2 ಬಿಲಿಯನ್ ಡಾಲರ್ ವಂಚನೆ ಮಾಡಿರುವ ಪ್ರಮುಖ ಆರೋಪಿ, ವಜ್ರಾಭರಣ ವ್ಯಾಪಾರಿಯೂ ಆಗಿರುವ ನೀರವ್ ಮೋದಿಯನ್ನು ಮುಂಬೈನ ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಪರಾರಿಯಾದ ಆರ್ಥಿಕ ಅಪರಾಧಿ' ಎಂದು ಘೋಷಿಸಿದೆ. ಮದ್ಯದ ದೊರೆ ವಿಜಯ್ ಮಲ್ಯ ನಂತರ, ನೀರವ್ ಮೋದಿ ಈ ಅಪರಾಧಕ್ಕೆ ಒಳಗಾದವರಲ್ಲಿ ಎರಡನೆಯವರು. ಕಳೆದ ವರ್ಷ, 2018ರಲ್ಲಿ ಇಂತಹುದೇ ಆರೋಪಕ್ಕೆ ಮಲ್ಯ ಒಳಗಾಗಿದ್ದರು.
ಪಿಎಂಎಲ್ಎ (ಪ್ರಿವೆಂನ್ಶನ್ ಆಫ್ ಮನಿ ಲಾಂಡರಿಂಗ್) ಎನ್ನುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಸಿ.ಬರ್ಡೆ ಅವರು ಡೈಮಂಟೈರ್ ಮತ್ತು ಇಡಿಯ ವಕೀಲರ ವಾದಗಳನ್ನು ಆಲಿಸಿದ ನಂತರ ನೀರವ್ ಮೋದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದಾರೆ.

ಫೆಬ್ರವರಿ 2018ರ ಪಿಎನ್‌ಬಿ ಹಗರಣದಲ್ಲಿ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಾಗಿದ್ದು, 2018 ಜನವರಿಯಲ್ಲಿ ಭಾರತವನ್ನು ತೊರೆದ ನಂತರ ಈ ಪ್ರಕರಣವು ಬೆಳಕಿಗೆ ಬಂದಿತ್ತು.
2019 ರ ಮಾರ್ಚ್ ನಲ್ಲಿ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದ್ದರೂ, ಇನ್ನೂ ಹಸ್ತಾಂತರ ಪ್ರಕ್ರಿಯೆ ಬಾಕಿ ಇದೆ. ಮೆಹುಲ್ ಚೋಕ್ಸಿ ಆಂಟಿಗುವಾದ ಪೌರತ್ವವನ್ನು ಪಡೆದಿದ್ದರೂ, ಆತನನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನಗಳು ನಡೆಯುತ್ತಿವೆ.
ಇಡಿಯ ಪ್ರಕಾರ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರೊಂದಿಗೆ 14,000 ಕೋಟಿ ರುಪಾಯಿಗಳ ವಂಚನೆ ಹಗರಣದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳ ಸಹಭಾಗಿತ್ವ ಕೂಡಾ ಇತ್ತು ಎಂದು ವಂಚನೆ ಪತ್ರಗಳಲ್ಲಿ ಆರೋಪಿಸಲಾಗಿದೆ.
ಎಫ್ಇಒ ಕಾಯ್ದೆಯ ಅಡಿಯಲ್ಲಿ, 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆಯನ್ನು ಒಳಗೊಂಡ ಒಬ್ಬ ಅಪರಾಧಿಯ ವಿರುದ್ದ ವಾರಂಟ್ ಜಾರಿಗೆ ಬಂದಿದ್ದು, ಆ ವ್ಯಕ್ತಿಯು ದೇಶವನ್ನು ತೊರೆದು, ಆತ ತನ್ನ ದೇಶಕ್ಕೆ ಮರಳಲು ನಿರಾಕರಿಸಿದಲ್ಲಿ ಅಂತಹ ವ್ಯಕ್ತಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಬಹುದಾಗಿದೆ.


Click it and Unblock the Notifications