ಕೊರೊನಾ ಲಾಕ್‌ಡೌನ್‌ನಿಂದ ಹಣಕಾಸು ವರ್ಷ ವಿಸ್ತರಣೆ ಇಲ್ಲ, ಮಾರ್ಚ್‌ 31ಕ್ಕೆ ಮುಕ್ತಾಯ :ಕೇಂದ್ರ ಸರ್ಕಾರ

ಕೊರೊನಾವೈರಸ್‌ ಹರಡುವಿಕೆಯಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

2019-20ನೇ ಸಾಲಿನ ಹಣಕಾಸು ವರ್ಷದ ಅವಧಿಯು ಯಥಾಪ್ರಕಾರ ಪ್ರತಿವರ್ಷದಂತೆ ಈ ವರ್ಷ ಕೂಡ ಇಂದಿಗೆ(ಮಾರ್ಚ್31) ಮುಕ್ತಾಯವಾಗಲಿದೆ. ಈ ಹಿಂದೆ ಪ್ರಸಕ್ತ ಹಣಕಾಸು ವರ್ಷ ಜುಲೈ 1ರಿಂದ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಆದರೆ ಹಣಕಾಸು ವರ್ಷವನ್ನು ವಿಸ್ತರಿಸುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕೊರೊನಾ ಲಾಕ್‌ಡೌನ್‌ನಿಂದ ಹಣಕಾಸು ವರ್ಷ ವಿಸ್ತರಣೆ ಇಲ್ಲ

ಈ ಸಂಬಂಧ ಕಳೆದ ಸಂಜೆ ಗೆಜೆಟೆಡ್ ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಮುದ್ರಾಂಕ ತೆರಿಗೆ ದಿನಾಂಕವನ್ನು ಏಪ್ರಿಲ್ 1ರಿಂದ ಜುಲೈ1ಕ್ಕೆ ವಿಸ್ತರಿಸಿದೆ. ಭಾರತೀಯ ಮುದ್ರಾಂಕ ಕಾಯ್ದೆ(ಐಎಸ್ಎ)ಗೆ ತಿದ್ದುಪಡಿ ತಂದಿರುವ ಹಣಕಾಸು ಸಚಿವಾಲಯ ಅದನ್ನು ಜುಲೈ 1ಕ್ಕೆ ಮುಂದೂಡಿದೆ. ಈ ತಿದ್ದುಪಡಿ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

ಕೊರೊನಾವೈರಸ್ ಏಕಾಏಕಿ ಉಂಟಾಗಿದ್ದರಿಂದ ಹಣಕಾಸು ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಹೀಗಾಗಿ ಹಣಕಾಸು ವರ್ಷವನ್ನು ಮೂರು ತಿಂಗಳು ವಿಸ್ತರಿಸಬೇಕೆಂದು, 15 ತಿಂಗಳ ವರ್ಷವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಣಕಾಸು ಉತ್ತಮವಾಗಿ ಕಾಣುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಕೇಂದ್ರ ಸರ್ಕಾರವು ಯಾವುದೇ ಹಣಕಾಸಿನ ಅವಧಿಯ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+