ಪ್ರಸ್ತುತ ಆರೋಗ್ಯ ವಿಮೆ ಸೇರಿದಂತೆ ಹಲವು ವಿಮೆಗಳು ಲಭ್ಯವಿದೆ. ಈ ಪೈಕಿ ಪ್ರಯಾಣ ವಿಮೆ ಕೂಡ ಅತ್ಯಂತ ಪ್ರಮುಖವಾದ ವಿಮೆಯಾಗಿದೆ. ಆದರೆ, ನೀವು ಕೆಲ ದೇಶಗಳಿಗೆ ಪ್ರಯಾಣ ಮಾಡಬೇಕಾದರೆ ಕಡ್ಡಾಯ ವಿಮೆ ಹೊಂದಿರಲೇಬೇಕು. ಮುಖ್ಯವಾಗಿ ನೀವು, ಭಾರತದಿಂದ ಅಂತರಾಷ್ಟ್ರೀಯ ಪ್ರಯಾಣ ಮಾಡುತ್ತಿದ್ದರೆ, ಯಾವ ದೇಶ, ಆ ದೇಶದ ಪಾಲಿಸಿ ಮೇಲೆ ಕಡ್ಡಾಯ ವಿಮೆಗಳು ಅವಲಂಬಿತವಾಗಿರುತ್ತದೆ. ಸದ್ಯ 38 ದೇಶಗಳಿಗೆ ಪ್ರಯಾಣಿಸಬೇಕಾದರೆ ಕಡ್ಡಾಯ ವಿಮೆ ಅಗತ್ಯವಿದೆ. ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕಡ್ಡಾಯ ವಿಮೆ ಅಗತ್ಯವಿದೆ. ಹಾಗಿದ್ರೆ ಕಡ್ಡಾಯ ವಿಮೆ ಎಂದರೇನು? ಕಡ್ಡಾಯ ವಿಮೆ ಹೊಂದಿರುವ ದೇಶಗಳು ಯಾವುವು? ಇವುಗಳಿಂದ ಆಗುವ ಪ್ರಯೋಜನಗಳೇನು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಕಡ್ಡಾಯ ವಿಮೆ ಎಂದರೇನು?
ಪ್ರಯಾಣ ಮಾಡಲು ಯಾವುದೇ ರಾಷ್ಟ್ರವು ಪ್ರಯಾಣ ವಿಮೆಯನ್ನು ಕಡ್ಡಾಯಗೊಳಿಸಿದರೆ, ನಾವು ಆ ರಾಷ್ಟ್ರವನ್ನು ಪ್ರವೇಶಿಸಲು ಅಥವಾ ವೀಸಾಗೆ ಅರ್ಜಿ ಸಲ್ಲಿಸಲು ಕಾನೂನು ರೀತಿಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಇದನ್ನೇ ಕಡ್ಡಾಯ ವಿಮೆ ಎಂದು ಕರೆಯಲಾಗುತ್ತದೆ.

ಸಾಮಾನ್ಯ ಪ್ರಯಾಣ ವಿಮೆಯಂತೆಯೇ ಈ ಕಡ್ಡಾಯ ಪಾಲಿಸಿಗಳು ಕೆಲವೊಂದು ಅಂಶಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಕವರೇಜ್,ವಿಮಾನಗಳ ವಿಳಂಬ, ಕಳೆದುಹೋದ ಬ್ಯಾಗೇಜ್/ಪಾಸ್‌ಪೋರ್ಟ್, ಆಸ್ತಿ ಹಾನಿ ಅಥವಾ ದೈಹಿಕ ಹಾನಿಯ ಹೊಣೆಗಾರಿಕೆ ಇತ್ಯಾದಿಗಳಂತಹ ಅದೇ ರೀತಿಯ ಹಲವು ಪ್ರಯೋಜನಗಳನ್ನು ಈ ಪ್ರಯಾಣದ ವಿಮೆ ಒದಗಿಸುತ್ತದೆ.
ಕಡ್ಡಾಯ ವಿಮೆ ಹೊಂದಿರುವ ದೇಶಗಳು ಯಾವುವು?
ನೇಪಾಳ (ಟ್ರೆಕ್ಕಿಂಗ್/ಪರ್ವತಾರೋಹಣ), ಜೋರ್ಡಾನ್, ಕ್ಯೂಬಾ, ಈಕ್ವೆಡಾರ್ (ಗ್ಯಾಲಪಗೋಸ್ಗಾಗಿ), ಅರುಬಾ, ವಿಯೆಟ್ನಾಂ, ಇರಾನ್, ಲಾವೋಸ್, ಕತಾರ್, ರುವಾಂಡಾ ಮತ್ತು ಸೇಶೆಲ್ಸ್. ಷೆಂಗೆನ್ ದೇಶಗಳಿಗೆ ಕನಿಷ್ಠ €30,000 ಕವರೇಜ್ ಅಗತ್ಯವಿದೆ. ರಷ್ಯಾ, ಟರ್ಕಿ, UAE (ಮ್ಲಟಿಪಲ್-ಎಂಟ್ರಿ ವೀಸಾಗಳು), ಸೌದಿ ಅರೇಬಿಯಾ ಮತ್ತು USA (ವಿದ್ಯಾರ್ಥಿಗಳು) ಸಹ ಕಡ್ಡಾಯ ವಿಮೆ ಹೊಂದಿವೆ.ಅದರಲ್ಲೂ ಅಂಟಾರ್ಟಿಕಾದಂತಹ ದೂರದ ಸ್ಥಳಗಳಲ್ಲಿ, ಕಾಂಪ್ರಹೆನ್ಸಿವ್ ವೈದ್ಯಕೀಯ ಸ್ಥಳಾಂತರಿಸುವ ಕವರೇಜ್ ತುಂಬಾನೇ ಮುಖ್ಯವಾಗುತ್ತದೆ.
