ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) UPI ವಹಿವಾಟುಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಫೆಬ್ರವರಿ 15 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹಾಗಿದ್ರೆ UPI ವಹಿವಾಟುಗಳಲ್ಲಿ ಏನೆಲ್ಲಾ ನಿಯಮಗಳು ಬದಲಾವಣೆಗಳು ಆಗುತ್ತವೆ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಹೌದು,ಈ ಬದಲಾವಣೆಗಳು ಮುಖ್ಯವಾಗಿ ಚಾರ್ಜ್‌ಬ್ಯಾಕ್‌ಗಳ ಪ್ರಕ್ರಿಯೆ ಮತ್ತು ತಿರಸ್ಕಾರ ವ್ಯವಸ್ಥೆಯನ್ನು ಒಳಗೊಂಡಿದೆ.

ಏನೆಲ್ಲಾ ನಿಯಮಗಳು ಬದಲಾಗುತ್ತದೆ?
NPCI UPI ವ್ಯವಹಾರಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. TCC ಮತ್ತು Returns ಆಧರಿಸಿ ಸ್ವಯಂಚಾಲಿತ ಚಾರ್ಜ್‌ಬ್ಯಾಕ್ ಅನುಮೋದನೆ ತಿರಸ್ಕಾರಕ್ಕಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
ಚಾರ್ಜ್‌ಬ್ಯಾಕ್ ಎಂದರೆ ಏನು?
UPI ವ್ಯವಹಾರಗಳಲ್ಲಿ ಚಾರ್ಜ್‌ಬ್ಯಾಕ್ ಒಂದು ಮುಖ್ಯ ಪ್ರಕ್ರಿಯೆ. ಟ್ರಾನ್ಸಾಕ್ಷನ್‌ನಲ್ಲಿ ಏನಾದರೂ ಸಮಸ್ಯೆ ಬಂದರೆ ಕಳೆದುಹೋದ ಹಣವನ್ನು ಮರಳಿ ಪಡೆಯುವುದೇ ಚಾರ್ಜ್‌ಬ್ಯಾಕ್. ಹಣ ಕಳುಹಿಸಿದ ಬ್ಯಾಂಕ್ ಇದನ್ನು ಮಾಡುತ್ತದೆ. ಆದರೆ ಸ್ವೀಕರಿಸುವ ಬ್ಯಾಂಕ್‌ಗೆ ಮೊದಲು ಪರಿಶೀಲಿಸಲು ಅವಕಾಶ ಇರುವುದಿಲ್ಲ. ಈಗಿನ ನಿಯಮದಲ್ಲಿ, ಕಳುಹಿಸುವ ಬ್ಯಾಂಕ್ URCS ಮೂಲಕ ಚಾರ್ಜ್‌ಬ್ಯಾಕ್ ಅನ್ನು ಪ್ರಾರಂಭಿಸಬಹುದು.
ಚಾರ್ಜ್‌ಬ್ಯಾಕ್‌ಗಳು ಯಾವಾಗ ಅವಶ್ಯಕತೆ ಇರುತ್ತದೆ?
- ಗ್ರಾಹಕರು ಪಾವತಿಯನ್ನು ಗುರುತಿಸುವುದಿಲ್ಲ.
- ಗ್ರಾಹಕರು ಸಂಬಂಧಪಟ್ಟ ವಹಿವಾಟಿನ ಕುರಿತು ಬ್ಯಾಂಕಿನೊಂದಿಗೆ ವಿವಾದವನ್ನು ಎತ್ತುತ್ತಾರೆ.
- ತಲುಪಿಸದ ವಸ್ತುಗಳಿಗೆ ಗ್ರಾಹಕರಿಗೆ ಶುಲ್ಕ ವಿಧಿಸಲಾಗುತ್ತದೆ.
- ವಹಿವಾಟು ಪ್ರಕ್ರಿಯೆಯಲ್ಲಿ ದೋಷ (ಉದಾಹರಣೆಗೆ: ಒಂದೇ ವಹಿವಾಟನ್ನು ಎರಡು ಬಾರಿ ಪ್ರಕ್ರಿಯೆಗೊಳಿಸಿದಾಗ)
- ಒಬ್ಬ ವ್ಯಾಪಾರಿ ಅದೇ ವಹಿವಾಟಿಗೆ ನಕಲಿ ಶುಲ್ಕ ವಿಧಿಸುತ್ತಾನೆ
ಹಣ ವರ್ಗಾವಣೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಚಾರ್ಜ್‌ಬ್ಯಾಕ್ ಅನ್ನು ಅದೇ ದಿನ ಪ್ರಾರಂಭಿಸಬಹುದಾದ್ದರಿಂದ, ಸ್ವೀಕರಿಸುವ ಬ್ಯಾಂಕ್ ತಕ್ಷಣ ಪರಿಶೀಲಿಸಬಹುದು. ಆದರೆ ವಿವಿಧ ಕಾರಣಗಳಿಂದ ಸರಿಯಾಗಿ ಪರಿಶೀಲಿಸದೆ ಸ್ವೀಕರಿಸುವ ಬ್ಯಾಂಕ್ ರಿಟನ್ ನೀಡಬಹುದು. ಹಣ ವರ್ಗಾವಣೆಯಾಗಿದೆಯೇ ಅಥವಾ ಇಲ್ಲವೇ ಎಂದು ಖಚಿತವಾಗಿಲ್ಲ. ಆದರೂ ಚಾರ್ಜ್‌ಬ್ಯಾಕ್ ಅನುಮೋದನೆ ಪಡೆದಂತೆ ದಾಖಲೆಯಾಗುತ್ತದೆ.
ಈ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗುತ್ತದೆ?
NPCI ಈಗ ಸ್ವಯಂಚಾಲಿತ ಚಾರ್ಜ್‌ಬ್ಯಾಕ್ ಅನುಮೋದನೆ/ತಿರಸ್ಕಾರ ವ್ಯವಸ್ಥೆಯನ್ನು ಪರಿಚಯಿಸಿದೆ. ಸ್ವೀಕರಿಸುವ ಬ್ಯಾಂಕ್ ತಮ್ಮ Return (TCC/RET) ಅನ್ನು ಅಪ್‌ಲೋಡ್ ಮಾಡಿದ ನಂತರ ಮುಂದಿನ ಸೆಟ್ಲ್‌ಮೆಂಟ್ ಸೈಕಲ್‌ನಲ್ಲಿ ಸ್ವಯಂಚಾಲಿತವಾಗಿ ಚಾರ್ಜ್‌ಬ್ಯಾಕ್ ಅನುಮೋದನೆ/ತಿರಸ್ಕಾರ ಆಗುತ್ತದೆ. ಇದು ಬಲ್ಕ್ ಅಪ್‌ಲೋಡ್‌ಗೆ ಮಾತ್ರ ಅನ್ವಯಿಸುತ್ತದೆ.ಈ ಬದಲಾವಣೆಗಳು ಫೆಬ್ರವರಿ 15, 2025 ರಿಂದ ಜಾರಿಗೆ ಬರುತ್ತದೆ.
ಚಾರ್ಜ್‌ಬ್ಯಾಕ್ ಮತ್ತು ಮರುಪಾವತಿ ನಡುವಿನ ವ್ಯತ್ಯಾಸವೇನು?
ಗ್ರಾಹಕರು UPI ಪಾವತಿ ಪೋರ್ಟಲ್‌ಗಳಂತಹ ಸೇವಾ ಪೂರೈಕೆದಾರರೊಂದಿಗೆ ಅಥವಾ ವ್ಯಾಪಾರಿಯೊಂದಿಗೆ ವಿನಂತಿಯನ್ನು ಸಲ್ಲಿಸಿದಾಗ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಹಾಗೂ ಗ್ರಾಹಕರು ಬ್ಯಾಂಕಿನೊಂದಿಗೆ ವಿನಂತಿಯನ್ನು ಸಲ್ಲಿಸಿದಾಗ ಚಾರ್ಜ್‌ಬ್ಯಾಕ್ ಸಂಭವಿಸುತ್ತದೆ, ಅದು ನಂತರ ಕ್ಲೇಮ್ ಅನ್ನು ತನಿಖೆ ಮಾಡುತ್ತದೆ.
ಹೀಗೆ UPI ವ್ಯವಹಾರಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರುತ್ತಾವೆ.
ರಿಟೇಲ್ ಪೇಮೆಂಟ್ ವ್ಯವಸ್ಥೆ
ಯುಪಿಐ ತಂತ್ರಜ್ಞಾನದ ಬಳಕೆಯ ಮೂಲಕ ರಿಟೇಲ್ ಪೇಮೆಂಟ್ ವ್ಯವಸ್ಥೆಗಳಿಗೆ ಆವಿಷ್ಕಾರಗಳನ್ನು ತರುವತ್ತ ಗಮನಹರಿಸಿದೆ ಮತ್ತು ಭಾರತವನ್ನು ಡಿಜಿಟಲ್ ಆರ್ಥಿಕತೆಯಾಗಿ ಪರಿವರ್ತಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂದು NPCI ಹೇಳಿದೆ.
ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆ
ಫೆಬ್ರವರಿ 1ರಿಂದ ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರುವ ಐಡಿಯ ವಹಿವಾಟುಗಳನ್ನು ಯುಪಿಐ ನಿಂದ ಸ್ವೀಕರಿಸಲಾಗುವುದು ಎಂದು ಎನ್‌ಪಿಸಿಐ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲಿದೆ.
ಡಿಸೆಂಬರ್ 2024ರ ಅಂಕಿ ಅಂಶಗಳ ಪ್ರಕಾರ, ಯುಪಿಐ ಸ್ವೀಕರಿಸುವ ಮತ್ತು ಪಾವತಿಸುವ ವಹಿವಾಟುಗಳ ಸಂಖ್ಯೆ 16.73 ಬಿಲಿಯನ್ ವರೆಗೆ ತಲುಪಿದೆ.


Click it and Unblock the Notifications