ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರ (ಜೂನ್ 11, 2020) ಇಳಿಕೆ ದಾಖಲಿಸಿವೆ. ಸೆನ್ಸೆಕ್ಸ್ 708.68 ಪಾಯಿಂಟ್ ಗಳಷ್ಟು ಇಳಿಕೆ ಕಂಡು, ದಿನಾಂತ್ಯಕ್ಕೆ 33,238.37 ಅಂಶದೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 214.15 ಪಾಯಿಂಟ್ ಗಳಷ್ಟು ಇಳಿಕೆಯಾಗಿ, ಹತ್ತು ಸಾವಿರ ಪಾಯಿಂಟ್ ನ ಕೆಳಗೆ ಇಳಿದು, 9,902 ಅಂಶದೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ಬ್ಯಾಂಕ್ ನಿಫ್ಟಿ ಕೂಡ ಕುಸಿತ ಕಂಡಿದ್ದು, 574.95 ಅಂಶಗಳು ಕುಸಿದು, 20,525.15 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಗುರುವಾರದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾರ್ವಜನಿಕ ವಲಯದ ಎಲ್ಲ ಬ್ಯಾಂಕ್ ಗಳು ಸಹ ಇಳಿಕೆ ದಾಖಲಿಸಿದವು. ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಷೇರು ಹೊರತು ಪಡಿಸಿ ಉಳಿದೆಲ್ಲ ಪಿಎಸ್ ಯು ಬ್ಯಾಂಕ್ ಗಳ ಷೇರುಗಳ ಬೆಲೆ ಎರಡಂಕಿಯಲ್ಲಿ ಇವೆ.

ನಿಫ್ಟಿಯಲ್ಲಿ ಹೆಚ್ಚಿನ ಇಳಿಕೆ ದಾಖಲಿಸಿದ ಐದು ಷೇರುಗಳು
ಭಾರ್ತಿ ಇನ್ ಫ್ರಾಟೆಲ್
ಜೀ ಎಂಟರ್ ಟೇನ್ ಮೆಂಟ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ವೇದಾಂತ
ಟಾಟಾ ಮೋಟಾರ್ಸ್
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಐದು ಷೇರುಗಳು
ಇಂಡಸ್ ಇಂಡ್ ಬ್ಯಾಂಕ್
ನೆಸ್ಟ್ಲೆ
ಹೀರೋ ಮೋಟೋಕಾರ್ಪ್
ಮಹೀಂದ್ರಾ ಅಂಡ್ ಮಹೀಂದ್ರಾ
ಪವರ್ ಗ್ರಿಡ್


Click it and Unblock the Notifications