ದೇಶ ಪ್ರಗತಿಯಲ್ಲಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ದೇಶದಲ್ಲಿ ಜನರ ಖರ್ಚು ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಬಡತನ ಶೇಕಡಾ 5ರಷ್ಟು ಕಡಿಮೆ ಆಗಿದೆ. ಅಲ್ಲದೆ ಜನರು ಹಣವನ್ನು ವ್ಯಯ ಮಾಡುವ ಮಾದರಿ ಬದಲಾಗಿದೆ ಎಂದು ನೀತಿ ಆಯೋಗದ ಅಧ್ಯಕ್ಷ ಬಿವಿಆರ್ ಸುಬ್ರಮಣ್ಯಂ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿನ ತಲಾ ವೆಚ್ಚವು 2011-12 ರಲ್ಲಿ ರೂ 2630 ರಿಂದ 2022-23 ರಲ್ಲಿ ರೂ 6459 ಕ್ಕೆ ಶೇಕಡಾ 146 ರಷ್ಟು ಹೆಚ್ಚಾಗಿದೆ. ಹಣದುಬ್ಬರ ಮತ್ತು ಬಡತನದ ಅಂಕಿ-ಅಂಶಗಳನ್ನು ತುಲನೆ ಮಾಡಿದರೆ ಬಡತನ ನಿಯಂತ್ರಣಕ್ಕೆ ಬರುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ನೀತಿ ಆಯೋಗದ ಅಧ್ಯಕ್ಷ ಬಿವಿಆರ್ ಸುಬ್ರಮಣ್ಯಂ ತಿಳಿಸಿದ್ದಾರೆ.

ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿದ ಬಿವಿಆರ್ ಸುಬ್ರಮಣ್ಯಂ ಅವರು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. 2022-23ನೇ ಸಾಲಿಗೆ ಎನ್‌ಎಸ್‌ಎಸ್‌ಒ (ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ) ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ, 2011-12ಕ್ಕೆ ಹೋಲಿಸಿದರೆ ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳ ತಲಾ ಮಾಸಿಕ ವೆಚ್ಚವು ದ್ವಿಗುಣವಾಗಿದೆ ಎಂದು ಹೇಳಲಾಗಿದೆ. ಈ ಅಂಕಿ ಅಂಶಗಳ ಆಧಾರದ ಮೇಲೆ ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂದಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ವೇಗವಾಗಿ ಹೆಚ್ಚುತ್ತಿದೆ. ಬಡತನ ಕಡಿತ ಕ್ರಮಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಇನ್ನು ಈ ಸಮೀಕ್ಷೆಯಲ್ಲಿ 20 ವಿಭಾಗಗಳಲ್ಲಿ ವಿಂಗಡಿಸಲಾಗಿದೆ ಎಂದು NITI ತಿಳಿಸಿದೆ. ಈ ವರದಿಯ ಆಧಾರದಲ್ಲಿ 2011-12ರಲ್ಲಿ ಗ್ರಾಮಗಳಲ್ಲಿ ತಿಂಗಳಿಗೆ 1430 ರೂ. ಹಣವನ್ನು ಖರ್ಚು ಮಾಡುತ್ತಿದ್ದರು. ಈ ಅಂಕಿ ಅಂಶ 2022-23ರಲ್ಲಿ 3773 ರೂ. ಬಂದು ನಿಂತಿದ್ದು, ಕಳೆದ 9 ವರ್ಷದಲ್ಲಿ 64 ಪ್ರತಿಶತದಷ್ಟು ಹೆಚ್ಚಾಗಿದೆ.

ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು ಶೀಘ್ರದಲ್ಲೇ ವಿವರವಾದ ವಿಶ್ಲೇಷಣೆಯನ್ನು ಬಿಡುಗಡೆ ಮಾಡುತ್ತಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಳಕೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಆರ್ಥಿಕ ಪ್ರಗತಿಯು ನಗರಗಳನ್ನು ಮಾತ್ರವಲ್ಲದೆ ಹಳ್ಳಿಗಳನ್ನೂ ತಲುಪಿದೆ.
ಮುಂಬರುವ ವರ್ಷಗಳಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ಬಳಕೆ ಸಮಾನವಾಗಿರುತ್ತದೆ ಎಂದು ಬಿವಿಆರ್ ಸುಬ್ರಮಣ್ಯಂ ಹೇಳಿದರು. ಧಾನ್ಯಗಳು ಮತ್ತು ಆಹಾರದ ಬಳಕೆ ಕಡಿಮೆಯಾಗಿದೆ ಎಂದು NSSO ಸಮೀಕ್ಷೆ ಬಹಿರಂಗಪಡಿಸಿದೆ. ಇದು ಜನರಿಗೆ ಹೆಚ್ಚುವರಿ ಆದಾಯವನ್ನು ಪಡೆಯುತ್ತಿದೆ ಮತ್ತು ಸಮೃದ್ಧಿಯೂ ಹೆಚ್ಚಾಗಿದೆ ಎಂದು ತೋರಿಸುತ್ತದೆ. ಜನರು ಈಗ ಹಾಲು, ಹಣ್ಣು ಮತ್ತು ತರಕಾರಿಗಳಿಗೆ ಖರ್ಚು ಮಾಡುತ್ತಿದ್ದಾರೆ. ಜನರು ಈಗ ಸಂಸ್ಕರಿಸಿದ ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


Click it and Unblock the Notifications