For Quick Alerts
ALLOW NOTIFICATIONS  
For Daily Alerts

2 ಸಾವಿರ ರುಪಾಯಿ ನೋಟು ಮುದ್ರಣದ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು?

By ಅನಿಲ್ ಆಚಾರ್
|

ಎರಡು ಸಾವಿರ ರುಪಾಯಿ ಮುಖಬೆಲೆಯ ನೋಟನ್ನು ಮುದ್ರಣ ನಿಲ್ಲಿಸುವ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ ಎಂದು ಹಣಕಾಸು ಸಚಿವಾಲಯವು ಶನಿವಾರ ಲೋಕಸಭೆಗೆ ಮಾಹಿತಿ ನೀಡಿದೆ. ಈ ಬಗ್ಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಲಿಖಿತ ಉತ್ತರ ನೀಡಿದ್ದಾರೆ.

2000 ರುಪಾಯಿ ಮುಖಬೆಲೆಯ ನೋಟುಗಳು ಹೊಸದಾಗಿ ಮುದ್ರಣ ಮಾಡಿಲ್ಲ: ಆರ್ ಬಿಐ2000 ರುಪಾಯಿ ಮುಖಬೆಲೆಯ ನೋಟುಗಳು ಹೊಸದಾಗಿ ಮುದ್ರಣ ಮಾಡಿಲ್ಲ: ಆರ್ ಬಿಐ

ನಿರ್ದಿಷ್ಟವಾದ ಬ್ಯಾಂಕ್ ನೋಟಿನ ಮುದ್ರಣದ ಬಗ್ಗೆ ಆರ್ ಬಿಐ ಜತೆ ಚರ್ಚೆ ನಡೆಸಿದ ನಂತರ ಸರ್ಕಾರ ನಿರ್ಧಾರ ಮಾಡುತ್ತದೆ. ಸಾರ್ವಜನಿಕರ ಬೇಡಿಕೆಯನ್ನೂ ಗಮನಿಸಿ, ಆ ನಿರ್ದಿಷ್ಟ ಮುಖಬೆಲೆಯ ನೋಟಿನ ಮುದ್ರಣವನ್ನು ಮಾಡಲಾಗುವುದು, 2019-20 ಹಾಗೂ 2020- 21ನೇ ಸಾಲಿಗೆ 2 ಸಾವಿರ ರುಪಾಯಿ ಮುಖಬೆಲೆಯ ನೋಟು ಮುದ್ರಣಕ್ಕೆ ಪ್ರೆಸ್ ಗಳ ಬಳಿ ಯಾವ ಬೇಡಿಕೆಯನ್ನೂ ಇಟ್ಟಿಲ್ಲ.

2 ಸಾವಿರ ರುಪಾಯಿ ನೋಟು ಮುದ್ರಣ ನಿಲ್ಲಿಸುವ ಬಗ್ಗೆ ತೀರ್ಮಾನಿಸಿಲ್ಲ

2 ಸಾವಿರ ರುಪಾಯಿ ನೋಟು ಮುದ್ರಣ ನಿಲ್ಲಿಸುವ ಬಗ್ಗೆ ತೀರ್ಮಾನಿಸಿಲ್ಲ

ಆದರೂ ಎರಡು ಸಾವಿರ ರುಪಾಯಿ ಮುಖಬೆಲೆಯ ನೋಟು ಮುದ್ರಣ ನಿಲ್ಲಿಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಮಾರ್ಚ್ 31, 2020ಕ್ಕೆ ಎರಡು ಸಾವಿರ ರುಪಾಯಿ ಮುಖಬೆಲೆಯ 27,398 ಲಕ್ಷ ತುಂಡುಗಳಿದ್ದವು. ಅದಕ್ಕೆ ಒಂದು ವರ್ಷದ ಹಿಂದೆ 32,910 ಲಕ್ಷ ತುಂಡುಗಳಿದ್ದವು ಎಂದು ಠಾಕೂರ್ ಮಾಹಿತಿ ನೀಡಿದ್ದಾರೆ.

ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು

ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು

ಕೊರೊನಾ ನಿಯಂತ್ರಿಸುವ ಸಲುವಾಗಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದ ಅವಧಿಯಲ್ಲಿ ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿತ್ತು. ಆ ನಂತರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆ ನೋಟು ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಗಳು ಹಂತಹಂತವಾಗಿ ಕಾರ್ಯಾಚರಣೆ ಆರಂಭಿಸಿದವು ಎಂದು ಅವರು ಹೇಳಿದ್ದಾರೆ.

ಬ್ಯಾಂಕ್ ವಂಚನೆ ಪ್ರಮಾಣ ಕಡಿಮೆಯಾಗಿದೆ
 

ಬ್ಯಾಂಕ್ ವಂಚನೆ ಪ್ರಮಾಣ ಕಡಿಮೆಯಾಗಿದೆ

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಜತೆ ಚರ್ಚೆ ವೇಳೆ ಕುಟುಂಬ ಪಿಂಚಣಿ (ಫ್ಯಾಮಿಲಿ ಪೆನ್ಷನ್) ಪರಿಷ್ಕರಣೆ ಬಗ್ಗೆ ಬೇಡಿಕೆ ಇಡಲಾಗಿತ್ತು. ಆ ಬಗ್ಗೆ ಮಾಡಲಾದ ಶಿಫಾರಸುಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿಸಲಾಗಿದೆ ಎಂದರು. ಸಾರ್ವಜನಿಕ ಬ್ಯಾಂಕ್ ಗಳಲ್ಲಿ ವಂಚನೆ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ಅಂಕಿ- ಅಂಶಗಳನ್ನು ಮುಂದಿಟ್ಟರು. 2013- 14ರಲ್ಲಿ 0.96% ಇದ್ದ ವಂಚನೆ ಪ್ರಕರಣಗಳು 2019- 20ರಲ್ಲಿ 0.15% ಬಂದಿದೆ ಎಂದು ಹೇಳಿದರು.

English summary

No Decision On Discontinue Of Printing 2000 Rupees Note: Union Minister Thakur

Union minister Anurag Thakur on Saturday said, no decision on discontinue of printing 2000 rupees note.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X