ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು ಘೋಷಿಸಿದೆ. ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಅನುಮೋದನೆಯನ್ನು ಕೊಟ್ಟು ಆಗಿದೆ ಆದರೆ ಜಾಗ ಮಾತ್ರ ಫೈನಲ್ ಆಗಿಲ್ಲ. ಇದರ ಜೊತೆಗೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ.ಅದರಂತೆಯೇ ವಿಜಯಪುರ ಮತ್ತು ಹಾಸನದಲ್ಲಿ ಎರಡು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಎರಡೂ ವಿಮಾನ ನಿಲ್ದಾಣಗಳ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಆದರೆ ಸುತ್ತ ಮುತ್ತಲಿನ ಪ್ರದೇಶಗಳ ಬೆಲೆ ಗಗನಕ್ಕೇರುತ್ತಿದೆ. ಭೂಮಿಗೆ ಬಂಗಾರದ ಬೆಲೆ ಸಿಗುತ್ತಿದೆ.

ರಾಜ್ಯ ಸರ್ಕಾರವು ವಿಜಯಪುರ ಮತ್ತು ಹಾಸನದಲ್ಲಿ ಎರಡು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಈ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಿಜಯಪುರದಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣವು 727 ಎಕರೆ ಪ್ರದೇಶವನ್ನು ಹೊಂದಿದೆ ಇದರ ನಿರ್ಮಾಣ ವೆಚ್ಚವನ್ನು 347.92 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವು ಜಿಲ್ಲೆಗೆ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಭೂವನಹಳ್ಳಿ ಗ್ರಾಮದ ಬಳಿ ಸ್ಥಾಪನೆಯಾಗುತ್ತಿದೆ ಈ ಯೋಜನೆ ಪೂರ್ಣಗೊಳ್ಳಲು ಸುಮಾರು ಅಂದಾಜು 193.65 ಕೋಟಿ ವೆಚ್ಚ ಬೇಕಾಗುತ್ತದೆ.
ಈಗಾಗಲೇ ವಿಜಯಪುರ, ಹಾಸನ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಈ ಎರಡೂ ವಿಮಾನ ನಿಲ್ದಾಣಗಳು 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಆದರೆ ಸರ್ಕಾರ ಶೀಘ್ರದಲ್ಲಿ ಉದ್ಘಾಟನೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಈ ಪ್ರದೇಶದಲ್ಲಿ ಇರುವ ಭೂಮಿಯ ಬೆಲೆ ಏರಿಕೆಯಾಗಿವೆ. ಇನ್ನೂ ವಿಮಾನ ನಿಲ್ದಾಣ ಉದ್ಘಾಟನೆಯಾದ್ದರೆ ಮತ್ತಷ್ಟು ದುಬಾರಿಯಾಗಿ ಗಗನಕೇರುತ್ತೇವೆ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ವಿಜಯಪುರ ಜಿಲ್ಲೆ ಮತ್ತು ಹಾಸನದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣವು ಆ ಪ್ರದೇಶಗಳಲ್ಲಿ ಭೂಮಿಯ ಬೆಲೆ ಹೆಚ್ಚಳಕ್ಕೆ ಗಣನೀಯವಾಗಿ ಕಾರಣವಾಗಿದೆ. ಈ ಬೆಳವಣಿಗೆಯಿಂದಾಗಿ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆ ಕೂಡ ಇದ್ದು,ರಿಯಲ್ ಎಸ್ಟೇಟ್‌ಗೆ ಬಂಗಾರದ ಬೆಲೆ ಬರುತ್ತದೆ.
ಹಾಸನ ವಿಮಾನ ನಿಲ್ದಾಣ: ಹೂಡಿಕೆದಾರಿಗೆ ಗಮನ ಸಳೆಯುತ್ತಿದೆ
ಹಾಸನದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳು ಹೆಚ್ಚಾಗಿದ್ದು, ಭೂಮಿಯ ಬೆಲೆಗಳು ಏರಿಕೆಯಾಗುತ್ತಿವೆ. ಈ ಬೆಳವಣಿಗೆಯು ಜಿಲ್ಲೆಯ ಆರ್ಥಿಕತೆಗೆ ಹೊಸ ಆಯಾಮವನ್ನು ನೀಡುವಂತಹ ಸಾಧ್ಯತೆ ಇದೆ.
ವಿಜಯಪುರ ವಿಮಾನ ನಿಲ್ದಾಣ: ಭೂಮಿ ಬೆಲೆ ಹೆಚ್ಚಳ
ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಿಮಾನ ನಿಲ್ದಾಣವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಯ ಮೌಲ್ಯವನ್ನು ಹೆಚ್ಚಿಸಿದೆ. ವಿಮಾನ ನಿಲ್ದಾಣದ ಸಮೀಪವಿರುವ ಪ್ರದೇಶಗಳಲ್ಲಿ ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗಾಗಿ ಭೂಮಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕಾರಣದಿಂದಾಗಿ ಭೂಮಿಯ ಬೆಲೆ ಗಗನಕ್ಕೇರಿದೆ.
