂರ್ಣ 50L ಅನ್ನು ಡೌನ್ ಪಾವತಿಯಾಗಿ ಪಾವತಿಸುವುದಿಲ್ಲ," ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬಾಡಿಗೆ ಅಥವಾ ಖರೀದಿಸುವುದೇ?
ಮನೆ ಖರೀದಿ ಮಾಡುವ ಮೊದಲು ರೆಡ್ಡಿಟರ್ ಕೆಲ ವರ್ಷ ಕಾಯುವುದು ಉತ್ತಮ ಎಂದು ಹಲವರು ಸಲಹೆ ನೀಡಿದ್ದಾರೆ.ಶಾಲೆಯಲ್ಲಿ ಬಗ್ಗೆ ಸ್ಪಷ್ಟತೆ ಇರುವವರೆಗೆ ಬಾಡಿಗೆ ಇರುವುದು ಉತ್ತಮ ಎಂದಿದ್ದಾರೆ. ಜೊತೆಗೆ ಉದ್ಯೋಗದ ನಷ್ಟ ಅಥವಾ ಜೀವನದ ಸನ್ನಿವೇಶಗಳ ಬಗ್ಗೆ ಜಾಗರೂಕರಾಗಿರಿ ಮತ್ತು ರೀಮ್ ವಿಮೆಯನ್ನು ಪಡೆಯಿರಿ. ಮುಂದಿನ ಕೆಲವು ವರ್ಷಗಳಲ್ಲಿ ಬೆಂಗಳೂರಿನ ಮೆಟ್ರೋ ಸಂಪರ್ಕ ಇತ್ಯಾದಿಗಳಲ್ಲಿ ಪ್ರಸ್ತಾಪಿಸಲಾದ ಸುಧಾರಣೆಯನ್ನು ಗಮನಿಸಿದರೆ ಕೊಂಚ ಕಾಯಬಹುದು" ಎಂದು ರೆಡ್ಡಿಟರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಳೆಯುತ್ತಿದೆ ಹೀಗಾಗಿ ಅಂದುಕೊಂಡ ಸ್ಥಳದಲ್ಲಿ ಕೆಲ ವರ್ಷಗಳು ಬಿಟ್ಟು ಪ್ರಾಪರ್ಟಿ ಖರೀಸಲು ಹೊರಟರೇ ಅದು ಕೈಗೆಟಕುವುದು ಕಷ್ಟ ಸಾಧ್ಯವಾಗಬಹುದು. ಯಾಕೆಂದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ 2024 ರ ಎರಡನೇ ತ್ರೈಮಾಸಿಕದಲ್ಲಿ, 28,356 ವಹಿವಾಟುಗಳನ್ನು ದಾಖಲಿಸಲಾಗಿದೆ, ಇದು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 19% ಹೆಚ್ಚಳವಾಗಿದೆ. ರಿಜಿಸ್ಟರ್ ಆದ ಮಾರಾಟಗಳ ಮೌಲ್ಯವು ಅದೇ ಅವಧಿಯಲ್ಲಿ 30% ಹೆಚ್ಚಾಗಿದೆ, ಜೂನ್ ಕ್ವಾರ್ಟರ್ ಅಂತ್ಯದ ವೇಳೆಗೆ 19,631 ಕೋಟಿ ರೂ. ತಲುಪಿದೆ.
ಹೀಗಾಗಿ ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಅಥವಾ ಬಾಡಿಗೆಗೆ ಪಡೆಯುವುದು ಪ್ರತಿಯೊಬ್ಬರ ವೈಯಕ್ತಿಕ ಪರಿಸ್ಥಿತಿಯನ್ನು ಅವಲಂಬಿಸಿದೆ. ಅವರವರ ಹಣಕಾಸುಗಳನ್ನು, ಜೀವನದ ಗುಣಮಟ್ಟದ ಆದ್ಯತೆಗಳನ್ನು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಒಳಿತು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications