ಮುಂಬೈ, ಏಪ್ರಿಲ್ 10: ಉದ್ಯಮಿ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇವರಿಗಿದೆ. 9,74,703 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಮುಖೇಶ್ ಅಂಬಾನಿಯವರು ತಮ್ಮ ಪತ್ನಿ ನೀತಾ ಅಂಬಾನಿ ಮತ್ತು ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಭಾರತದ ಅತ್ಯಂತ ದುಬಾರಿ ಮನೆ ಎಂದೇ ಖ್ಯಾತವಾದ ಅಂಬಾನಿ ಹೌಸ್ ಆಂಟಿಲಿಯಾದಲ್ಲಿ ವಾಸವಾಗಿದ್ದಾರೆ. ಈ ಐಷಾರಾಮಿ ಮನೆಯ ಅಂದಾಜು ಮೌಲ್ಯ 15,000 ಕೋಟಿ ರೂ. ಆಗಿದೆ.
ಇದಲ್ಲದೇ ಅಂಬಾನಿ ಕುಟುಂಬವು ಅನೇಕ ಐಷಾರಾಮಿ ಹಾಗೂ ದುಬಾರಿ ಕಾರುಗಳ ಸಂಗ್ರಹದಿಂದ ಹಿಡಿದು 850 ಕೋಟಿ ರೂ. ಮೌಲ್ಯದ ಖಾಸಗಿ ಜೆಟ್‌ಗಳವರೆಗೆ ಒಡೆತನ ಹೊಂದಿದ್ದಾರೆ. ಇದೀಗ ಆ ಸಂಗ್ರಹಕ್ಕೆ ಹೊಸ ಸೇರ್ಪಡೆ ನೀತಾ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್.

ವರದಿಗಳ ಪ್ರಕಾರ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB ಅನ್ನು ಖರೀದಿಸಿದ್ದಾರೆ, ಇದರ ಮೌಲ್ಯ 12 ಕೋಟಿ ರೂ. ಆಗಿದೆ. ರೋಸ್ ಕ್ವಾರ್ಟ್ಜ್ ಹೊರಭಾಗ ಮತ್ತು ಆರ್ಕಿಡ್ ವೆಲ್ವೆಟ್ ಇಂಟೀರಿಯರ್ ಹೊಂದಿರುವುದೇ ಈ ಕಾರಿನ ವಿಶೇಷತೆ . ಇದರ ಜೊತೆಗೆ, ನೀತಾ ಅಂಬಾನಿಯವರ ಈ ಅತಿ ದುಬಾರಿ ರೋಲ್ಸ್ ರಾಯ್ಸ್ ಗೋಲ್ಡ್ SoE, ಡಿನ್ನರ್ ಪ್ಲೇಟ್ ವೀಲ್ಸ್ ಮತ್ತು NMA ಮೊದಲಕ್ಷರಗಳನ್ನು ಹೆಡ್‌ರೆಸ್ಟ್‌ಗಳಲ್ಲಿ ಎಂಬ್ರಾಯಿಡ್ ಮಾಡಲಾಗಿದೆ.
ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB 6.75-ಲೀಟರ್ V12 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಇದು ಗರಿಷ್ಠ ವೇಗ 571 Bhp ಮತ್ತು 900 Nm ಪೀಕ್ ಟಾರ್ಕ್ ಆಗಿದೆ. ಬಿಗಿ ಭದ್ರತೆಯಲ್ಲಿ ಮುಂಬೈನ ರಸ್ತೆಯಲ್ಲಿ ನೀತಾ ಅಂಬಾನಿಯವರ ಹೊಸ 12 ಕೋಟಿ ರೂ. ರೋಲ್ಸ್ ರಾಯ್ಸ್‌ನ ಸಾಗುತ್ತಿರುವ ವೀಡಿಯೊ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಇನ್ನು, ಮುಖೇಶ್ ಅಂಬಾನಿ ಇಕಳೆದ ದೀಪಾವಳಿಯಂದು ತಮ್ಮ ಪತ್ನಿ ನೀತಾ ಅಂಬಾನಿಗೆ ಭಾರತದ ಅತ್ಯಂತ ದುಬಾರಿ ಎಸ್‌ಯುವಿ, 10 ಕೋಟಿ ರೂ.ಗಳ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಉಡುಗೊರೆಯಾಗಿ ನೀಡಿ ಕುಟುಂಬದ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಸೇರಿಸಿದರು.
ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ ಮತ್ತು ದೇಶದಲ್ಲಿ ಕೆಲವೇ ಸೆಲೆಬ್ರಿಟಿಗಳು ಈ ವಿಲಕ್ಷಣ ಕಾರನ್ನು ಹೊಂದಿದ್ದಾರೆ. ಭಾರತದಲ್ಲಿನ ಜನಪ್ರಿಯ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಮಾಲೀಕರಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಕೂಡಾ ಒಬ್ಬರಾಗಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ಇತರ ರೋಲ್ಸ್ ರಾಯ್ಸ್ SUV ಗೆ ಹೋಲಿಸಿದರೆ ನೀತಾ ಅಂಬಾನಿಯವರ ಈ ಹೊಸ SUV ಕಿತ್ತಳೆ ಬಣ್ಣದ ವಿಭಿನ್ನ ಬಣ್ಣ ಹೊಂದಿದೆ.


Click it and Unblock the Notifications