ತಿಂಗಳ ಮೊದಲ ದಿನ ಆರಂಭವಾಗುತ್ತಿದಂತೆ ಹಲವಾರು ಬದಲಾವಣೆಗಳು ಆಗುತ್ತಿವೆ. ಮುಂದಿನ ತಿಂಗಳು ಅಂದರೆ ಜುಲೈ 1 ರಿಂದ ಭಾರತದಾದ್ಯಂತ ಹಲವು ಪ್ರಮುಖ ನಿಯಮ ಬದಲಾವಣೆಗಳು ಜಾರಿಗೆ ಬರಲಿದೆ. ಈ ಹೊಸ ಬದಲಾವಣೆಗಳು ನೇರವಾಗಿ ಸಾರ್ವಜನಿಕರ ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ.ಇತ್ತೀಚೆಗೆ ಘೋಷಿಸಲಾದ ರೈಲು ಟಿಕೆಟ್ ಬೆಲೆ ಏರಿಕೆಯಿಂದ ಹಿಡಿದು ಎಟಿಎಂ ಹಿಂಪಡೆಯುವಿಕೆ ಶುಲ್ಕಗಳವರೆಗೆ ಬದಲಾಗುತ್ತಿದೆ. ಬೆಲೆ ಏರಿಕೆಯ ಬಿಸಿ ಜನರನ್ನು ಸುಡುತ್ತಲೇ ಇದೆ. ಸಾಮಾನ್ಯ ಜನರು ಏನೆಲ್ಲಾ ಆರ್ಥಿಕ ಹೊರೆಯನ್ನು ಅನುಭವಿಸಬೇಕಾಗುತ್ತದೆ ಎಂಬುವುದನ್ನು ಈ ಲೇಖನದಲ್ಲಿ ನೀವಿಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವರ್ಷದ ಮೊದಲ ದಿನದಿಂದ ಬೆಲೆ ಏರಿಕೆ ಕಾವು ಸಾಮಾನ್ಯ ಜನರನ್ನು ತಟ್ಟುತ್ತಲೇ ಇದೆ..ಕೇಂದ್ರ,ರಾಜ್ಯ ಸರ್ಕಾರಗಳು ಎರಡು ಸೇರಿ ಪದೇ ಪದೇ ಬೆಲೆ ಏರಿಕೆಯನ್ನು ಮಾಡಿ ಜನರ ಜೇಬಿಗೆ ಕತ್ತರಿಯಾಗುತ್ತದೆ. ಮೆಟ್ರೋದಿಂದ ಇಡೀದು ಕುಡಿಯುವ ನೀರು, ಹಾಲಿನ ಮೇಲೂ ಕೂಡ ದರ ಏರಿಕೆಯನ್ನು ಈಗಾಗಲೇ ಮಾಡಿದ್ದು, ಇದು ಸಾಲದು ಅಂತ ರೈಲ್ವೆ ಟಿಕೆಟ್ ದರಗಳನ್ನು ಕೂಡ ಏರಿಕೆ ಮಾಡಿದೆ. ಇನ್ನೂ ಏನೆಲ್ಲಾ ಬದಲಾವಣೆಗಳನ್ನು ಸರ್ಕಾರ ಜುಲೈ 1 ರಿಂದ ತರಬಹುದು ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ..

