ಭಾರತೀಯ ಷೇರುಪೇಟೆ ಸೋಮವಾರ ಮತ್ತೆ ಹಾದಿಗೆ ಮರಳಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 750 ಪಾಯಿಂಟ್ಸ್ ಏರಿಕೆಗೊಂಡು 50,000 ಗಡಿ ಸಮೀಪಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 232 ಪಾಯಿಂಟ್ಸ್ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 749.85 ಪಾಯಿಂಟ್ಸ್ ಅಥವಾ ಶೇಕಡಾ 1.53ರಷ್ಟು ಹೆಚ್ಚಾಗಿ 49,849.84 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 232.30 ಪಾಯಿಂಟ್ಸ್ ಅಥವಾ ಶೇಕಡಾ 1.60ರಷ್ಟು ಏರಿಕೆಗೊಂಡು 14,761.50 ಪಾಯಿಂಟ್ಸ್ ತಲುಪಿದೆ. ಇಂದು 1,921 ಷೇರುಗಳು ಏರಿಕೆಗೊಂಡರೆ, 1,093 ಷೇರುಗಳು ಇಳಿಕೆಯಾಗಿವೆ ಮತ್ತು 189 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಪವರ್ ಗ್ರಿಡ್ ಕಾರ್ಪೊರೇಷನ್, ಒಎನ್‌ಜಿಸಿ, ಗ್ರಾಸಿಮ್ ಇಂಡಸ್ಟ್ರೀಸ್, ಯುಪಿಎಲ್ ಮತ್ತು ಶ್ರೀ ಸಿಮೆಂಟ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಭಾರ್ತಿ ಏರ್‌ಟೆಲ್ 24.10 ರೂ. (4.33%) ಇಳಿಕೆಗೊಂಡಿದೆ.
ಪಿಎಸ್‌ಯು ಬ್ಯಾಂಕ್ ಸೂಚ್ಯಂಕವನ್ನು ಹೊರತುಪಡಿಸಿ, ನಿಫ್ಟಿ ಆಟೋ, ಎನರ್ಜಿ ಮತ್ತು ಮೆಟಲ್ ಸೂಚ್ಯಂಕಗಳು ತಲಾ 2 ಪ್ರತಿಶತದಷ್ಟು ಏರಿಕೆಯೊಂದಿಗೆ ಇತರ ಎಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1.5 ಪ್ರತಿಶತದಷ್ಟು ಹೆಚ್ಚಿವೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ಚೇತರಿಸಿಕೊಂಡರೂ ಪ್ರತಿ ಡಾಲರ್‌ಗೆ 73.55 ಕ್ಕೆ ತಲುಪಿದೆ. ಇದು ಹಿಂದಿನ 73.46 ರ ವಿರುದ್ಧ 31 ಪೈಸೆ ಕಡಿಮೆಯಾಗಿ 73.77 ಕ್ಕೆ ವಹಿವಾಟು ತೆರೆದು, 73.18-73.77 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.


Click it and Unblock the Notifications