ಈ ಹಿಂದೆ ಅತೀ ದೀರ್ಘವಾದ ಬಜೆಟ್ ಭಾಷಣ ಮಾಡಿ ದಾಖಲೆಯನ್ನು ಸೃಷ್ಟಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗ ಅತೀ ಚಿಕ್ಕದಾದ ಬಜೆಟ್ ಭಾಷಣದ ಮಾಡಿದ್ದಾರೆ. ಫೆಬ್ರವರಿ 1ರಂದು ಮಂಡಿಸಲಾದ 2024ರ ಮಧ್ಯಂತರ ಬಜೆಟ್‌ನಲ್ಲಿ ಸಚಿವರು ಅತೀ ಚೊಕ್ಕದಾಗಿ ಬಜೆಟ್ ಭಾಷಣ ಮಾಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಆರಂಭವಾದ ಭಾಷಣ ಒಂದು ಗಂಟೆಗೂ ಮುನ್ನವೇ ಮುಗಿದಿತ್ತು. ಭಾಷಣವು ನಿಖರವಾಗಿ 58 ನಿಮಿಷಗಳ ಕಾಲ ಮಾಡಲಾಗಿದೆ. ಇಲ್ಲಿಯವರೆಗೆ, ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆರು ಬಜೆಟ್‌ಗಳಲ್ಲಿ 2023 ರಲ್ಲಿ ಅವರು 87 ನಿಮಿಷಗಳ ಕಾಲ ಮಾತನಾಡಿದ್ದು ಅವರ ಚಿಕ್ಕ ಭಾಷಣವಾಗಿತ್ತು. ಈಗ ಈ ಭಾಷಣ ಅತೀ ಚಿಕ್ಕದಾಗಿದೆ.

ನಿರ್ಮಲಾ ಬಜೆಟ್ ಸಮಯ
* 2019: 140 ನಿಮಿಷ
* 2020: 160 ನಿಮಿಷ
* 2021: 100 ನಿಮಿಷ
* 2022: 91 ನಿಮಿಷ
* 2023: 87 ನಿಮಿಷ
* 2024: 58 ನಿಮಿಷ
ಸುದೀರ್ಘ ಬಜೆಟ್ ಭಾಷಣ ಯಾವುದು?
ಅತೀ ದೀರ್ಘವಾದ ಬಜೆಟ್ ವಿಚಾರಕ್ಕೆ ಬಂದಾಗ ನಿರ್ಮಲಾ ಸೀತಾರಾಮನ್ ಈ ದಾಖಲೆಯನ್ನು ಬರೆದವರಾಗಿದ್ದಾರೆ. 2020ರಲ್ಲಿ ನಿರ್ಮಲಾ ಸುಮಾರು 2.42 ಗಂಟೆಗಳ ಕಾಲ ಭಾಷಣ ಮಾಡಿದ್ದರು. ಬಜೆಟ್ ಭಾಷಣ ಮಾಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅಸ್ವಸ್ಥರಾಗಿದ್ದರು. ನಂತರ ಉಳಿದ ಭಾಷಣವನ್ನು ಸ್ಪೀಕರ್ ಮಾಡಿದರು. ಈ ಭಾಷಣವು ಜುಲೈ 2019 ರಲ್ಲಿ ಅವರು ಮಾಡಿದ 2 ಗಂಟೆ 17 ನಿಮಿಷಗಳ ಸುದೀರ್ಘ ಭಾಷಣಕ್ಕಿಂತ ದೀರ್ಘವಾಗಿತ್ತು.
ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ 1977 ರಲ್ಲಿ ಕೇವಲ 800 ಪದಗಳಲ್ಲಿ ಬಜೆಟ್ ಬಾಷಣ ಮಾಡಿದರು. ಇಲ್ಲಿಯವರೆಗಿನ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದು ಈ ಭಾಷಣವನ್ನು ಪರಿಗಣಿಸಲಾಗಿದೆ.
ಪದಗಳ ಸಂಖ್ಯೆಗೆ ಸಂಬಂಧಿಸಿದಂತೆ, ನಾವು ಹೋಲಿಕೆ ಮಾಡುವುದಾದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವರು 1991 ರಲ್ಲಿ ಮಾಡಿದ ಬಜೆಟ್ ಭಾಷಣವು 18,650 ಪದಗಳನ್ನು ಒಳಗೊಂಡಿರುವ ಸುದೀರ್ಘ ಬಜೆಟ್ ಭಾಷಣವಾಗಿದೆ.
ದಿವಂಗತ ಆರ್ ಕೆ ಷಣ್ಮುಖಂ ಚೆಟ್ಟಿಯವರ ಮೊದಲ ಕೇಂದ್ರ ಬಜೆಟ್ ಭಾಷಣವು ಚಿಕ್ಕದಾಗಿತ್ತು. ಇದು ಕೇವಲ 39 ಪ್ಯಾರಾಗಳನ್ನು ಹೊಂದಿತ್ತು. ಈ ಬಾರಿ ನಿರ್ಮಲಾ ಸೀತಾರಾಮನ್ ಮಾಡಿರುವ ಭಾಷಣವು ಅತೀ ಚಿಕ್ಕದಾದ ಬಜೆಟ್ ಭಾಷಣವಾಗಿದೆ ಎಂದು ಕಾಂಗ್ರೆಸ್ ಎಂಪಿ ಶಶಿ ತರೂರ್ ಹೇಳಿದ್ದಾರೆ.


Click it and Unblock the Notifications