1. ರೈಲ್ವೆ ಟಿಕೆಟ್ ದರ ಏರಿಕೆ
ಭಾರತೀಯ ರೈಲ್ವೆ ಸಚಿವವಾಲಯ ಇತ್ತೀಚೆಗೆ ಜುಲೈ 1 ರಿಂದ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ದರ ಏರಿಕೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಜುಲೈ 1 ರಿಂದ ರೈಲ್ವೆ ಟಿಕೆಟ್ ಕೂಡ ಸ್ವಲ್ಪ ಮಟ್ಟದಲ್ಲಿ ಏರಿಕೆಯಾಗುತ್ತದೆ.ಈ ಹೆಚ್ಚಳವು ಸ್ವಲ್ಪವೆನಿಸಿದರೂ ದೂರದ ಪ್ರಯಾಣಕ್ಕೆ ಮಾಡುವವರಿಗೆ ದುಬಾರಿಯಾಗುತ್ತದೆ. ರೈಲುನಲ್ಲಿ ಸ್ಲೀಪರ್ ಕೋಚ್ ದರಗಳು ಪ್ರತಿ ಕಿ.ಮೀ.ಗೆ 0.01 ರೂ. ಮತ್ತು ಎಸಿ ಕೋಚ್‌ಗಳಲ್ಲಿ ದರಗಳು ಪ್ರತಿ ಕಿ.ಮೀ.ಗೆ 0.02 ರೂ. ಹೆಚ್ಚಾಗುತ್ತವೆ. ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್‌ಗೆ ಸುಮಾರು 600 ಕಿ.ಮೀ. ಪ್ರಯಾಣಿಸುವಾಗ ಸ್ಲೀಪರ್‌ನಲ್ಲಿ 6 ರೂ. ಮತ್ತು ಎಸಿಯಲ್ಲಿ 12 ರೂ. ಹೆಚ್ಚು ವೆಚ್ಚ ನಿಮ್ಮಗೆ ತಗುಲುತ್ತದೆ.
2. ಪ್ಯಾನ್ ಕಾರ್ಡ್ ಅರ್ಜಿಗೆ ಈಗ ಆಧಾರ್ ಕಾರ್ಡ್ ಕಡ್ಡಾಯ
ಜುಲೈ 1 ರಿಂದ ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಪ್ಯಾನ್ ಕಾರ್ಡ್ ಹೊಂದಿರುವವರು ಡಿಸೆಂಬರ್ 31, 2025 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ತೆರಿಗೆ ವಂಚನೆಗಾಗಿ ಬಳಸುವ ನಕಲಿ ಪ್ಯಾನ್‌ಗಳನ್ನು ತೆಗೆದುಹಾಕಲು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ನಿಮ್ಮ ಪ್ಯಾನ್ ಇನ್ನೂ ಲಿಂಕ್ ಆಗಿಲ್ಲದಿದ್ದರೆ, ಆದಾಯ ತೆರಿಗೆ ಸಲ್ಲಿಕೆಯಲ್ಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
3. ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ
ತೈಲ ಕಂಪನಿಗಳು ಪ್ರತಿ ತಿಂಗಳು ಮೊದಲ ದಿನದಂದು ತೈಲಗಳ ಬೆಲೆಗಳನ್ನ ಪರಿಷ್ಕರಿಸಲಾಗುತ್ತದೆ. ಪ್ರತಿ ತಿಂಗಳಂತೆ, ತೈಲ ಕಂಪನಿಗಳು ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ನವೀಕರಿಸುತ್ತವೆ. ದೇಶೀಯ ಮತ್ತು ವಾಣಿಜ್ಯ ಸಿಲಿಂಡರ್‌ಗಳೆರಡೂ ಹೊಸ ಬೆಲೆ ಟ್ಯಾಗ್‌ಗಳನ್ನು ನೋಡಬಹುದು ಅಥವಾ ನೋಡದೇ ಇರಬಹುದು. ಕಳೆದ ಮೂರು ತಿಂಗಳುಗಳಲ್ಲಿ, ವಾಣಿಜ್ಯ ವಿಭಾಗಗಳಲ್ಲಿ ಎಲ್‌ಪಿಜಿ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದ್ದು, ಜೂನ್‌ನಲ್ಲಿ 24 ರೂ, ಮೇನಲ್ಲಿ 17 ರೂ ಮತ್ತು ಏಪ್ರಿಲ್‌ನಲ್ಲಿ 44 ರೂ.ಗಳಷ್ಟು ಬೆಲೆಗಳು ಇಳಿಕೆ ಆಗಿವೆ.ಜುಲೈ ಎಲ್‌ಪಿಜಿ ಸಿಲಿಂಡರ್ ದರ ಎಷ್ಟು ಇಳಿಕೆಯಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.
