New Rule 2025: ಜನರ ಜೇಬಿಗೆ ಕತ್ತರಿ! LPGಯಿಂದ PFಗೆ ದೊಡ್ಡ ಬದಲಾವಣೆ.. ಜನವರಿ 1ರಿಂದ ಜಾರಿ

2024ನೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲು ಇನ್ನೂ ಕೆಲವು ಕ್ಷಣಗಳು ಮಾತ್ರ ಬಾಕಿ ಇದೆ. ಅದರೆ ಹೊಸ ವರ್ಷದ ಜನವರಿ 1ರಿಂದ ದೇಶಾದ್ಯಂತ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.ಹೊಸ ವರ್ಷಕ್ಕೆ ಹೊಸ ನಿಯಮಗಳು ಜಾರಿಗೆ ಬರುತ್ತಾವೆ ಹಾಗಿದ್ರೆ ಜನವರಿ 1 ಏನೆಲ್ಲಾ ಬದಲಾವಣೆಗಳು ಬರಲಿವೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ...

ಹೌದು, ಹೊಸವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.ಈಗಲೇ 2025ರ ವರ್ಷವನ್ನು ಸ್ವಾಗತಿಸಲು ಈಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಹೊಸ ವರ್ಷದಂದು ದೇಶದಲ್ಲಿ LPG ಬೆಲೆಗಳಿಂದ EPFO ​​ವರೆಗಿನ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಜನವರಿ 1 ರಿಂದ ಈ ಬಾರಿ ಏನು ಬದಲಾಗಲಿದೆ ಎಂಬುವುದನ್ನು ತಿಳಿಯೋಣ ಬನ್ನಿ...

New Rule 2025: LPGಯಿಂದ PFಗೆ ದೊಡ್ಡ ಬದಲಾವಣೆ.. ಜ.1ರಿಂದ ಜಾರಿ

ಎಲ್‌ಪಿಜಿ ದರದಲ್ಲಿ ಬದಲಾವಣೆ

ಸರ್ಕಾರ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ದರವನ್ನು ಬದಲಾಯಿಸುತ್ತದೆ.ಕಳೆದ ಕೆಲವು ದಿನಗಳಲ್ಲಿ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ 14 ಕೆಜಿಯ ಅಡುಗೆ ಮನೆಯ ಸಿಲಿಂಡರ್‌ನ ಬೆಲೆ ದೇಶದಲ್ಲಿ ದೀರ್ಘಕಾಲದಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯೂ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯನ್ನು ನೀರಿಕ್ಷಸಲಾಗಿದೆ.

ಪಿಎಫ್ ಖಾತೆಯಲ್ಲೂ ಬದಲಾವಣೆ

ಪಿಎಫ್ ಖಾತೆದಾರರು 2025ರ ಆರಂಭದಲ್ಲಿ ವಿಶೇಷ ಗಿಫ್ಟ್ ನೀಡಲಾಗಿದೆ. ನೀವು ಇದರ ಮೂಲಕ ಎಟಿಎಂ ಯಂತ್ರದಿಂದ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಕಾರ್ಮಿಕ ಸಚಿವಾಲಯ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಇತ್ತೀಚೆಗೆ, ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪಿಎಫ್ ಹಿಂಪಡೆಯುವಿಕೆಯನ್ನು ಸುಗಮಗೊಳಿಸಲು ಮತ್ತು ಸೇವೆಯನ್ನು ಸುಧಾರಿಸಲು ತನ್ನ ಐಟಿ ವ್ಯವಸ್ಥೆಯನ್ನು ನವೀಕರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಬದಲಾವಣೆ

ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೀಚರ್ ಫೋನ್ ಬಳಕೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈಗ UPI 123Pay ಬಳಸಿಕೊಂಡು ರೂ 10,000 ವರೆಗಿನ UPI ಪಾವತಿಯನ್ನು ಮಾಡಬಹುದು.ಈ ಸೌಲಭ್ಯವು ಜನವರಿ 1, 2025 ರಿಂದ ಪ್ರಾರಂಭವಾಗಲಿದೆ. ಮೊದಲು ಈ ಮಿತಿಯು ಐದು ಸಾವಿರಗಳವರೆಗೆ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ ರೈತರಿಗೆ ದೊಡ್ಡ ರಿಲೀಫ್ ಸುದ್ದಿ ನೀಡಿದೆ. ಆರ್‌ಬಿಐ ರೈತರಿಗೆ ಖಾತರಿಯಿಲ್ಲದೆ ಲಭ್ಯವಿರುವ ಸಾಲದ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸಿದೆ. ಹೊಸ ನಿಯಮಗಳು ಜನವರಿ 1, 2025 ರಿಂದ ಜಾರಿಗೆ ಬರಲಿದೆ. ಮೊದಲು ಈ ಮಿತಿ 1.60 ಲಕ್ಷ ರೂ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ತನ್ನ ಒಪ್ಪಂದಗಳ ಮುಕ್ತಾಯದ ದಿನದಲ್ಲಿ ಬದಲಾವಣೆಯನ್ನು ಪ್ರಕಟಿಸಿದೆ.