ನಿಮ್ಮ ಪ್ರವಾಸವನ್ನು ಯೋಜಿಸುವ ಮೊದಲು ಯಾವಾಗಲೂ ರಾಯಭಾರ ಕಚೇರಿಗಳು ಅಥವಾ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಪ್ಡೇಟ್ ಮಾಡಿದ ನಿಯಮಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ.
ಕಡ್ಡಾಯ ವಿಮೆಯ ಆಗುವ ಪ್ರಯೋಜನಗಳೇನು?
ವಿಮಾನಯಾನದ ಪ್ರಯಾಣಿಕರಿಗೆ ವೈದ್ಯಕೀಯ ಸಹಾಯವನ್ನು ಒದಗಿಸಲು ಇದು ಸಹಾಯಕವಾಗುತ್ತದೆ.
ಸಾರ್ವಜನಿಕ ಸುರಕ್ಷತೆ ಮತ್ತು ಆರೋಗ್ಯವನ್ನು ಹೆಚ್ಚಿಸಲು ಅನುಕೂಲ.
ಸ್ಥಳೀಯ ಆರೋಗ್ಯ ವ್ಯವಸ್ಥೆಗಳಿಗೆ ಹಣಕಾಸಿನ ನಿರ್ವಹಣೆ ಕಡಿಮೆ ಮಾಡಲು ಕಡ್ಡಾಯ ವಿಮೆಯ ನೇರವಿಗೆ ಬರುತ್ತದೆ.
ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡುತ್ತದೆ.
ಯಾವೆಲ್ಲಾ ಅಂಶಗಳನ್ನು ಹೆಚ್ಚು ಗಮದಲಿಟ್ಟುಕೊಳ್ಳಬೇಕಾಗುತ್ತದೆ
ನೀವು ಬೇರೆ ದೇಶಕ್ಕೆ ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಪ್ರಯಾಣ ಪಾಲಿಸಿಯು ಸ್ಥಳೀಯ ನಿಯಮಗಳಿಗೆ ಹೊಂದಾಣಿಕೆಯಾಗುತ್ತದೆ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು.ಅಲ್ಲಿನ ಸ್ಥಳಕ್ಕೆ ಸಂಬಂಧಿಸಿದಂತೆ ಅಗತ್ಯ ಮೊತ್ತ, ಅವಧಿ ಮತ್ತು ವ್ಯಾಪ್ತಿಯನ್ನು ಕವರ್ ಮಾಡುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕು. ಹಲವಾರು ನಿಮಗೆ ಕಡ್ಡಾಯ ವಿಮೆಯನ್ನು ವಿಮಾ ಕಂಪನಿಗಳು ನೀಡುತ್ತಾವೆ ಅದರಲ್ಲಿ ಉತ್ತಮವಾದ ಅಯ್ಕೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿ ಇರುತ್ತದೆ. ಫೋನ್‌ಪೇ ಸೇರಿದಂತೆ ಇತರ ಕೆಲ ಪ್ಲಾಟ್‌ಫಾರ್ಮ್ ಕೂಡ ನಿಮಗೆ ಕಡ್ಡಾಯ ವಿಮೆಯನ್ನು ನೀಡುತ್ತದೆ ಮತ್ತು ಅತ್ಯಧಿಕ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡುತ್ತದೆ. ಆಯ್ಕೆ ಮಾಡುವಾಗ ವಿಶ್ವಾಸಾರ್ಹ ವಿಮಾ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಕಡ್ಡಾಯ ಅವಶ್ಯಕತೆಗಳನ್ನು ಹೊಂದಿರುವ ದೇಶಗಳಿಗೆ ಭೇಟಿ ನೀಡುವಾಗ ನಿಮ್ಮ ಪ್ರಯಾಣ ವಿಮೆಯನ್ನು ಮುಂಚಿತವಾಗಿಯೇ ಪಡೆದುಕೊಳ್ಳವುದು ನಿಮಗೆ ತುಂಬಾ ಪ್ರಯೋಜನವಾಗುತ್ತದೆ.
ಹೀಗೆ ನೀವು ಬೇರೆ ರಾಷ್ಟ್ರಕ್ಕೆ ಪ್ರಯಾಣ ಮಾಡುತ್ತಿದ್ದರೆ ಪ್ರಯಾಣ ಜೊತೆಗೆ ಈ ಮೇಲಿನ ಎಲ್ಲಾ ಅಂಶಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಇವುಗಳನ್ನು ಅಳವಡಿಸಿಕೊಂಡರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.


Click it and Unblock the Notifications