For Quick Alerts
ALLOW NOTIFICATIONS  
For Daily Alerts

ನಿಫ್ಟಿ ಸೂಚ್ಯಂಕ 14 ಸಾವಿರ ಪಾಯಿಂಟ್ ಸಮೀಪ ದಿನಾಂತ್ಯ

By ಅನಿಲ್ ಆಚಾರ್
|

ವಾಹನ ಹಾಗೂ ಲೋಹ ವಲಯದ ಷೇರುಗಳ ಬೆಂಬಲದೊಂದಿಗೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗೆಲುವಿನ ಓಟವನ್ನು ಮುಂದುವರಿಸಿವೆ. ಡಿಸೆಂಬರ್ 30ನೇ ತಾರೀಕಿನ ಬುಧವಾರದಂದು ಸೆನ್ಸೆಕ್ಸ್ 133.14 ಪಾಯಿಂಟ್ ಗಳ ಏರಿಕೆಯೊಂದಿಗೆ 47,746.22 ಪಾಯಿಂಟ್ ನೊಂದಿಗೆ ದಿನಾಂತ್ಯ ಕಂಡಿದ್ದರೆ, ನಿಫ್ಟಿ ಸೂಚ್ಯಂಕವು 14,000 ಪಾಯಿಂಟ್ ಸಮೀಪ ವ್ಯವಹಾರ ಚುಕ್ತಾ ಆಗಿದೆ.

 

ನಿಫ್ಟಿಯ ವಾಹನ ಮತ್ತು ಲೋಹದ ಸೂಚ್ಯಂಕಗಳು ತಲಾ 1% ಏರಿಕೆ ಕಂಡವು. ಇನ್ ಫ್ರಾಸ್ಟ್ರಕ್ಚರ್ ಸೂಚ್ಯಂಕವು 0.6% ಹೆಚ್ಚಳವಾಗಿದ್ದರೆ, ಪಿಎಸ್ ಯು ಬ್ಯಾಂಕಿಂಗ್ ಮತ್ತು ಫಾರ್ಮಾಸ್ಯುಟಕಲ್ಸ್ ಕಂಪೆನಿ ಷೇರುಗಳಲ್ಲಿ ಮಾರಾಟ ಕಂಡುಬಂತು. ಕ್ಯಾಪಿಟಲ್ ಗೂಡ್ಸ್ ಮತ್ತು ಎಫ್ ಎಂಸಿಜಿ ವಲಯದ ಷೇರುಗಳು ಏರಿಕೆಯೊಂದಿಗೆ ಮುಕ್ತಾಯ ಕಂಡವು.

 

2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ 2020ರಲ್ಲಿ ಮೊಗೆಮೊಗೆದು ನೋಟು ಕೊಟ್ಟ "ಚಿಲ್ಲರೆ" ಷೇರುಗಳು

250ಕ್ಕೂ ಹೆಚ್ಚು ಕಂಪೆನಿಯ ಷೇರುಗಳು ಬಿಎಸ್ ಇಯಲ್ಲಿ ಹೊಸದಾಗಿ ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಅಲ್ಟ್ರಾಟೆಕ್ ಸಿಮೆಂಟ್

ಶ್ರೀ ಸಿಮೆಂಟ್ಸ್

ಗ್ರಾಸಿಮ್

ಯುಪಿಎಲ್

ಬಜಾಜ್ ಫೈನಾನ್ಸ್

ನಿಫ್ಟಿ ಸೂಚ್ಯಂಕ 14 ಸಾವಿರ ಪಾಯಿಂಟ್ ಸಮೀಪ ದಿನಾಂತ್ಯ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಸನ್ ಫಾರ್ಮಾ

ಆಕ್ಸಿಸ್ ಬ್ಯಾಂಕ್

ಭಾರ್ತಿ ಏರ್ ಟೆಲ್

ಟಿಸಿಎಸ್

English summary

Nifty Index Closes Near 14000 Point Mark

Share market index nifty closes near 14000 point mark on December 30, 2020.
Story first published: Wednesday, December 30, 2020, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X