For Quick Alerts
ALLOW NOTIFICATIONS  
For Daily Alerts

12,000 ಗಡಿ ದಾಟಿದ ನಿಫ್ಟಿ, ಸೆನ್ಸೆಕ್ಸ್ 150 ಅಂಶಗಳ ಏರಿಕೆ

|

ಮಂಗಳವಾರ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆಸಿ ಸೆನ್ಸೆಕ್ಸ್ 917 ಅಂಶಗಳ ಏರಿಕೆ ಕಂಡಿತ್ತು. ಬುಧವಾರವೂ ಆರಂಭದಲ್ಲೇ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಶಗಳ ಏರಿಕೆ ಕಂಡಿದ್ದು, ನಿಫ್ಟಿ 12,000 ಗಡಿ ದಾಟಿದೆ.

 

ಷೇರುಪೇಟೆಯಲ್ಲಿ ಧಮಾಕ, ಸೆನ್ಸೆಕ್ಸ್ 917 ಪಾಯಿಂಟ್‌ಗಳ ಏರಿಕೆಷೇರುಪೇಟೆಯಲ್ಲಿ ಧಮಾಕ, ಸೆನ್ಸೆಕ್ಸ್ 917 ಪಾಯಿಂಟ್‌ಗಳ ಏರಿಕೆ

ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಬುಧವಾರ ಉತ್ತಮ ಆರಂಭ ದಾಖಲಿಸಿದೆ. 11,982.60 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 12,000 ಗಡಿ ದಾಟಿದ್ದು, 12,030 ಅಂಶಗಳನ್ನು ತಲುಪಿದೆ. ಇನ್ನು ಸೆನ್ಸೆಕ್ಸ್ 183 ಅಂಶಗಳು ಏರಿಕೆಗೊಂಡು 41 ಸಾವಿರ ಗಡಿ ಸಮೀಪಿಸಿದೆ. ಮಂಗಳವಾರ ಸೆನ್ಸೆಕ್ಸ್ 917.07 ಅಂಶಗಳು ಏರಿಕೆಗೊಂಡು 40,789.38 ಅಂಶಗಳನ್ನು ತಲುಪಿತ್ತು.

 
12,000 ಗಡಿ ದಾಟಿದ ನಿಫ್ಟಿ, ಸೆನ್ಸೆಕ್ಸ್ 150 ಅಂಶಗಳ ಏರಿಕೆ

ಯೆಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಬಿಪಿಸಿಎಲ್, ಯುಪಿಎಲ್, ಭಾರತಿ ಇನ್ಫ್ರಾಟೆಲ್, ಬ್ರಿಟಾನಿಯಾ ಕಂಪನಿಯ ಷೇರುಗಳು ಉತ್ತಮ ಏರಿಕೆ ದಾಖಲಿಸಿವೆ. ಆದರೆ ಜೀ ಎಂಟರ್‌ಟೈನ್‌ಮೆಂಟ್, ಹೀರೋ ಮೊಟೊಕಾರ್ಪ್, ಅದಾನಿ ಪೋರ್ಟ್ಸ್, ಡಾ. ರೆಡ್ಡಿ ಲ್ಯಾಬ್ಸ್‌, ಇನ್ಫೋಸಿಸ್ ಕಂಪನಿ ಷೇರುಗಳು ಭಾರೀ ಇಳಿಕೆ ಸಾಧಿಸಿವೆ.

English summary

Nifty Crossed 12,000 Mark, Sensex 150 plus points raised

Market benchmark Sensex jumped over 150 points in opening session on Wednesday and Nifty crossed 12,000 mark
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X