ಇಪಿಎಫ್ ಚಂದಾದಾರ ಸಿಬ್ಬಂದಿಗೆ 7 ಲಕ್ಷದ ತನಕ ಇನ್ಷೂರೆನ್ಸ್; EPFO ಘೋಷಣೆ

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO)ನಿಂದ ಕೋಟ್ಯಂತರ ಉದ್ಯೋಗಿಗಳಿಗೆ ಅನುಕೂಲ ಆಗುವಂಥ ಘೋಷಣೆಯನ್ನು ಬುಧವಾರ ಮಾಡಲಾಗಿದೆ. ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ (EDLI) ಯೋಜನೆ ಅಡಿಯಲ್ಲಿ ಈಗಿರುವ 6 ಲಕ್ಷ ರುಪಾಯಿ ಇದ್ದ ಗರಿಷ್ಠ ಮೊತ್ತವನ್ನು 7 ಲಕ್ಷ ರುಪಾಯಿಗೆ ಹೆಚ್ಚಿಸಲಾಗಿದೆ.

ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಹೇಳಿಕೆ ನೀಡಿದ್ದು, ಇಪಿಎಫ್ ಯೋಜನೆಯ ಚಂದಾದಾರರು ಎಲ್ಲರಿಗೂ EDLI ಯೋಜನೆಯಲ್ಲಿ ಇನ್ಷೂರೆನ್ಸ್ ಕವರ್ ಕಡ್ಡಾಯ. ಇಪಿಎಫ್ ಚಂದಾದಾರರು ಸಹಜ ಕಾರಣಗಳಿಂದಾಗಿ, ಅನಾರೋಗ್ಯದಿಂದ ಅಥವಾ ಅಪಘಾತದಲ್ಲಿ ಮೃತಪಟ್ಟಲ್ಲಿ ನಾಮಿನಿ ಆದವರಿಗೆ ಒಟ್ಟಿಗೆ 7 ಲಕ್ಷ ರುಪಾಯಿ ತನಕ ಮೊತ್ತವನ್ನು ಒಂದೇ ಸಲಕ್ಕೆ ಪಾವತಿಸಲಾಗುತ್ತದೆ.

ಇಪಿಎಫ್ ಹಾಗೂ ಮಿಸಲೇನಿಯಸ್ ಪ್ರಾವಿಷನ್ ಕಾಯ್ದೆ, 1952ರ ಅಡಿಯಲ್ಲಿ ಬರುವ ಎಲ್ಲ ಸಂಸ್ಥೆಗಳೂ ಇಡಿಎಲ್ ಐ ಕೆಳಗೆ ಬರುತ್ತವೆ. ಮೃತಪಡುವ ಮುನ್ನ ಹನ್ನೆರಡು ತಿಂಗಳ ಕಾಲ ಪಡೆದ ಸಂಬಳದ ಆಧಾರದಲ್ಲಿ ಇನ್ಷೂರೆನ್ಸ್ ಕವರ್ ಮೊತ್ತ ನಿರ್ಧಾರ ಆಗುತ್ತದೆ. ಇಡಿಎಲ್ ಐ ಯೋಜನೆಗೆ ಉದ್ಯೋಗದಾತರು ಹಾಗೂ ಕೇಂದ್ರ ಸರ್ಕಾರದಿಂದ ಕೊಡುಗೆ ನೀಡಲಾಗುತ್ತದೆ.

EPF ಚಂದಾದಾರ ಸಿಬ್ಬಂದಿಗೆ 7 ಲಕ್ಷದ ತನಕ ಇನ್ಷೂರೆನ್ಸ್; EPFO ಘೋಷಣೆ

ಇದಕ್ಕೆ ಉದ್ಯೋಗಿಗಳು ಯಾವುದೇ ಕೊಡುಗೆ ನೀಡುವ ಅಗತ್ಯ ಇಲ್ಲ. ಈ ಸ್ಕೀಮ್ ಅಡಿಯಲ್ಲಿ ಕಳೆದ ಹನ್ನೆರಡು ತಿಂಗಳಲ್ಲಿ ಪಡೆದ ಸರಾಸರಿ ವೇತನವನ್ನು ಲೆಕ್ಕ ಹಾಕಿ, ಅದರ ಮೂವತ್ತು ಪಟ್ಟು ಅಥವಾ ಗರಿಷ್ಠ 7 ಲಕ್ಷ ರುಪಾಯಿ ದೊರೆಯುತ್ತದೆ. ಇಪಿಎಫ್ ಚಂದಾದಾರರು ಒಂದಕ್ಕಿಂತ ಹೆಚ್ಚು ಸಂಸ್ಥೆಯಲ್ಲಿ ಸಾಯುವ ಮುನ್ನ ಕೆಲಸ ಮಾಡಿದ್ದಲ್ಲಿ ಆಗ ಕೂಡ ಹಿಂದಿನ ಸಂಸ್ಥೆಯದೂ ಸೇರಿ ಹನ್ನೆರಡು ತಿಂಗಳ ಸರಾಸರಿ ವೇತನವನ್ನು ಗಣನೆಗೆ ತೆಗೆದುಕೊಳ್ಳಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+