ಹೊಸ ವರ್ಷಕ್ಕೆ ಹೊಸ ಉದ್ಯೋಗ ಶುರು ಮಾಡಬೇಕೆಂದುಕೊಂಡಿದ್ದೀರಾ..? ಯಾವ ಉದ್ಯೋಗ ಮಾಡಲಿ ಎಂಬ ಪ್ಲ್ಯಾನ್ ಇದ್ಯಾ? ಹಾಗಿದ್ರೆ ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚಿನ ಆದಾಯವನ್ನು ಪಡೆಯಲು ಯಾವ ವೃತ್ತಿಯನ್ನು ಮಾಡಬಹುದು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...
ಹೌದು, ನೀವು ಯಾವುದೇ ವ್ಯವಹಾರ ಶುರುಮಾಡಲು ಯಾವುದೇ ವಿಶೇಷ ತರಬೇತಿ ಬೇಕಿಲ್ಲ. ನೀವು ಇರುವಂತಹ ನಿಮ್ಮ ಪ್ರದೇಶದಲ್ಲಿ ಆರ್ಥಿಕ ಶಕ್ತಿಗೆ ಅನುಸಾರವಾಗಿ ಸ್ವಂತದಾದ ಉದ್ಯೋಗವನ್ನು ಆರಂಭಿಸಬಹುದು. ಅಷ್ಟೇ ಅಲ್ಲ ಹಂತ ಹಂತವಾಗಿ ನಿಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ಆಯ್ಕೆಯೂ ಇಲ್ಲಿವೆ. ನಿಮ್ಮ ಬಂಡವಾಳಕ್ಕೆ ಸೀಮಿತ ಲಾಭವಂತೂ ಇದ್ದೇ ಇರುತ್ತದೆ. ಹೆಚ್ಚಿನ ಲಾಭ ಬರುವುದು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ನೀವು ಹಾಕಿದ ಬಂಡವಾಳದಷ್ಟು ಲಾಭ ಮಾತ್ರ ಇದ್ದೇ ಇರುತ್ತದೆ.

ಕಡಿಮೆ ಬಂಡವಾಳದ ಐಡಿಯಾಗಳು
ಹಾಲಿನ ಅಂಗಡಿ ಇಡಬಹುದು:
ಪ್ರತಿ ದಿನ ಮಾರಾಟವಾಗುವ ವಸ್ತು ಅಂದ್ರೆ ಅದು ಹಾಲು. ನೀವು ಅಧಿಕೃತ ಡೈರಿಗಳಿಂದಲೇ ಅನುಮತಿ ಪಡೆದು ಹಾಲು ಹಾಗೂ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಬಹುದು.ಇದರಿಂದ ಕೂಡ ನೀವು ಹಣ ಸಂಪಾದಿಸಬಹುದು.
ಟೀ(ಚಹಾ) ಮಾರಾಟ
ಚಹಾ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಿನ ಜನರು ಟೀ ಕುಡಿಯುತ್ತಾನೆ ಇರುತ್ತಾರೆ. ನೀವು ಯಾವುದೇ ಪ್ರದೇಶಕ್ಕೆ ಹೋದರು ಟೀ ಕುಡಿಯುವ ಜನರು ಸಿಗುತ್ತಾರೆ. ಸಣ್ಣದಾದ ಅಂಗಡಿಯಲ್ಲಿ ನೀವು ಈ ವ್ಯಾಪಾರವನ್ನು ಶುರು ಮಾಡಬಹುದು. ಹೆಚ್ಚು ಜನ ಸೇರುವ ಸ್ಥಳದಲ್ಲಿ ಆರಂಭಿಸಿದ್ದರೆ ನಿಮ್ಮಗೆ ಹೆಚ್ಚಿನ ಲಾಭ ಸಿಗುತ್ತದೆ.
ಮಿಲ್ ಅಂಗಡಿ
ಹಳ್ಳಿಯಲ್ಲಿ ಹಿಟ್ಟು ಮಾಡುವ ಕೇಂದ್ರಗಳಿಗೆ ಭಾರೀ ಬೇಡಿಕೆ ಇದೆ. ನೀವಿರುವ ಸ್ಥಳದಲ್ಲಿಯೇ ಸಣ್ಣ ಪ್ರಮಾಣದಲ್ಲಿ ಈ ಮಿಲ್ ಆರಂಭಿಸಬಹುದು ಇದರಿಂದ ನಿಮ್ಮಗೆ ಲಾಭ ಸಿಗುತ್ತದೆ ಹಾಗೂ ನೀವು ಇದರ ಜೊತೆ ಬೇರೆಯ ಕೆಲಸ ಮಾಡಲು ಸಮಯ ಸಿಗುತ್ತದೆ.
ಚಿಲ್ಲರೆ ಅಂಗಡಿ
ದಿನ ನಿತ್ಯಕ್ಕೆ ಅಗತ್ಯವಿರುವ ದಿನಸಿ ಪದಾರ್ಥ ಸೇರಿದಂತೆ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಆರಂಭಿಸಬಹುದು. ಇದು ಸಹ ಕಡಿಮೆ ಬಂಡವಾಳದಲ್ಲಿಯೇ ಆರಂಭಿಸಬಹುದು.ಜನರು ಹೆಚ್ಚು ಬರುವಂತಹ ಸ್ಥಳದಲ್ಲಿ ಚಿಲ್ಲರೆ ಅಂಗಡಿಯನ್ನು ಇಟ್ಟು ನೀವು ವ್ಯವಹಾರವನ್ನು ಮಾಡಬಹುದು.
ಔಷಧಿ ಮಳಿಗೆ
ನೀವು ಫಾರ್ಮಸಿ ಅಭ್ಯಾಸ ಮಾಡಿದ್ದು, ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಷ್ಟವಿರದಿದ್ದರೆ ನಿಮ್ಮದೇ ಆದ ಸ್ವಂತ ಔಷಧ ಮಳಿಗೆ ಆರಂಭಿಸಬಹುದು. ಈ ವ್ಯಾಪಾರದಲ್ಲಿ ಲಾಭದ ಅತ್ಯಧಿಕವಾಗಿರುತ್ತದೆ.
ಚಿಪ್ಸ್ ಮಾರಾಟ ಅಥವಾ ಹಪ್ಪಳ ಮಾರಾಟ
ಆಲೂಗಡ್ಡೆ, ಬಾಳೆಕಾಯಿ ಸೇರಿದಂತೆ ವಿವಿಧ ಚಿಪ್ಸ್ ಮಾರಾಟ ಮಾಡುವ ಉತ್ತಮ ಹಣ ಸಂಪಾದಿಸಬಹುದು. ಇದರ ಜೊತೆಗೆ ನೀವು ಮನೆಯಲ್ಲಿ ತಯಾರಿಸಬಹುದಾದ ಹಪ್ಪಳಗಳನ್ನು ಹಾಗೂ ಇತರೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯಬಹುದು.
ಹಣತೆ/ ದೀಪದ ಬತ್ತಿ ಮಾರಾಟ
ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ವಸ್ತ. ಇದನ್ನು ನೀವೇ ಪ್ಯಾಕ್ ಮಾಡಿ ಮಾರಾಟ ಮಾಡಬಹುದು. ಹಂತ ಹಂತವಾಗಿ ನಿಮ್ಮದೇ ಬ್ರ್ಯಾಂಡ್ ಸೃಷ್ಟಿಸುವ ಅವಕಾಶಗಳು ಇಲ್ಲಿವೆ.
ಸೈಬರ್ ಸೆಂಟರ್
ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ತೆಗೆದುಕೊಂಡು ಸೈಬರ್ ಸೆಂಟರ್ ಆರಂಭಿಸಬಹುದು. ಆನ್ ಲೈನ್ ಅಪ್ಲಿಕೇಷನ್ ಹಾಕವುದು, ಜೆರಾಕ್ಸ್ ಮಾಡಿಕೊಂಡುವುದರ ಮೂಲಕ ಹಣ ಗಳಿಸಬಹುದು. ನಂತರ ಕಂಪ್ಯೂಟರ್ ಸಂಖ್ಯೆಗಳನ್ನು ಹೆಚ್ಚಿಸಿಕೊಂಡು ವಿವಿಧ ತರಬೇತಿಗಳನ್ನು ಶುರುಮಾಡಬಹುದು.
ಹೀಗೆ ನಾವು ಮೇಲಿನ ಯಾವುದೇ ವ್ಯಾಪಾರವನ್ನು ಕಡಿಮೆ ಬಂಡವಾಳವನ್ನು ಹಾಕಿ ಶುರು ಮಾಡಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications