ಬೆಂಗಳೂರು, ಸೆಪ್ಟೆಂಬರ್ 23: ಅಕ್ಟೋಬರ್ 10 ರಿಂದ ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಸಂಪರ್ಕಿಸುವ ಎರಡು ಹೊಸ ನೇರ ವಿಮಾನ ಮಾರ್ಗಗಳನ್ನು ಸ್ಪೈಸ್‌ಜೆಟ್ ಪರಿಚಯಿಸಲಿದೆ. ಬುಕ್ಕಿಂಗ್ ಈಗಾಗಲೇ ತೆರೆಯಲಾಗಿದೆ.
ವಿಮಾನಯಾನ ಸಂಸ್ಥೆಯು ಚೆನ್ನೈನಿಂದ ಪ್ರತಿದಿನ ವಿಮಾನವನ್ನು ನಿರ್ವಹಿಸಲಿದ್ದು, ಬೆಳಿಗ್ಗೆ 10.40 ಕ್ಕೆ ಹೊರಟು ಮಧ್ಯಾಹ್ನ 12.10 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಶಿವಮೊಗ್ಗದಿಂದ ಹೈದರಾಬಾದ್ಗೆ ತೆರಳುವ ವಿಮಾನಗಳು ಮಧ್ಯಾಹ್ನ 12.35 ಕ್ಕೆ ಹೊರಡಲಿದ್ದು, 2.05 ಕ್ಕೆ ಹೈದರಾಬಾದ್ ತಲುಪಲಿದೆ.

ಹೈದರಾಬಾದ್‌ನಿಂದ ಹಿಂತಿರುಗುವ ವಿಮಾನ ಮಧ್ಯಾಹ್ನ 2.40 ಕ್ಕೆ ಹೊರಡಲಿದ್ದು, ಸಂಜೆ 4.10 ಕ್ಕೆ ಶಿವಮೊಗ್ಗ ತಲುಪಲಿದೆ. ಚೆನ್ನೈಗೆ ತೆರಳುವ ವಿಮಾನ ಶಿವಮೊಗ್ಗದಿಂದ ಸಂಜೆ 4.25ಕ್ಕೆ ಹೊರಟು 5.55ಕ್ಕೆ ಆಗಮಿಸಲಿದೆ. ಈ ಹೊಸ ಮಾರ್ಗಗಳು ಶಿವಮೊಗ್ಗದ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನವನ್ನು ನೀಡುತ್ತದೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರದೇಶಕ್ಕೆ ತನ್ನ ಸೇವೆಗಳನ್ನು ವಿಸ್ತರಿಸಿದ್ದಕ್ಕಾಗಿ ಅವರು ಸ್ಪೈಸ್‌ಜೆಟ್‌ಗೆ ಕೃತಜ್ಞತೆ ಸಲ್ಲಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂಸದ ಬಿವೈ ರಾಘವೇಂದ್ರ ಅವರು, ಸ್ಪೈಸ್ ಜೆಟ್ ಶಿವಮೊಗ್ಗದಿಂದ ಎರಡು ಹೊಸ ವಿಮಾನ ಮಾರ್ಗಗಳನ್ನು ಸೇರಿಸಲಿದೆ. ಇದು ಅಕ್ಟೋಬರ್ 10, 2024 ರಿಂದ ಪ್ರಾರಂಭವಾಗುತ್ತದೆ. ಚೆನ್ನೈ ಮತ್ತು ಹೈದರಾಬಾದ್‌ಗೆ ನೇರ ವಿಮಾನಯಾನ ನಡೆಸಲಿದೆ ಎಂದು ತಿಳಿಸಿದ್ದಾರೆ.
ಚೆನ್ನೈನಿಂದ ವಿಮಾನವು ಬೆಳಿಗ್ಗೆ 10:40 ಕ್ಕೆ ಹೊರಟು ಮಧ್ಯಾಹ್ನ 12:10 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಶಿವಮೊಗ್ಗದಿಂದ ವಿಮಾನವು ಮಧ್ಯಾಹ್ನ 12:35 ಕ್ಕೆ ಹೊರಟು 2:05 ಕ್ಕೆ ಹೈದರಾಬಾದ್ ತಲುಪಲಿದೆ.
ಹೈದರಾಬಾದ್‌ನಿಂದ ವಿಮಾನವು ಮಧ್ಯಾಹ್ನ 2:40 ಕ್ಕೆ ಹೊರಟು ಸಂಜೆ 4:10 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ. ಶಿವಮೊಗ್ಗದಿಂದ ವಿಮಾನವು ಸಂಜೆ 4:25 ಕ್ಕೆ ಹೊರಟು 5:55 ಕ್ಕೆ ಚೆನ್ನೈ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಈ ಹೊಸ ಮಾರ್ಗಗಳು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಶಿವಮೊಗ್ಗದಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ.
ಇದನ್ನು ಸಾಧ್ಯವಾಗಿಸಿದ ಮತ್ತು ನಮ್ಮ ಪ್ರದೇಶದ ಬೆಳವಣಿಗೆಗೆ ಬೆಂಬಲ ನೀಡಿದ ಸ್ಪೈಟ್‌ಜೆಟ್‌ಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.


Click it and Unblock the Notifications