4. ICICI ಬ್ಯಾಂಕಿನಿಂದ ATM ಮೂಲಕ ಹಣ ಹಿಂಪಡೆಯುವ ಪ್ರಕ್ರಿಯೆ ದುಬಾರಿ
ಐಸಿಐಸಿಐ ಬ್ಯಾಂಕ್ ಬಳಕೆದಾದರು ಉಚಿತ ವಹಿವಾಟು ಮಿತಿಯನ್ನು ಮೀರಿ ನಗದು ಹಿಂಪಡೆದ್ದರೆ ಜುಲೈ 1 ರಿಂದ ಪ್ರತಿ ವಹಿವಾಟಿಗೆ 23 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉಚಿತ ಹಿಂಪಡೆಯುವಿಕೆಗಳ ಸಂಖ್ಯೆಯು ಸ್ಥಳವನ್ನು ಅವಲಂಬಿಸಿರುತ್ತದೆ, ಏಕೆಂದರೆ ಮೆಟ್ರೋ ನಗರಗಳಲ್ಲಿರುವ ಜನರು ತಿಂಗಳಿಗೆ ಮೂರು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯುತ್ತಾರೆ ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿರುವ ಜನರು ತಿಂಗಳಿಗೆ ಐದು ಉಚಿತ ವಹಿವಾಟುಗಳಿಗೆ ಮಾತ್ರ ಅವಕಾಶವಿರುತ್ತದೆ.
5. HDFC ಕ್ರೆಡಿಟ್ ಕಾರ್ಡ್ ಪಾವತಿಗೆ ಹೆಚ್ಚಿನ ವೆಚ್ಚ
ಎಚ್ ಡಿ ಎಫ್ ಸಿ ಬ್ಯಾಂಕ್ ಬಳಕೆದಾದರು ಜುಲೈ 1 ರಿಂದ, ಪೇಟಿಎಂ, ಪೋನ್ ಪೇ, ಗೂಗಲ್ ಪೇ ಮುಂತಾದ ಮೂರನೇ ವ್ಯಕ್ತಿಯ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚುವರಿ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ. ನೀವು ಇಂತಹ ಪಾವತಿಗಳನ್ನು ಮಾಡಿದ್ದರೆ ಶೇ 1 ರಷ್ಟು ಶುಲ್ಕವನ್ನು ಕಟ್ಟಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಯುಟಿಲಿಟಿ ಬಿಲ್ ಪಾವತಿಗಳಿಗೆ ಹೆಚ್ಚುವರಿ ಶುಲ್ಕಗಳುನ್ನು ವಿಧಿಸಲಾಗುತ್ತದೆ.
6. ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ನಿಯಮದಲ್ಲಿ ಬದಲಾವಣೆ
ರೈಲ್ವೆ ಸಚಿವಾಲಯವು ತತ್ಕಾಲ್ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಲು ಹೊಸ ನಿಯಮವನ್ನು ಅಧಿಕೃತವಾಗಿ ಪ್ರಕಟಿಸಿದೆ.ಈ ನಿಯಮಗಳು ಜುಲೈ 1ರಿಂದಲ್ಲೇ ಜಾರಿಗೆ ಬರುತ್ತೇವೆ.ಈ ನಿಯದ ಪ್ರಕಾರ IRCTC ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಲಿಂಕ್ ಇಲ್ಲದಿದ್ದರೆ ತತ್ಕಾಲ್ ಟಿಕೆಟ್ ಸಿಗಲ್ಲ. ಆಧಾರ್ ಲಿಂಕ್ ಮಾಡಿದ ಪ್ರಯಾಣಿಕರಿ ಮಾತ್ರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಸೀಟುಗಳನ್ನು ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ.
ಒಟ್ಟಾರೆಯಾಗಿ ನಾವು ಜುಲೈ ತಿಂಗಳಲ್ಲಿ ಮೇಲಿನ ಎಲ್ಲಾ ಬದಲಾವಣೆಗಳನ್ನು ಕಾಣಬಹುದು ಅದಕ್ಕಾ ಸಾರ್ವಜನಿಕರು ಈಗಲೇ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಸಿದ್ದರಾಗಿ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್‌ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications