ಭಾರತ ಸರ್ಕಾರದ ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ (NFSA) ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಲು ನೀಡುವ ಅಧಿಕೃತ ದಾಖಲೆಯೇ ರೇಷನ್ ಕಾರ್ಡ್ (Ration Card). ಇನ್ನು ಕರ್ನಾಟಕದಲ್ಲಿ ಇದನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ವಹಣೆ ಮಾಡುತ್ತದೆ. ಇತ್ತೀಚೆಗೆಯಂತೂ ಈ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಸಂಬಂಧಿತ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಕೆಲವರ ಕಾರ್ಡ್‌ಗಳನ್ನು ರದ್ದೂ ಮಾಡಲಾಗಿದೆ. ಇದೀಗ ರೇಷನ್ ಕಾರ್ಡ್ ಹೊಂದಿಲ್ಲದವರಿಗೆ ಸಂತಸದ ಸುದ್ದಿಯೊಂದಿದೆ.

ಹೌದು, ಕಳೆದ ಸೆಪ್ಟೆಂಬರ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಫೆಬ್ರವರಿ ತಿಂಗಳಿಂದಲೇ ಹೊಸ ಪಡಿತರ ಚೀಟಿ ಅರ್ಜಿಗಳನ್ನು ರಾಜ್ಯ ಸರ್ಕಾರ ಸ್ವೀಕರಿಸಲಿದೆ ಎಂದು ತಿಳಿಸಿದ್ದರು. ಅದೇ ಕಾರಣದಿಂದ ಇದೀಗ ಹೊಸ ರೇಷನ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಮಹತ್ವದ ಮಾಹಿತಿ!
ಸಚಿವರು ಹೇಳಿದಂತೆ ಕೆಲವು ತಿಂಗಳಿಂದ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಅವಕಾಶ ನೀಡಲಾಗಿತ್ತು. ಆದ್ರೆ ಕೆಲವು ವರದಿಗಳ ಪ್ರಕಾರ, ಸಾಮಾನ್ಯ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೂ ಕೆಲವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂತಹವರು ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಬರೀ 15 ದಿನದಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಬಹುದು.
ಕಳೆದ ಕೆಲವು ವರ್ಷಗಳಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಹಿಂದಿನ ವರ್ಷದ 3 ಲಕ್ಷಕ್ಕೂ ಅಧಿಕ ಹೊಸ ಅರ್ಜಿಗಳು ಪ್ರಕ್ರಿಯೆಯಲ್ಲಿದೆ ಮತ್ತು ಅಪ್ರೂವಲ್ ಪ್ರಾರಂಭವಾಗಿದೆ. ಈ ತಿಂಗಳಿಂದಲೇ ಅದನ್ನು ವಿತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಬಗ್ಗೆ ಸಚಿವರು ಕೂಡಾ, ಮೊದಲೇ ಸೂಚನೆ ನೀಡಿದ್ದರು.
ಇದೀಗ ಅಧಿಕೃತ ಆಗಾರ ಪೋರ್ಟಲ್ ಪ್ರಕಾರ, ಸಾಮಾನ್ಯ ಹೊಸ ರೇಷನ್ ಕಾರ್ಡ್ ಅರ್ಜಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸದ್ಯ ವಿಶೇಷ ವರ್ಗಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
E-Shram ಕಾರ್ಮಿಕರು: ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು ಹೀಗೆ ಮುಂತಾದವರು ಇ-ಶ್ರಮ್ ಕಾರ್ಡ್ ಹೊಂದಿದ್ದರೆ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಪಿವಿಟಿಜಿ (PVTG) ಸಮುದಾಯದವರು: ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಮತ್ತು ವಿಶೇಷ ಬುಡಕಟ್ಟು ಸಮುದಾಯಗಳಾದ ಪಿವಿಟಿಜಿ (Particulary Vulnerable Tribla Groups) ಕುಟುಂಬಗಳು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿ ಇರುವವರು:
ಕುಟುಂಬದ ಸದಸ್ಯರ ಆರೋಗ್ಯದಲ್ಲಿ ತೊಂದರೆಯಾದಾಗ, ಅಪಘಾತವಾದಾಗ, ಶಸ್ತ್ರಚಿಕಿತ್ಸೆ ವೇಳೆ ರೇಷನ್ ಕಾರ್ಡ್ ಅಗತ್ಯವಿದ್ದರೆ, ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಈ ವೇಳೆ ಅರ್ಜಿದಾರರು ಆಸ್ಪತ್ರೆಯ ದಾಖಲೆಗಳು, ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯವಾಗಿ ಸಲ್ಲಿಸಲೇಬೇಕು.
ಹೊಸದಾಗಿ ಮದುವೆಯಾದವರು:
ಬಹುತೇಕರು ಹೊಸದಾಗಿ ಮದುವೆಯಾದಾಗ, ರೇಷನ್ ಕಾರ್ಡ್ ಕೂಡಾ ಪ್ರತ್ಯೇಕವಾಗಿ ಹೊಂದುತ್ತಾರೆ. ಅಂತಹವರು ಕೂಡಾ ವಿಶೇಷ ವರ್ಗದಡಿ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆ ಕೊನೆಯ ದಿನಾಂಕ:
- ಇನ್ನು ಅರ್ಜಿ ಸಲ್ಲಿಸಲು ಅಕ್ಟೋಬರ್ 2025 ರಿಂದ ಮಾರ್ಚ್ 31, 2026 ರವರೆಗೆ ಸಮಯ ನಿಗದಿ ಪಡಿಸಲಾಗಿದೆ.
- ಇನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ "New Ration Card" ಸೆಲೆಕ್ಟ್ ಮಾಡಬೇಕು. ನಂತರ ಆಧಾರ್ ಕಾರ್ಡ್ ನಮೂದಿಸಿ, ಬಯೋಮೆಟ್ರಿಕ್ ಆಡ್ ಮಾಡಿ, ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.


Click it and Unblock the Notifications