ಭೂಮಿಗೆ ಬಂಗಾರದ ಬೆಲೆ ಸಿಗುತ್ತಿದೆ
ವಿಮಾನ ನಿಲ್ದಾಣವಾಗುತ್ತಿರುವ ಪ್ರದೇಶದಲ್ಲಿ ಚಿನ್ನದ ಬೆಲೆ ಸಿಗುತ್ತಿದೆ. ರಿಯಲ್ ಎಸ್ಟೇಟ್‌ದಾರರು ವಿಮಾನ ಬಳಿ ಇರುವ ರೈತರ ಭೂಮಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿದ್ದಾರೆ.
ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ
ಈಗಾಗಲೇ ಕರ್ನಾಟಕ ಮತ್ತು ತಮಿಳು ನಾಡಿನಲ್ಲಿ ಏಕಕಾಲದಲ್ಲಿ ಎರಡು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತೀವೆ. ಈ ಹಿನ್ನೆಲೆಯಲ್ಲಿ ವಿವಿಧ ಪ್ರದೇಶದಲ್ಲಿ ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ ಆದಾಯ ಸಿಗುತ್ತದೆ. ಹೂಸೂರಿನಲ್ಲಿ ಹಾಗೂ ಬೆಂಗಳೂರು ಪಕ್ಕದಲ್ಲಿ ನಿರ್ಮಾಣವಾಗುವ ಎರಡನೇ ವಿಮಾನ ನಿಲ್ದಾಣಗಳು ಎರಡೂ ರಾಜ್ಯಗಳ ವಿಮಾನ ನಿಲ್ದಾಣದ ಅಕ್ಕಪಕ್ಕದಲ್ಲಿ ಮತ್ತು ವಿಮಾನ ನಿಲ್ದಾಣದ ಕೆಲವೇ ಕಿ.ಮೀ ದೂರದಲ್ಲಿ ಇರುವ ಜಾಗಗಳಲ್ಲಿ ಜಮೀನು, ಭೂಮಿ ಹಾಗೂ ಆಸ್ತಿಗೆ ಬಂಪರ್ ಬೆಲೆಗೆ ಮಾರಾಟವಾಗುತ್ತಾವೆ. ಈಗಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತಿರುವಾಗಲೇ ಆ ಜಾಗದ ಆಸ್ತಿದಾರರು ಎಚ್ಚರದಿಂದ ಇದ್ದಾರೆ ಆಗಿದ್ದಾರೆ. ಅಲ್ಲಿ ಜಾಗ ಮಾರಾಟ ಮಾಡುವವರು ಮುಂದೂಡುತ್ತಿದ್ದಾರೆ.
ಆರ್ಥಿಕ ಪ್ರಗತಿಗೆ ವಿಮಾನ ನಿಲ್ದಾಣಗಳ ಕೊಡುಗೆ
ರಾಜ್ಯದ ಎಲ್ಲ ಜಿಲ್ಲೆಗಲ್ಲೂ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ವಿಮಾನ ನಿಲ್ದಾಣಗಳು ರಾಜ್ಯದಲ್ಲಿ ಹೆಚ್ಚಾಗಿ ನಿರ್ಮಾಣವಾದ್ದರೆ ಅಲ್ಲಿ ಪ್ರವಾಸೋದ್ಯಮ ಬೆಳವಣಿಗೆಯನ್ನು ಕಾಣುತ್ತದೆ. ಜೊತೆಗೆ ಕೃಷಿ ಉತ್ಪನ್ನಗಳು ಸಾಗಣೆ, ವಾಣಿಜ್ಯ ವಹಿವಾಟು,ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸ್ಥಳೀಯ ಪ್ರದೇಶದವರಿಗೆ ಉದ್ಯೋಗಗಳ ಸೃಷ್ಟಿಯಾಗುತ್ತದೆ. ಹೂಡಿಕೆದಾರು ಕೂಡ ಮುಂದೆಬರುತ್ತಾರೆ ಅದ್ದರಿಂದ ಆರ್ಥಿಕ ಆದಾಯ ಹೆಚ್ಚಾಗಿ ದೇಶದ ಪ್ರಗತಿಗೆ ಸಾಧ್ಯವಾಗುತ್ತದೆ. ಜನರ ಜೀವನಮಟ್ಟವನ್ನು ಸುಧಾರಿಸಲು ಕೂಡ ಹೆಚ್ಚಿನ ಅನುಕೂಲವಾಗುತ್ತದೆ.
ಒಟ್ಟಾರೆಯಾಗಿ, ವಿಜಯಪುರ ಮತ್ತು ಹಾಸನದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣವು ಆ ಪ್ರದೇಶಗಳ ಭೂಮಿಯ ಬೆಲೆಯಲ್ಲಿ ಏರಿಕೆಯನ್ನುಂಟುಮಾಡಿದೆ. ಜೊತೆಗೆ ಬೆಂಗಳೂರಿನ ಬಹುನಿರೀಕ್ಷಿತ ಎರಡನೇ ವಿಮಾನ ನಿಲ್ದಾಣವಾದ್ದರೂ ಕೂಡ ಅಲ್ಲಿ ಸುತ್ತಾ-ಮುತ್ತಲಿನ ಪ್ರದೇಶಕ್ಕೆ ಚಿನ್ನದ ಬೆಲೆ ಸಿಗುತ್ತದೆ. ಇದು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಮೂಲಕ ಸ್ಥಳೀಯರಿಗೆ ಅನುಕೂಲವನ್ನು ಮಾಡಿಕೊಡುತ್ತದೆ.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications