2024 ಮುಗಿದು 2025ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಬಲು ಜೋರು..! ಇಂತಹ ಸಂದರ್ಬದಲ್ಲಿ ಸಂಚಾರ ಜೀವನಾಡಿ ಬಿಎಂಟಿಸಿ ಸಾರ್ವಜನಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೌದು, ಹೊಸವರ್ಷದ ಸಂಭ್ರಮಾಚರಣೆ ಮಾಡಲು ಬಹುತೇಕರು ಪಾರ್ಟಿ ಮಾಡಲು ಎಲ್ಲಾರು ಒಟ್ಟಾಗಿ ಸೇರುತ್ತಾರೆ. ಇದಕ್ಕಾಗಿ ಬಿಎಂಟಿಸಿ ಡಿ.31ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರ ಅನುಕೂಲಕ್ಕಾಗಿ ಎಂ.ಜಿ ರೋಡ್‌ನಿಂದ ನಗರದ ವಿವಿಧ ಭಾಗಗಳಿಗೆ ರಾತ್ರಿ 11 ರಿಂದ ಜ.1ರ ನಸುಕಿನ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೌಲಭ್ಯವನ್ನು ನೀಡಲು ಸಜ್ಜಾಗಿದೆ.

ಡಿಸೆಂಬರ್ 31ರ ರಾತ್ರಿ ಸಂಭ್ರಮಾಚರಣೆ ಬಲು ಜೋರು..!
ಡಿಸೆಂಬರ್ 31ರ ರಾತ್ರಿ ನಗರದ ಎಂಜಿ ರಸ್ತೆ, ಕೋರಮಂಗಲ, ಬ್ರಿಗೇಡ್ ರೋಡ್ಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿರಲಿದೆ. ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಮ್ಮ ಮೆಟ್ರೋ, ಬಿಎಂಟಿಸಿ ಬಳಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ಸೇವೆಯನ್ನು ಒದಗಿಸಲಿದೆ.
ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಾರಿಗೆ ವ್ಯವಸ್ಥೆ
ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಮತ್ತು ಜಂಕ್ಷನ್ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆ, ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದೆ.
ಮಾರ್ಗಗಳ ಮಾಹಿತಿ
| ಕ್ರಮ ಸಂಖ್ಯೆ | ಮಾರ್ಗ ಸಂಖ್ಯೆೆ | ಎಲ್ಲಿಂದ | ಎಲ್ಲಿಗೆ |
| 1 | ಎ-3 | ಬ್ರಿಗೇಡ್ ರಸ್ತೆ | ಎಲೆಕ್ಟ್ರಾನಿಕ್ ಸಿಟಿ |
| 2 | ಎ-4 | ಬ್ರಿಗೇಡ್ ರಸ್ತೆ | ಜಿಗಣಿ |
| 3 | ಎ-2 | ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ | ಸರ್ಜಾಪುರ |
| 4 | ಎ-6 | ಕೆಂಗೇರಿ | ಕೆ.ಎಚ್.ಬಿ ಕ್ವಾಟ್ರಸ್ |
| 5 | ಎ-7 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಜನಪ್ರಿಯ ಟೌನ್ ಶಿಪ್ |
| 6 | ಎ-8 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ನೆಲಮಂಗಲ |
| 7 | ಎ-9 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಯಲಹಂಕ ಉಪನಗರ 5ನೇ ಹಂತ |
| 8 | ಎ-10 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಯಲಹಂಕ |
| 9 | ಎ-11 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಬಾಗಲೂರು |
| 10 | 317-ಎ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಹೊಸಕೋಟೆ |
| 11 | ಎಸ್‌ಬಿಎಸ್-13ಕೆ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಚನ್ನಸಂದ್ರ |
| 12 | ಎಸ್‌ಬಿಎಸ್-1ಕೆ | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಕಾಡುಗೋಡಿ |
| 13 | 13 | ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ | ಬನಶಂಕರಿ |
Whatsapp New Year 2025 ಸ್ಟಿಕ್ಕರ್: ಈಗ ನಿಮ್ಮ ಮೊಬೈಲ್‌ನಲ್ಲೂ ಲಭ್ಯವಿದೆ; ಡೌನ್‌ಲೋಡ್ ಮಾಡುವುದು ಹೇಗೆ?
ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಹೊಸ ವರ್ಷದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಿಸಲಾಗಿದೆ. ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1 ನಸುಕಿನ ಜಾವ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ಮೆಜೆಸ್ಟಿಕ್ನಿಂದ ಕೊನೆಯ ರೈಲು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಹೊರಡಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆ ಅವಧಿ ವಿಸ್ತರಣೆ
ಜನರು ಹೊಸ ವರ್ಷದಂದು ಜಾಲಿ ಮೋಡ್‌ನಲ್ಲಿ ರಾತ್ರಿ ಇಡೀ ಪಾರ್ಟಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರು ಸುರಕ್ಷಿತವಾಗಿ ಮನೆ ಸೇರಿಕೊಳ್ಳಲು ಪ್ರಯಾಣಿಕರ ಅನುಕೂಲವಾಗಲಿ ಎಂದು ಬೆಂಗಳೂರು ಮೆಟ್ರೋ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ.
ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ,ನಿರ್ಗಮನ ದ್ವಾರ ಬಂದ್
ಹೊಸ ವರ್ಷದ ಪಾರ್ಟಿಗಳು ಹೆಚ್ಚಾಗಿ ಬಿಗ್ರೇಡ್ ರೋಡ್ನಲ್ಲಿ ನಡೆಯುತ್ತದೆ. ಆ ದಿನ ಕಾಲಿಡುವುದಕ್ಕೂ ಸ್ಥಳವಿಲ್ಲದಷ್ಟು ಜನಜಂಗುಳಿ ಇರುತ್ತದೆ. ಇನ್ನೂ ಜನರು ಪಾರ್ಟಿ ಮುಗಿಸಿಕೊಂಡು ಎಲ್ಲರೂ ತಮ್ಮ ವಾಸಸ್ಥಳಕ್ಕೆ ತೆರವಾಗ ಅವರೆಲ್ಲರೂ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಅಲ್ಲಿ ಹೆಚ್ಚಿನ ಜನಸಂಖ್ಯೆ ಇರುತ್ತದೆ. ಇದನ್ನು ಕಡಿಮೆ ಮಾಡಲು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಆಗಲಿವೆ. ಪ್ರಯಾಣಿಕರಿಗೆ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಮೆಟ್ರೋ ಸೇವೆ ಇರುತ್ತದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
10 ನಿಮಿಷಕ್ಕೊಂದು ರೈಲು
ಡಿಸೆಂಬರ್ 31ರ ರಾತ್ರಿ 11ರಿಂದ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್ನಿಂದ ಕೊನೆ ರೈಲು ಹೊರಡಲಿದೆ. ಆದ್ರೆ, ಮೆಜೆಸ್ಟಿಕ್ನಿಂದ ಮುಂಜಾನೆ 2.40ಕ್ಕೆ ಕೊನೆ ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?



Click it and Unblock the Notifications