2024ರ ಕ್ಯಾಲೆಂಡರ್ ಮುಗಿದು 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಆದರೆ ಹೊಸ ವರ್ಷದಂದು ವ್ಯವಹಾರ ಮಾಡಲು ಬ್ಯಾಂಕ್‌ಗೆ ರಜೆ ಇರುತ್ತದೆಯೋ ಎಂಬುವುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಬ್ಯಾಂಕ್ ರಜೆದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಹಾಗಿದ್ರೆ ಹೊಸ ವರ್ಷದಂದು ದಿನ ಬ್ಯಾಂಕ್‌ಗೆ ರಜೆ ಇದ್ಯಾ? ಇಲ್ಲವೋ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು,ಭಾರತ ದೇಶದಲ್ಲಿ ಬ್ಯಾಂಕ್ ರಜಾದಿನಗಳು ರಾಷ್ಟ್ರೀಯ ರಜಾದಿನಗಳು (ಗೆಜೆಟೆಡ್ ರಜಾದಿನಗಳು) ಮತ್ತು ಸರ್ಕಾರಿ ರಜಾದಿನಗಳು (ರಾಜ್ಯ ಮತ್ತು ಕೇಂದ್ರ ಎರಡೂ) ಎಂದು ರಜೆದಿನಗಳಿರುತ್ತವೆ. ಸರ್ಕಾರಿ ರಜಾದಿನಗಳು ಎರಡು ವಿಧಗಳಾಗಿವೆ ಅದರಲ್ಲಿ ರಾಜ್ಯ ಸರ್ಕಾರಿ ಬ್ಯಾಂಕ್ ರಜಾದಿನಗಳು ಮತ್ತು ಕೇಂದ್ರ ಸರ್ಕಾರಿ ಬ್ಯಾಂಕ್ ರಜಾದಿನಗಲಾಗಿ ರಜೆ ಘೋಷಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ, ಆದರೆ ಕೇಂದ್ರ ಸರ್ಕಾರದ ಬ್ಯಾಂಕ್ ರಜಾದಿನಗಳು ದೇಶದಾದ್ಯಂತ ಒಂದೇ ಆಗಿರುತ್ತವೆ.

ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಪ್ರತಿ ತಿಂಗಳ ಎಲ್ಲಾ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಎಲ್ಲಾ ಭಾನುವಾರಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗೂ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ.
1 ಜನವರಿ 2025 ರಂದು ಬ್ಯಾಂಕ್ ರಜೆ:
ಹೊಸ ವರ್ಷ ಈ ಬಾರಿ ಬುಧವಾರದಂದು ಬಂದಿದೆ. ಜನವರಿ 1 ರಂದು ಬ್ಯಾಂಕುಗಳು ತೆರೆದಿವೆಯೇ ಅಥವಾ ಮುಚ್ಚಿವೆಯೇ? ಎಂಬ ಮಾಹಿತಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ತಮ್ಮ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ಅವಶ್ಯಕವಿರುವುದರಿಂದ ಬ್ಯಾಂಕ್ ರಜಾದಿನಗಳ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕು.
ಈ ವರ್ಷ 2024 ರಲ್ಲಿ, ಆರ್‌ಬಿಐ ಏಳು ರಾಜ್ಯಗಳಲ್ಲಿ - ತಮಿಳುನಾಡು, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ ಮತ್ತು ಮೇಘಾಲಯದಲ್ಲಿ ಜನವರಿ 1 ರಂದು ಹೊಸ ವರ್ಷಕ್ಕೆ ಬ್ಯಾಂಕ್ ರಜೆ ಘೋಷಿಸಿತ್ತು. ಆದ್ದರಿಂದ, ಕೇಂದ್ರ ಬ್ಯಾಂಕ್‌ನ ರಜಾ ಪಟ್ಟಿಯ ಪ್ರಕಾರ ದೇಶದ ಕೆಲವು ರಾಜ್ಯಗಳಲ್ಲಿ ಜನವರಿ 1 2025 ರ ಮೊದಲ ಬ್ಯಾಂಕ್ ರಜಾದಿನವಾಗಿದೆ. ಮಿಜೋರಾಂನಲ್ಲಿ ಜನವರಿ 2 ರಂದು ಹೊಸ ವರ್ಷದ ಆಚರಣೆಗೆ ಬ್ಯಾಂಕ್ ರಜೆ ಇತ್ತು,
ಜನವರಿ 2025 ರಲ್ಲಿ ಬ್ಯಾಂಕ್ ರಜಾದಿನಗಳು
2025 ರ ಮೊದಲ ತಿಂಗಳಲ್ಲಿ ಸುಮಾರು 11 ಬ್ಯಾಂಕ್ ರಜಾದಿನ ಇವೆ. ಇವುಗಳಲ್ಲಿ ಭಾನುವಾರಗಳ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. 2025 ರಲ್ಲಿ ಮೊದಲ ಬ್ಯಾಂಕ್ ರಜೆ ಕೆಲವು ಪ್ರದೇಶಗಳಲ್ಲಿ ಜನವರಿ 1 ರಂದು ಇರುತ್ತದೆ.
1 ಜನವರಿ 2025 ಬುಧವಾರ: ಹೊಸ ವರ್ಷದ ದಿನ
6 ಜನವರಿ 2025 ಸೋಮವಾರ: ಗುರು ಗೋವಿಂದ್ ಸಿಂಗ್ ಜಯಂತಿ
11 ಜನವರಿ 2025 ಶನಿವಾರ: ಮಿಷನರಿ ದಿನ
12 ಜನವರಿ 2025 ಭಾನುವಾರ: ಸ್ವಾಮಿ ವಿವೇಕಾನಂದರ ಜನ್ಮದಿನ
13 ಜನವರಿ 2025 ಸೋಮವಾರ: ಲೋಹ್ರಿ
14 ಜನವರಿ 2025 ಮಂಗಳವಾರ: ಉತ್ತರಾಯಣ ಪುಣ್ಯಕಾಲ/ಮಕರ ಸಂಕ್ರಾಂತಿ ಹಬ್ಬ/ಮಾಘೆ ಸಂಕ್ರಾಂತಿ/ಪೊಂಗಲ್/ಮಾಘ ಬಿಹು
15 ಜನವರಿ 2025: ಬುಧವಾರ: ತಿರುವಳ್ಳುವರ್ ದಿನ
23 ಜನವರಿ 2025: ಗುರುವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
24 ಜನವರಿ2025: ಶನಿವಾರ: ನಾಲ್ಕನೇ ಶನಿವಾರ
26 ಜನವರಿ 2025: ಭಾನುವಾರ: ಗಣರಾಜ್ಯೋತ್ಸವ
30 ಜನವರಿ 2025 : ಗುರುವಾರ: ಸೋನಮ್ ಲೋಸರ್
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications