For Quick Alerts
ALLOW NOTIFICATIONS  
For Daily Alerts

ಸತತ 3 ದಿನಗಳ ಕುಸಿತದ ಬಳಿಕ ಶುಕ್ರವಾರ ಷೇರು ಮಾರುಕಟ್ಟೆ ಜಿಗಿತ

|

ಮುಂಬೈ, ನವೆಂಬರ್ 12: ಸತತ ಮೂರು ದಿನಗಳ ಕಾಲ ಷೇರು ಮಾರುಕಟ್ಟೆಯಲ್ಲಿ ಕುಸಿತದ ಬಳಿಕ ಶುಕ್ರವಾರದ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡುಬಂದಿದೆ.

ಸೆನ್ಸೆಕ್ಸ್‌ನಲ್ಲಿ ದಿನದಂತ್ಯಕ್ಕೆ 767 ಸೂಚ್ಯಂಕ ಏರಿಕೆಯಾಗಿದೆ. 60,686.69 ಕ್ಕೆ ತಲುಪಿದೆ ಅಂದರೆ ಇಂದಿನ ವಹಿವಾಟಿನಲ್ಲಿ ಶೇ.1.28ರಷ್ಟು ಏರಿಕೆಯಾಗಿದೆ.

ನಿಫ್ಟಿ ವಹಿವಾಟಿನಲ್ಲಿಯೂ ಶುಕ್ರವಾರ ಉತ್ತಮ ಏರಿಕೆ ಕಂಡುಬಂದಿದ್ದು, 229.15 ಸೂಚ್ಯಂಕ ಏರಿಕೆಯಾಗಿ 18,102.75 ಅಂಕಕ್ಕೆ ಬಂದು ತಲುಪಿದೆ, ಅಂದರೆ ಇಂದಿನ ವಹಿವಾಟಿನಲ್ಲಿ ಶೇ.1.28ರಷ್ಟು ಹೆಚ್ಚಳವಾದಂತಾಗಿದೆ.

ಸತತ 3 ದಿನಗಳ ಕುಸಿತದ ಬಳಿಕ ಶುಕ್ರವಾರ ಷೇರು ಮಾರುಕಟ್ಟೆ ಜಿಗಿತ

ಇನ್ಫೋಸಿಸ್, ಎಚ್‌ಡಿಎಫ್‌ಸಿ, ರಿಲಾಯನ್ಸ್ ಇಂಡಸ್ಟ್ರೀಸ್, ಟೆಕ್ ಮಂಹೀಂದ್ರಾ, ಎಲ್‌ಎನ್‌ಟಿ, ಬಜಾಜ್ ಫೈನಾನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಷೇರುಗಳಲ್ಲಿನ ಏರಿಕೆಯಿಂದ ಶುಕ್ರವಾರದ ಷೇರು ವಹಿವಾಟಿನಲ್ಲಿಯೂ ಪ್ರಗತಿ ಕಂಡು ಬಂದಿದೆ. ಒಂದು ಹಂತದಲ್ಲಿ 831 ಸೂಚ್ಯಂಕದವರೆಗೆ ಏರಿಕೆಯಾಗಿತ್ತು.

ನಿಫ್ಟಿ ವ್ಯವಹಾರದಲ್ಲಿ 17,800ಕ್ಕೆ ಕುಸಿತವಾಗಿದ್ದರಿಂದ ಹೂಡಿಕೆದಾರರಲ್ಲಿ ಒಂದು ಹಂತದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದಿನ ವಹಿವಾಟಿನಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, 18 ಸಾವಿರದ ಗಡಿಯನ್ನು ಮತ್ತೆ ದಾಟಿದೆ.

43 ಷೇರುಗಳಲ್ಲಿ ವಹಿವಾಟಿನಲ್ಲಿ ಏರಿಕೆ ಕಂಡುಬಂದಿತ್ತು, ಅದರಲ್ಲಿ ಟೆಕ್ ಮಹೀಂದ್ರಾ ಅತ್ಯಂತ ದೊಡ್ಡ ಗಳಿಕೆಯನ್ನು ಪಡೆದುಕೊಂಡ ಕಂಪನಿಯಾಗಿದೆ. ಹಿಂಡಾಲ್ಕೋ, ವಿಪ್ರೋ, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫೈನಾನ್ಸ್ ಸರ್ವೀಸ್, ಎಚ್‌ಡಿಎಫ್‌ಸಿ, ಎಸ್‌ಬಿಐ ಲೈಫ್ , ಭಾರತಿ ಏರ್‌ಟೆಲ್ , ಸನ್‌ಫಾರ್ಮಾ ಕೂಡ 1.7 ರಿಂದ 1.12ರವರೆಗೆ ಏರಿಕೆಯಾಗಿದೆ.

ಷೇರು ಮಾರ್ಕೆಟ್ ಬೇಸಿಕ್ಸ್ : ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು, ಷೇರು ಮಾರುಕಟ್ಟೆ ಏನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇಲ್ಲಿ ವಿವಿಧ ಕಂಪನಿಗಳ ಷೇರುಗಳನ್ನು ಟ್ರೇಡ್ ಮಾಡಲಾಗುತ್ತದೆ. ಭಾರತದಲ್ಲಿ, ಎರಡು ಪ್ರಾಥಮಿಕ ವಿನಿಮಯಗಳಿವೆ; ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE).

ಹೂಡಿಕೆಯು ನಿಮ್ಮ ಸುರಕ್ಷಿತ ಮತ್ತು ಸುಭದ್ರ ಭವಿಷ್ಯಕ್ಕೆ ಪ್ರಮುಖವಾಗಿದೆ. ಆದಾಗ್ಯೂ, ಹಣದುಬ್ಬರದ ಪರಿಣಾಮವನ್ನು ತಪ್ಪಿಸಲು, ಸರಳವಾದ ಹಳೆಯ ಹಣಕಾಸು ಸಾಧನಗಳಲ್ಲಿ ಹೂಡಿಕೆಗಳು ಸಮರ್ಪಕವಾಗಿ ಸಾಧ್ಯವಾಗಿಲ್ಲ. ನಿಮ್ಮ ಹೂಡಿಕೆಯಿಂದ ಹೆಚ್ಚುವರಿ ಏನನ್ನಾದರೂ ಪಡೆಯಲು, ಷೇರು ಮಾರುಕಟ್ಟೆಯು ಷೇರುಗಳು ಮತ್ತು ಒಪ್ಷನ್ಸ್ ಗಳಂತಹ ಸೆಕ್ಯೂರಿಟಿಗಳ ಖರೀದಿ ಮತ್ತು ವ್ಯಾಪಾರದ ಲಾಭದಾಯಕ ಅವಕಾಶವನ್ನು ಒದಗಿಸುತ್ತದೆ.

ಷೇರು ಮಾರುಕಟ್ಟೆಯ ಮೂಲಭೂತ ವಿಷಯಗಳಾದ , ಟ್ರೇಡಿಂಗ್, ಹಣಕಾಸಿನ ಸಾಧನಗಳ ವಿಧಗಳು ಮತ್ತು ನಿಯಮಿತ ಹೂಡಿಕೆದಾರರಿಗಿಂತ ಹೆಚ್ಚು ಉತ್ತಮ ಆದಾಯವನ್ನು ನೀಡುವ ಯಶಸ್ವಿ ಟ್ರೇಡಿಂಗ್ ತಂತ್ರಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಷೇರು ಮಾರುಕಟ್ಟೆಯ ಕೆಲಸವನ್ನು ಅರ್ಥಮಾಡಿಕೊಳ್ಳಲು ಏಂಜಲ್ ಒನ್ ಪ್ರತಿಯೊಬ್ಬ ಉತ್ತಮ ಹೂಡಿಕೆದಾರರಿಗೆ ಶಕ್ತಿ ನೀಡುತ್ತದೆ.

ಕಂಪನಿಯು ಆರಂಭಿಕ ಪಬ್ಲಿಕ್ ಆಫರ್ (IPO) ಜೊತೆಗೆ ಹೊರಬರುವಾಗ ಅದನ್ನು ಪ್ರೈಮರಿ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. IPO ಯ ಸಾಮಾನ್ಯ ಉದ್ದೇಶವೆಂದರೆ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಪಟ್ಟಿ ಮಾಡುವುದು. ಷೇರು ಪಟ್ಟಿ ಮಾಡಿದ ನಂತರ ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅನ್ನು ಆರಂಭಿಸುತ್ತದೆ. ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೆಚ್ಚಾಗಿ ಯಾವುದೇ ಇತರ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವಂತೆಯೇ ಆಗಿದೆ.

ಮಾರುಕಟ್ಟೆಯು ಷೇರಿನ ಬೆಲೆಯನ್ನು ನಿರ್ಧರಿಸುತ್ತದೆ. ಸಾಧಾರಣವಾಗಿ, ಕಂಪನಿಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವಾಗ ಅಥವಾ ಅದು ಉತ್ತಮ ಲಾಭವನ್ನು ಗಳಿಸುತ್ತಿರುವಾಗ ಅಥವಾ ಅದು ಹೊಸ ಆರ್ಡರ್‌ಗಳನ್ನು ಪಡೆದಾಗ ಷೇರಿನ ಬೆಲೆಗಳು ಹೆಚ್ಚಾಗುತ್ತವೆ. ಸ್ಟಾಕ್‌ಗೆ ಬೇಡಿಕೆ ಹೆಚ್ಚಾದಂತೆ ಹೆಚ್ಚಿನ ಹೂಡಿಕೆದಾರರು ಸ್ಟಾಕ್ ಅನ್ನು ಹೆಚ್ಚಿನ ಬೆಲೆಗೆ ಖರೀದಿಸಲು ಬಯಸುತ್ತಾರೆ ಮತ್ತು ಅದರ ಬೆಲೆ ಏರುತ್ತದೆ. ಷೇರಿನ ಬೆಲೆಯನ್ನು ಬೇಡಿಕೆ ಮತ್ತು ಪೂರೈಕೆಯಿಂದ ನಿರ್ಧರಿಸಲಾಗುತ್ತದೆ.

English summary

Nifty Ends Above 18,100, Sensex Gains 767 pts Led By IT, Power, Realty Stocks

BSE Sensex and Nifty 50 snapped 3-day losing streak and settled near day’s highs levels on Friday. BSE Sensex rallied 767 points or 1.3 per cent to end at 60,686, while Nifty 50 index soared 230 points or 1.3 per cent to settle at 18,102.
Story first published: Friday, November 12, 2021, 18:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X