ಮಹೀಂದ್ರಾ ವಾಹನಗಳ ಬೆಲೆ ಏರಿಕೆ: ಥಾರ್ ಬೆಲೆ ಎಷ್ಟು ಏರಿಕೆ?

ನವದೆಹಲಿ, ಜನವರಿ 09: ನೀವು ಮಹೀಂದ್ರಾ ವಾಹನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇನ್ಮುಂದೆ ವಾಹನ ಖರೀದಿಗೆ ಸ್ವಲ್ಪ ಹೆಚ್ಚಿನ ಹಣವನ್ನೇ ಕೊಡಬೇಕಾಗುತ್ತದೆ. ಹೌದು, ದೇಶದ ಪ್ರಮುಖ ವಾಹನ ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಎಲ್ಲಾ ಖಾಸಗಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಶೇಕಡಾ 1.9 ರಷ್ಟು ಹೆಚ್ಚಿಸಿದೆ.

ಅಂದರೆ ಜನವರಿ 8 ಶುಕ್ರವಾರದಿಂದ ಕಂಪನಿಯು ತನ್ನ ಎಲ್ಲಾ ವಾಹನಗಳ ಬೆಲೆಯನ್ನು ಅವುಗಳ ಬೆಲೆಗೆ ಅನುಗುಣವಾಗಿ 4500 ರಿಂದ 40000 ರೂಗಳಿಗೆ ಹೆಚ್ಚಿಸಿದೆ.

ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಮುಂಬೈ ಮೂಲದ ಕಾರು ತಯಾರಕರು ಈ ಬೆಲೆ ಹೆಚ್ಚಳವನ್ನು ಬಹಿರಂಗಪಡಿಸಿದ್ದಾರೆ. ಹೊಸ ಥಾರ್‌ನ ಮಾಡೆಲ್‌ಗೂ ಬೆಲೆ ಏರಿಕೆಯಾಗಿದ್ದು , ಈಗಿನ ಬೆಲೆ ಹೆಚ್ಚಳವು ಡಿಸೆಂಬರ್ 1, 2020 ಮತ್ತು ಜನವರಿ 7, 2021 ರ ನಡುವೆ ಮಾಡಿದ ಎಲ್ಲಾ ಬುಕಿಂಗ್‌ಗಳಿಗೆ ಪರಿಣಾಮಕಾರಿಯಾಗಲಿದೆ ಎಂದು ಎಂ & ಎಂ ಹೇಳಿದೆ.

ಮಹೀಂದ್ರಾ ವಾಹನಗಳ ಬೆಲೆ ಏರಿಕೆ: ಥಾರ್ ಬೆಲೆ ಎಷ್ಟು ಏರಿಕೆ?

2021 ರ ಜನವರಿ 8 ರಿಂದ ಹೊಸ ಥಾರ್‌ನ ಎಲ್ಲಾ ಹೊಸ ಬುಕಿಂಗ್‌ಗಳನ್ನು ವಿತರಣೆಯ ಸಮಯದಲ್ಲಿ ಬೆಲೆ ಏರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಮಹೀಂದ್ರಾ ಬಿಡುಗಡೆ ಮಾಡಿದ ಹೊಸ ಥಾರ್ ಆಫ್ ರೋಡಿಂಗ್ ವಾಹನ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ಪಡೆಯುತ್ತಿದೆ. ಅದರ ಅತ್ಯುತ್ತಮ ಬುಕಿಂಗ್ ಕಾರಣ, ವಿತರಣೆಯ ಕಾಯುವ ಅವಧಿಯು ಸುಮಾರು 3 ತಿಂಗಳುಗಳಷ್ಟಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+