ಜನವರಿ 1, 2025 ರಿಂದ ಜಾರಿಗೆ ಬರಲಿದೆ.

ನವೆಂಬರ್ 29 ರಂದು NSE ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಿದೆ. ಈಗ FinNifty, MidCPNifty ಮತ್ತು NiftyNext50 ನ ಮಾಸಿಕ ಒಪ್ಪಂದಗಳು ಆಯಾ ತಿಂಗಳ ಕೊನೆಯ ಗುರುವಾರದಂದು ಮುಕ್ತಾಯಗೊಳ್ಳುತ್ತವೆ. ಬ್ಯಾಂಕ್‌ ನಿಫ್ಟಿಯ ಮಾಸಿಕ ಮತ್ತು ತ್ರೈಮಾಸಿಕ ಒಪ್ಪಂದಗಳು ಮುಕ್ತಾಯಗೊಳ್ಳುವ ತಿಂಗಳ ಕೊನೆಯ ಗುರುವಾರದಂದು ಮುಕ್ತಾಯಗೊಳ್ಳುತ್ತವೆ.

ಟೆಲಿಕಾಂ ಹೊಸ ನಿಯಮಗಳು

ದೂರಸಂಪರ್ಕ ಇಲಾಖೆ (ರೈಟ್ ಆಫ್ ವೇ) ನಿಯಮಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಭೂಗತ ಸಂವಹನ ಮೂಲಸೌಕರ್ಯಗಳ ಸ್ಥಾಪನೆ ಮತ್ತು ನಿರ್ವಹಣೆ ಇನ್ಮುಂದೆ ಸುಲಭವಾಗಲಿದೆ. ಹೀಗಾಗಿ ಜಿಯೋ, ಏರ್‌ಟೆಲ್, ವೊಡಾಫೋನ್, ಬಿಎಸ್‌ಎನ್‌ಎಲ್‌ನಂತಹ ಟೆಲಿಕಾಂ ಕಂಪನಿಗಳ ಸೇವೆಗಳಲ್ಲಿ ಭಾರಿ ಸುಧಾರಣೆ ಕಾಣುವ ಸಾಧ್ಯತೆಗಳಿವೆ.

ಜನವರಿ 1ರಂದು ಈ ಫೋನ್‌ಗಳಲ್ಲಿ ವಾಟ್ಸ್ ಆಪ್ ನಿಷೇಧ:

ಕಾರುಗಳ ಬೆಲೆಗಳಲ್ಲಿ ಹೆಚ್ಚಳ

ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಹ್ಯುಂಡೈ, ಮಹೀಂದ್ರಾ, ಹೋಂಡಾ, ಕಿಯಾ ಇತ್ಯಾದಿ ಕಂಪನಿಗಳ ಕಾರುಗಳ ಬೆಲೆ ಶೇ.2-4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಾರುಗಳ ಬೆಲೆಗಳಲ್ಲಿ ಹೆಚ್ಚಳ: ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಹ್ಯುಂಡೈ, ಮಹೀಂದ್ರಾ, ಹೋಂಡಾ, ಕಿಯಾ ಇತ್ಯಾದಿ ಕಂಪನಿಗಳ ಕಾರುಗಳ ಬೆಲೆ ಶೇ.2-4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಳೆಯ ಹಲವು Android ಫೋನ್‌ಗಳಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ. Samsung Galaxy S3, Galaxy S3, Galaxy S4 Mini, HTC One X, One X Plus, Sony Xperia Z, Xperia T, LG Optimus G, Nexus 4, Moto G, Moto E 2014 ನಲ್ಲಿ ವಾಟ್ಸ್ ಆಪ್ ಕಾರ್ಯನಿರ್ವಹಿಸುವುದಿಲ್ಲ.

ಹೀಗೆ ದೇಶದಲ್ಲಿ ಇನ್ನೂ ಹಲವಾರು ಬದಲಾವಣೆಗಳು ಜನವರಿ ಒಂದನೇ ತಾರೀಖಿನಿಂದ ಬದಲಾವಣೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+